AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ತೆರೆಗೆ ಬರುತ್ತಿವೆ ಹಲವು ಸಿನಿಮಾ, ರೀ ರಿಲೀಸ್ ಸಹ ಇದೆ

Movie Release: ಮತ್ತೊಂದು ಶುಕ್ರವಾರ ಬಂದಿದೆ. ಮತ್ತೊಮ್ಮೆ ಹಲವು ಸಿನಿಮಾಗಳು ಗೆಲುವಿನ ಭರವಸೆಯಲ್ಲಿ ಬಿಡುಗಡೆ ಆಗಿವೆ. ಕನ್ನಡದ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ತಿಂಗಳುಗಳೇ ಆಗಿ ಹೋಗಿವೆ. ಹಾಗೆಂದು ಚಿತ್ರಮಂದಿರಗಳಲ್ಲಿ ನಿರಾಸೆ ಮೂಡಿಸುವ ಸಿನಿಮಾಗಳು ಇವೆ ಎಂದೇನೂ ಅಲ್ಲ. ಈ ವಾರವೂ ಸಹ ಕೆಲ ಒಳ್ಳೆಯ ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ಒಂದು ರೀ-ರಿಲೀಸ್ ಸಹ ಇದೆ.

ಮಂಜುನಾಥ ಸಿ.
|

Updated on: Jul 03, 2025 | 9:26 AM

Share
ದಲಿತ ಯುವಕನೊಬ್ಬ ‘ಹೆಬ್ಬುಲಿ’ ಸಿನಿಮಾನಲ್ಲಿ ಸುದೀಪ್ ರೀತಿ ಕಟಿಂಗ್ ಮಾಡಿಸಿಕೊಳ್ಳಬೇಕೆಂಬ ಆಸೆಯನ್ನು ನನಸು ಮಾಡಿಕೊಳ್ಳಲು ಪಡುವ ಪಾಡು, ಆತನ ಆಸೆಗೆ ಅಡ್ಡಿಯಾಗುವ ಊರಿನ ಜಾತೀವಾದಿಗಳ ಕತೆ ಒಳಗೊಂಡ ಸಿನಿಮಾ ‘ಹೆಬ್ಬುಲಿ ಕಟ್’. ಸಿನಿಮಾದ ಟ್ರೈಲರ್ ಅದ್ಭುತವಾಗಿದೆ. ಭೀಮರಾವ್ ನಿರ್ದೇಶನ ಮಾಡಿದ್ದಾರೆ.

1 / 8
ಕಾಡಿಗೆ ಹೋಗಿ ಸಿಕ್ಕಿಹಾಕಿಕೊಂಡು ಅಲ್ಲಿ ನಾ-ನಾ ರೀತಿಯ ಸಮಸ್ಯೆಗಳನ್ನು ಎದುರಿಸುವ ಜೋಡಿಯೊಂದರ ಕತೆ ‘ಜಂಗಲ್-ಮಂಗಲ್’. ನೈಜ ಪಾತ್ರಗಳನ್ನು ಆಧರಿಸಿ ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದೆ. ರಕ್ಷಿತ್ ಕುಮಾರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯಶ್ ಶೆಟ್ಟಿ ನಾಯಕ. ಹರ್ಷಿತಾ ರಾಮಚಂದ್ರ ನಾಯಕಿ.

2 / 8
ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿರುವ ‘ತಪಸ್ಸಿ’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ರವಿಚಂದ್ರನ್ ಅವರಿಗೆ ಸಿನಿಮಾನಲ್ಲಿ ವಿಶೇಷ ಪಾತ್ರ ಇದೆಯಂತೆ. ಅಮ್ರೆಯಾ ಗೋಸ್ವಾಮಿ ಈ ಸಿನಿಮಾದ ನಾಯಕಿ.

3 / 8
ಬೆಂಗಳೂರು ಭೂಗತ ಲೋಕದ ಕತೆ ಒಳಗೊಂಡ ‘ಕ್ಯಾಪಿಟಲ್ ಸಿಟಿ’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾನಲ್ಲಿ ಶರತ್ ಲೋಹಿತಾಶ್ವ, ರವಿಶಂಕರ್, ಸುಮನ್ ನಟಿಸಿದ್ದಾರೆ. ನಾಯಕ ರಾಜೀವ್, ನಾಯಕಿ ಪ್ರೇರಣಾ ಕಂಬಂ. ಮಾಲಾಶ್ರೀ ಅತಿಥಿ ಪಾತ್ರದಲ್ಲಿ ನಟಿಸಿರುವ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ‘ಪೆನ್ ಡ್ರೈವ್’ ಸಹ ಈ ವಾರ ಬಿಡುಗಡೆ ಆಗುತ್ತಿದೆ.

4 / 8
ಹತ್ತು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಕನ್ನಡದ ಕಲ್ಟ್ ಕ್ಲಾಸಿಕ್ ಥ್ರಿಲ್ಲರ್ ಸಿನಿಮಾ ‘ರಂಗಿತರಂಗ’ ಇದೇ ವಾರ ಮರು ಬಿಡುಗಡೆ ಆಗುತ್ತಿದೆ. ಅನುಪ್ ಭಂಡಾರಿ ನಿರ್ದೇಶಿಸಿ ಅವರ ಸಹೋದರ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದ ಈ ಸಿನಿಮಾ ‘ಬಾಹುಬಲಿ’ ಸಿನಿಮಾದ ಎದುರು ಸ್ಪರ್ಧಿಸಿ ದೊಡ್ಡ ಗೆಲುವು ಸಾಧಿಸಿತ್ತು. ಹತ್ತು ವರ್ಷದ ಬಳಿಕವೂ ಸಿನಿಮಾ ತಮ್ಮ ಮ್ಯಾಜಿಕ್ ಅನ್ನು ಉಳಿಸಿಕೊಂಡಿದೆ. ಈ ವಾರ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.

5 / 8
ನಿತಿನ್ ನಟನೆಯ ‘ತಮ್ಮುಡು’ ತೆಲುಗು ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಈ ಸಿನಿಮಾನಲ್ಲಿ ಕನ್ನಡದ ನಟಿ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಅಕ್ಕ-ತಮ್ಮನ ನಡುವೆ ಬಾಂಧವ್ಯದ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಹಲವು ಆಕ್ಷನ್ ಸನ್ನಿವೇಶಗಳು ಸಹ ಇವೆ. ಸಪ್ತಮಿ ಗೌಡ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ.

6 / 8
ಕನ್ನಡದ ನಟಿ ಚೈತ್ರಾ ಆಚಾರ ನಟಿಸಿರುವ ತಮಿಳು ಸಿನಿಮಾ ‘3ಬಿಎಚ್​​ಕೆ’ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಸ್ಟಾರ್ ನಟ ಸಿದ್ಧಾರ್ಥ್ ಈ ಸಿನಿಮಾದ ನಾಯಕ. ಸಿನಿಮಾನಲ್ಲಿ ಶರತ್ ಕುಮಾರ್ ಸಹ ಇದ್ದಾರೆ. ಮಧ್ಯಮ ವರ್ಗದ ಕುಟುಂಬವೊಂದು ಮನೆ ಕಟ್ಟಿಸಲು ಪಡುವ ಕಷ್ಟಗಳ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

7 / 8
ದಶಕಗಳಿಂದಲೂ ಹಾಲಿವುಡ್​ನ ಬ್ಲಾಕ್ ಬಸ್ಟರ್ ಫ್ಯಾಂಟಸಿ ಸಿನಿಮಾ ಸರಣಿ ಆಗಿರುವ ‘ಜುರಾಸಿಕ್ ಪಾರ್ಕ್’ನ ಹೊಸ ಸಿನಿಮಾ ‘ಜುರಾಸಿಕ್ ವರ್ಲ್ಡ್: ರೀಬರ್ತ್’ ಇದೇ ವಾರ ಬಿಡುಗಡೆ ಆಗುತ್ತಿದೆ. ಸ್ಕಾರ್ಲೆಟ್ ಜಾನ್ಸನ್ ಮೊದಲ ಬಾರಿಗೆ ಜುರಾಸಿಕ್ ಸಿನಿಮಾನಲ್ಲಿ ನಟಿಸಿದ್ದಾರೆ. ಜುರಾಸಿಕ್ ಪಾರ್ಕ್​​ನ ಸೃಷ್ಟಿಕರ್ತ ಸ್ಟಿಫನ್ ಸ್ಪೀಲ್​ಬರ್ಗ್ ಈ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್.

8 / 8