AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೊದಲ ಸಲ ಲವ್ ಮಾಡಿದ್ದೇನೆ’: ‘ಜಂಗಲ್ ಮಂಗಲ್’ ಬಗ್ಗೆ ಉಗ್ರಂ ಮಂಜು ಮಾತು

ರಕ್ಷಿತ್ ಕುಮಾರ್ ನಿರ್ದೇಶನ ಮಾಡಿರುವ ‘ಜಂಗಲ್ ಮಂಗಲ್’ ಸಿನಿಮಾದಲ್ಲಿ ಉಗ್ರಂ ಮಂಜು ಅವರು ನಟಿಸಿದ್ದಾರೆ. ಪಾತ್ರದ ಬಗ್ಗೆ ಅವರು ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ಯಶ್ ಶೆಟ್ಟಿ ಅವರು ಹೀರೋ ಆಗಿದ್ದಾರೆ. ಜುಲೈ 4ಕ್ಕೆ ತೆರೆಕಾಣುತ್ತಿರುವ ಈ ಸಿನಿಮಾದ ಕಂಟೆಂಟ್ ಬಗ್ಗೆ ಉಗ್ರಂ ಮಂಜು ಅವರಿಗೆ ತುಂಬಾ ಭರವಸೆ ಇದೆ.

‘ಮೊದಲ ಸಲ ಲವ್ ಮಾಡಿದ್ದೇನೆ’: ‘ಜಂಗಲ್ ಮಂಗಲ್’ ಬಗ್ಗೆ ಉಗ್ರಂ ಮಂಜು ಮಾತು
Ugramm Manju, Harshitha Ramachandra, Yash Shetty
ಮದನ್​ ಕುಮಾರ್​
|

Updated on: Jul 03, 2025 | 6:02 PM

Share

ನಟ ಉಗ್ರಂ ಮಂಜು ಅವರು ‘ಬಿಗ್ ಬಾಸ್’ ಶೋ ಮುಗಿಸಿ ಬಂದ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಜಂಗಲ್ ಮಂಗಲ್’ ಸಿನಿಮಾ (Jungle Mangal Kannada Movie) ಜುಲೈ 4ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಯಶ್ ಶೆಟ್ಟಿ (Yash Shetty) ನಾಯಕ. ಉಗ್ರಂ ಮಂಜು ಅವರಿಗೆ ಒಂದು ಪ್ರಮುಖ ಪಾತ್ರವಿದೆ. ಆ ಕುರಿತು ಅವರು ಮಾತಾಡಿದ್ದಾರೆ. ‘ಕೆಲವೊಮ್ಮೆ ನಿರ್ದೇಶಕರು ಒಂದಷ್ಟು ಕಲಾವಿದರನ್ನು ಆಯ್ಕೆಯಾಗಿ ಇಟ್ಟುಕೊಳ್ಳುತ್ತಾರೆ. ಇವರು ಇಲ್ಲ ಎಂದರೆ ಅವರು ಅಂತ 3-4 ಆಯ್ಕೆ ಇಟ್ಟುಕೊಳ್ಳುತ್ತಾರೆ. ಆದರೆ ಜಂಗಲ್ ಮಂಗಲ್ ನಿರ್ದೇಶಕ ರಕ್ಷಿತ್ ಕುಮಾರ್ ಅವರು ಈ ಪಾತ್ರವನ್ನು ನೀವೇ ಮಾಡಬೇಕು ಅಂತ ನನಗೆ ಹೇಳಿದರು. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಟ್ರೇಲರ್​ನಲ್ಲಿ ನನ್ನ ಲುಕ್ ಇದೆ. ಸಿನಿಮಾದಲ್ಲಿ ನನ್ನ ಪಾತ್ರ ಇನ್ನೂ ಮಜವಾಗಿದೆ’ ಎಂದು ಉಗ್ರಂ ಮಂಜು (Ugramm Manju) ಅವರು ಹೇಳಿದ್ದಾರೆ. ಅಲ್ಲದೇ ಪಾತ್ರದ ಬಗ್ಗೆ ಅವರು ಇನ್ನಷ್ಟು ವಿವರ ನೀಡಿದ್ದಾರೆ.

‘ಮೊದಲ ಬಾರಿ ನಾಯಕಿಯನ್ನು ಲವ್ ಮಾಡಲು ನಿರ್ದೇಶಕರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ನಾನು ಮಾತ್ರ ಲವ್ ಮಾಡುತ್ತಿರುತ್ತೇನೆ. ಅವಳು ಮಾಡಲ್ಲ. ಹಾಗಾಗಿ ಈ ಪಾತ್ರ ಮಜವಾಗಿದೆ. ಒಂದಷ್ಟು ಆ್ಯಕ್ಷನ್ ಸೀಕ್ವೆನ್ಸ್ ಕೂಡ ಇದೆ. ಲೊಕೇಷನ್​ಗಳು ವಿಶೇಷವಾಗಿದೆ. ರಿಸ್ಕ್ ತೆಗೆದುಕೊಂಡು ಚಿತ್ರೀಕರಣ ಮಾಡಿದ್ದಾರೆ. ನಿರ್ದೇಶನ ತಂಡವನ್ನು ಮೆಚ್ಚಿಕೊಳ್ಳಬೇಕು’ ಎಂದು ಉಗ್ರಂ ಮಂಜು ಹೇಳಿದ್ದಾರೆ.

‘ಜಂಗಲ್ ಮಂಗಲ್ ಸಿನಿಮಾದಲ್ಲಿ ನನಗೆ ಒಂದು ಪಾತ್ರ ಕೊಟ್ಟಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದಗಳು. ಹಲವು ಭಾಷೆಗಳಲ್ಲಿ ಸಣ್ಣ ಬಜೆಟ್ ಸಿನಿಮಾಗಳು ಹಿಟ್ ಆಗುತ್ತವೆ. ಕಥೆಗೆ ಪ್ರಾಮುಖ್ಯತೆ ಕೊಟ್ಟಿರುತ್ತಾರೆ. ಆ ರೀತಿಯ ಸಿನಿಮಾಗಳಿಗೆ ಜಾಲೆಂಜ್ ಮಾಡುವಂತಹ ಕನ್ನಡದ ಸಿನಿಮಾ ಜಂಗಲ್ ಮಂಗಲ್. ಕನ್ನಡಿಗರು ಮಾತ್ರವಲ್ಲದೇ ಬೇರೆ ಯಾವುದೇ ಭಾಷೆಯವರು ಈ ಸಿನಿಮಾವನ್ನು ನೋಡಿದರೆ ಖಂಡಿತಾ ಮೆಚ್ಚಿಕೊಳ್ತಾರೆ’ ಎಂದು ಉಗ್ರಂ ಮಂಜು ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

‘ಈ ಸಿನಿಮಾದ ನಿರ್ಮಾಣ ಪ್ರಕ್ರಿಯೆಯನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಈ ಪ್ರಾಜೆಕ್ಟ್ ಆದ ಬಳಿಕ ಸಾಕಷ್ಟು ಜನರು ತಾವು ಕೂಡ ಕನ್ನಡ ಸಿನಿಮಾ ಮಾಡಬಹುದು ಎಂಬ ನಂಬಿಕೆ ಪಡೆಯುತ್ತಾರೆ. ಯಾರೋ ಒಬ್ಬ ನಿರ್ಮಾಪಕರು ಮಾಡಿದ ಸಿನಿಮಾ ಅಲ್ಲ. 10-15 ಜನರು ಸೇರಿಕೊಂಡು, ತಾವೇ ಕೂಡಿಟ್ಟ ಹಣವನ್ನು ಹಾಕಿ ಈ ಸಿನಿಮಾ ಮಾಡಿದ್ದಾರೆ. ಈ ರೀತಿಯೂ ಸಿನಿಮಾ ಮಾಡಬಹುದು ಎಂಬುದನ್ನು ಈ ತಂಡ ಸಾಬೀತು ಮಾಡಿದೆ’ ಎಂದಿದ್ದಾರೆ ಮಂಜು.

ಇದನ್ನೂ ಓದಿ: ಕಾಡಿನಲ್ಲಿ ಸಿಕ್ಕಿಹಾಕಿಕೊಂಡ ಹುಡುಗ-ಹುಡುಗಿ ಕಥೆ; ‘ಜಂಗಲ್‌ ಮಂಗಲ್‌’ ಈ ವಾರ ರಿಲೀಸ್

‘ನನ್ನದು ಕಾಮಿಕ್ ವಿಲನ್ ಪಾತ್ರ. ಒಂದಷ್ಟು ಚೇಲಾಗಳನ್ನು ಹಾಕಿಕೊಂಡು ಊರಿನಲ್ಲಿ ಓಡಾಡುವ ವ್ಯಕ್ತಿಯ ಪಾತ್ರ. ಪ್ರತಿ ಕೆಲಸಗಳು ತನ್ನ ಮೂಲಕವೇ ಆಗಬೇಕು, ತಾನು ಹೇಳಿದ್ದೇ ನಡೆಯಬೇಕು ಎಂಬಂತಹ ವ್ಯಕ್ತಿ. ಇಡೀ ಸಿನಿಮಾದಲ್ಲಿ ನನ್ನ ಪಾತ್ರ ಬರುತ್ತದೆ’ ಎಂದು ಉಗ್ರಂ ಮಂಜು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ