‘ಅವರು ಚೆನ್ನಾಗಿದ್ದರೆ ನಾವು ಚೆನ್ನಾಗಿ ಇರ್ತೀವಿ’; ಶಿವಣ್ಣನ ಬಗ್ಗೆ ಶ್ರೀಲೀಲಾ ಮಾತು
Shiva Rajkumar-Sreeleela: ಶ್ರೀಲೀಲಾ ಈಗ ತೆಲುಗು ಚಿತ್ರರಂಗ ಹಾಗೂ ಬಾಲಿವುಡ್ನಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಕನ್ನಡ ಸಿನಿಮಾ ಮೂಲಕವೇ ನಟನೆ ಆರಂಭಿಸಿದ ಶ್ರೀಲೀಲಾ, ಈಗಂತೂ ಕನ್ನಡ ಚಿತ್ರರಂಗವನ್ನು ಮರೆತೇ ಬಿಟ್ಟಿದ್ದಾರೆ ಎಂದುಕೊಂಡಿದ್ದಾರೆ. ಆದರೆ ಇತ್ತೀಚೆಗೆ ಸನ್ ನೆಕ್ಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಅವರು ಶಿವರಾಜ್ ಕುಮಾರ್ ಬಗ್ಗೆ ಗೌರವದಿಂದ ಮಾತನಾಡಿದ್ದಾರೆ.

ಶ್ರೀಲೀಲಾ (Sreeleela) ಅವರು ಕನ್ನಡದ ನಟಿ. ಅವರಿಗೆ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡದ ಕಲಾವಿದರ ಬಗ್ಗೆ ವಿಶೇಷ ಪ್ರೀತಿ ಇದೆ. ಅವರು ಆಗಾಗ ಕನ್ನಡದ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಕನ್ನಡದ ಕಲಾವಿದರ ಬಗ್ಗೆ ವಿಶೇಷ ಪ್ರೀತಿಯನ್ನು ಹೊರಕ್ಕೆ ಹಾಕುತ್ತಾರೆ. ಈಗ ಅವರು ಶಿವರಾಜ್ಕುಮಾರ್ ಬಗ್ಗೆ ವಿಶೇಷ ಪ್ರೀತಿಯನ್ನು ಹೊರ ಹಾಕಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಶಿವರಾಜ್ಕುಮಾರ್ ಅವರಿಗೆ ಈಗ ವಯಸ್ಸು 60ರ ಮೇಲಾಗಿದೆ. ಅಲ್ಲದೆ, ಅವರು ಕ್ಯಾನ್ಸರ್ ಗೆದ್ದು ಬಂದಿದ್ದಾರೆ. ಈ ಕಾರಣದಿಂದ ಎಲ್ಲರೂ ಅವರ ಮೇಲೆ ವಿಶೇಷ ಪ್ರೀತಿಯನ್ನು ತೋರಿಸುತ್ತಾ ಇದ್ದಾರೆ. ಅವರನ್ನು ಎಲ್ಲರೂ ಕೊಂಡಾಡುತ್ತಾ ಇದ್ದಾರೆ. ಈ ಸಮಸ್ಯೆ ಕಾಣಿಸಿಕೊಂಡಾಗ ಧೈರ್ಯದಿಂದ ಹೋರಾಡಿದ್ದನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಶ್ರೀಲೀಲಾ ಕೂಡ ಶಿವಣ್ಣನ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ.
ಉದಯ ಟಿವಿಯ ‘ಚಿತ್ತಾರ ಸ್ಟಾರ್ ಅವಾರ್ಡ್’ ಕಾರ್ಯಕ್ರಮದಲ್ಲಿ ಶ್ರೀಲೀಲಾ ಭಾಗಿ ಆದರು. ‘ನಿಮ್ಮ ಬಗ್ಗೆ ಮಾತನಾಡುವಷ್ಟು ದೊಡ್ಡವರು ನಾನಲ್ಲ. ನೀವು ಚೆನ್ನಾಗಿದ್ದರೆ ನಾನು ಚೆನ್ನಾಗಿ ಇರ್ತೀನಿ’ ಎಂದರು ಶ್ರೀಲೀಲಾ. ಶ್ರೀಲೀಲಾ ಮಾತನ್ನು ಕೇಳಿ ಅವರು ಕೂಡ ಖುಷಿಪಟ್ಟರು. ಈ ವೇಳೆ ಶಿವಣ್ಣ ಭಾವುಕರಾದರು. ಆ ಬಳಿಕ ಫ್ಯಾಮಿಲಿ ಬಗ್ಗೆ ಮಾತನಾಡಿದರು ಶಿವರಾಜ್ಕುಮಾರ್. ಕಷ್ಟದ ಸಮಯದಲ್ಲಿ ಬೆಂಬಲಕ್ಕೆ ನಿಂತ ಎಲ್ಲರಿಗೂ ಅವರು ಧನ್ಯವಾದವನ್ನು ಹೇಳಿದ್ದಾರೆ.
View this post on Instagram
ಶಿವರಾಜ್ಕುಮಾರ್ಗೆ ಕ್ಯಾನ್ಸರ್ ಬಂದಾಗ ಸಾಕಷ್ಟು ತೊಂದರೆಗಳನ್ನು ಎದುರಿಸಿದರು. ಅವರು ಸ್ವಲ್ಪ ಕುಗ್ಗಿದ್ದರು. ಆ ಸಮಯದಲ್ಲಿ ಅವರ ಬೆಂಬಲಕ್ಕೆ ನಿಂತಿದ್ದು ಇಡೀ ಕುಟುಂಬ. ಆಪರೇಷನ್ ಮಾಡಿಸಿಕೊಳ್ಳಲು ಧೈರ್ಯ ತುಂಬಿತು.
ಶ್ರೀಲೀಲಾ ಸಿನಿಮಾ ವಿಚಾರಕ್ಕೆ ಬರೋದಾದರೆ ‘ಕಿಸ್’ ಸಿನಿಮಾ ಮೂಲಕ ಅವರು ಫೇಮಸ್ ಆದರು. ಆ ಬಳಿಕ ಪರಭಾಷೆಯಿಂದ ಸಾಕಷ್ಟು ಆಫರ್ಗಳು ಬಂದವು. ಈಗ ತೆಲುಗು ಹಾಗೂ ಹಿಂದಿಯಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ‘ಪುಷ್ಪ 2’ ಸಿನಿಮಾದಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಅವರು ಗಮನ ಸೆಳೆದಿದ್ದಾರೆ. ಈಗ ಅವರು ಹಿಂದಿಯಲ್ಲಿ ‘ಆಶಿಕಿ 3’ ಸಿನಿಮಾದಲ್ಲಿ ನಟಿಸುತ್ತಾ ಇದ್ದಾರೆ ಅನ್ನೋದು ವಿಶೇಷ. ಇದಲ್ಲದೆ, ತೆಲುಗಿನಲ್ಲಿ ಹಲವು ಚಿತ್ರಗಳಲ್ಲಿ ಶ್ರೀಲೀಲಾ ನಟಿಸುತ್ತಾ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



