ಎತ್ತಿಹೊಳೆ ಯೋಜನೆ: ಸರ್ಕಾರದ ಉತ್ತರಗಳಿಂದ ಕನ್ವಿನ್ಸ್ ಆಗದ ಮಾಧ್ಯಮ, ನೋಡಿಕೊಂಡು ಹೇಳ್ತೀನಿ ಎಂದ ಸಚಿವ
ಎತ್ತಿನ ಹೊಳೆ ಯೋಜನೆ ಅಡಿ ಒಟ್ಟು 24 ಟಿಎಂಸಿ ನೀರು ಸಿಗಲಿದೆ ಎಂದು ಶಿವಕುಮಾರ್ ಹೇಳುತ್ತಾರಾದರೂ ಅವರು ನೀಡುವ ಲೆಕ್ಕ 22 ಟಿಎಂಸಿಗೆ ಬರುತ್ತೆ-14 ಟಿಎಂಸಿ ಕುಡಿಯಲು ಮತ್ತು 8ಟಿಎಂಸಿ ನೀರು ಕೆರೆ ತುಂಬಿಸಲು. ಅವರ ಉತ್ತರದಿಂದ ಕನ್ವಿನ್ಸ್ ಆಗದ ಪತ್ರಕರ್ತರು ಮತ್ತದೇ ಪ್ರಶ್ನೆ ಕೇಳಿದಾಗ, ನಿಮ್ಮ ಪ್ರಶ್ನೆ ಅರ್ಥವಾಗುತ್ತಿಲ್ಲ, ನೋಡಿಕೊಂಡು ಹೇಳುತ್ತೇನೆ ಎಂದು ನೀರಾವರಿ ಸಚಿವ ಹೇಳುತ್ತಾರೆ.
ಚಿಕ್ಕಬಳ್ಳಾಪುರ, ಜುಲೈ 2: ಎತ್ತಿನಹೊಳೆ ಯೋಜನೆ ಅಡಿ ಚಿಕ್ಕಾಬಳ್ಳಾಪುರ, ಬೆಂಗಳೂರು ಉತ್ತರ ಮತ್ತು ಕೋಲಾರ ಜಿಲ್ಲೆಗಳಿಗೆ ಎಷ್ಟೆಷ್ಟು ನೀರು ಸಿಗಲಿದೆ ಅನ್ನೋದರ ಬಗ್ಗೆ ಸರಕಾರ ಮತ್ತು ಜನರಲ್ಲಿ ಗೊಂದಲಗಳಿರುವಂತಿದೆ. ಸದನದಲ್ಲಿ ನೀರಾವರಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಕ್ಕೂ ಮತ್ತು ಸಂಪುಟ ಸಭೆಯ ನಂತರ ಪ್ರೆಸ್ ಬ್ರೀಫಿಂಗ್ ನಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಾಮ್ಯತೆ ಇರಲಿಲ್ಲ. ಯೋಜನೆಗಾಗಿ ಸರ್ಕಾರ ಎಲ್ಲೆಲ್ಲಿಂದ ನೀರು ತರುತ್ತಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬೇಕಾದರೆ ಮಾಧ್ಯಮದವರು ತನ್ನ ಜತೆ ಬರಬೇಕು, ಎಲ್ಲರೂ ತಯಾರಾಗಿರಿ ಅಲ್ಲಿಗೆ ಕರೆದೊಯ್ದು ಸರ್ಕಾರ ಏನೆಲ್ಲ ಕೆಲಸಗಳನ್ನು ಮಾಡಿದೆ, ಅಕ್ವಾಡಕ್ಟ್, ಪವರ್ ಸ್ಟೇಶನ್ ಗಳ ಕೆಲಸ ಹೇಗೆ ನಡೆದಿದೆ ಅನ್ನೋದನ್ನು ತೋರಿಸ್ತೀನಿ ಅಂತ ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿಲ್ಲ, ನಮ್ಮ ಗಮನವೆಲ್ಲ 2028 ರ ಚುನಾವಣೆ ಮೇಲಿದೆ: ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ