AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’, ‘ಹರಿ ಹರ ವೀರ ಮಲ್ಲು’ ಟ್ರೈಲರ್ ಬಿಡುಗಡೆಗೆ ಮುಂಚೆಯೇ ಭಾರಿ ಹೈಪ್

Hari Hara Veera Mallu-Ramayana: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದ ಟ್ರೈಲರ್ ಮತ್ತು ರಣ್​ಬೀರ್ ಕಪೂರ್-ಯಶ್ ನಟನೆಯ ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ಅಥವಾ ಸಣ್ಣ ಟೀಸರ್ ಇಂದು (ಜುಲೈ 03) ಬಿಡುಗಡೆ ಆಗಲಿದೆ. ಬಿಡುಗಡೆಗೆ ಮುಂಚೆಯೇ ಕೆಲವಾರು ಮಂದಿ ಎರಡನ್ನೂ ನೋಡಿದ್ದು ಬಹುವಾಗಿ ಕೊಂಡಾಡುತ್ತಿದ್ದಾರೆ. ಇಂದು ಬಿಡುಗಡೆ ಆಗಲಿರುವ ಟ್ರೈಲರ್ ಮತ್ತು ಟೀಸರ್ ಎರಡೂ ದಾಖಲೆಗಳನ್ನು ಬರೆಯುವುದು ಪಕ್ಕಾ ಎನ್ನಲಾಗುತ್ತಿದೆ.

‘ರಾಮಾಯಣ’, ‘ಹರಿ ಹರ ವೀರ ಮಲ್ಲು’ ಟ್ರೈಲರ್ ಬಿಡುಗಡೆಗೆ ಮುಂಚೆಯೇ ಭಾರಿ ಹೈಪ್
Hari Hara Ramayan
ಮಂಜುನಾಥ ಸಿ.
|

Updated on: Jul 03, 2025 | 7:26 AM

Share

ಇಂದು (ಜುಲೈ 03) ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಟ್ರೈಲರ್ ಮತ್ತು ಯಶ್, ರಣ್​ಬೀರ್ ಕಪೂರ್, ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಆಗಲಿದೆ. ಈ ಎರಡೂ ಬಿಡುಗಡೆ ಆಗುವ ಮುಂಚೆಯೇ ಭಾರಿ ಹೈಪ್ ಸೃಷ್ಟಿಯಾಗಿದೆ. ಈಗಾಗಲೇ ಕೆಲವು ಪ್ರಮುಖರು ಈ ಎರಡೂ ಸಿನಿಮಾಗಳ ಟ್ರೈಲರ್ ಮತ್ತು ಟೀಸರ್​ಗಳನ್ನು ವೀಕ್ಷಣೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಿ ಬರೆದಿದ್ದಾರೆ. ಎರಡೂ ಸಿನಿಮಾಗಳ ಟ್ರೈಲರ್ ಮತ್ತು ಟೀಸರ್​ಗಳು ಬಿಡುಗಡೆ ಬಳಿಕ ದಾಖಲೆ ಬರೆಯುವುದು ಪಕ್ಕಾ ಎನ್ನಲಾಗುತ್ತಿದೆ.

‘ಹರಿ ಹರ ವೀರ ಮಲ್ಲು’ ಸಿನಿಮಾದ ಟ್ರೈಲರ್ ಕಟ್ ಆಗಿ ಈಗಾಗಲೇ ಕೆಲವು ದಿನಗಳಾಗಿದ್ದು, ನಟ ಪವನ್ ಕಲ್ಯಾಣ್ ಸೇರಿದಂತೆ ಅವರ ಮಿತ್ರ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಇನ್ನೂ ಕೆಲವರು ಈಗಾಗಲೇ ಟ್ರೈಲರ್ ವೀಕ್ಷಿಸಿ ನಿರ್ದೇಶಕ, ನಿರ್ಮಾಪಕರಿಗೆ ಅಭಿನಂದನೆ ತಿಳಿಸಿ, ಟ್ರೈಲರ್ ಬಿಡುಗಡೆಗೆ ಸೂಚಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಅನ್ನು ಕೆಲವು ಪ್ರಮುಖ ವ್ಯಕ್ತಿಗಳು ಹಾಗೂ ಮಾಧ್ಯಮಗಳವರಿಗೆ ಈಗಾಗಲೇ ತೋರಿಸಲಾಗಿದೆಯಂತೆ.

ಇದನ್ನೂ ಓದಿ:ವೈರಲ್ ಫೋಟೊ: ಒಂದೇ ಸಿನಿಮಾನಲ್ಲಿ ಚಿರಂಜೀವಿ-ಪವನ್ ಕಲ್ಯಾಣ್

‘ಹರಿ ಹರ ವೀರ ಮಲ್ಲು’ ಟ್ರೈಲರ್ ನೋಡಿದ ಒಬ್ಬರು, ‘ಈ ಟ್ರೈಲರ್ ಅನ್ನು ನೋಡಿದ ಬಳಿಕ ಪದೇ ಪದೇ ನೋಡಬೇಕು ಎನಿಸುತ್ತದೆ. ಮೊದಲ ಬಾರಿ ನೋಡಿದಾಗ ರೋಮಾಂಚನ ಆಗುತ್ತದೆ. ಎರಡನೇ ಬಾರಿ ಹಿನ್ನೆಲೆ ಸಂಗೀತಕ್ಕಾಗಿ ನೋಡುತ್ತೀರ. ಮೂರನೇ ಬಾರಿ ವಿಷ್ಯುಲ್ ಡೀಟೇಲಿಂಗ್​ಗಾಗಿ ನೋಡುತ್ತೀರ, ನಾಲ್ಕನೇ ಬಾರಿ ಇವುಗಳ ಹೊರತಾಗಿ ಇನ್ನೂ ಅದ್ಭುತವಾಗಿರುವುದನ್ನು ಹುಡುಕಲು ನೋಡುತ್ತೀರ’ ಎಂದಿದ್ದಾರೆ. ಟ್ರೈಲರ್​​ನ 30 ಸೆಕೆಂಡ್​ಗಳು ಚಿತ್ರಮಂದಿರಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಕೆಲವರು. ಪವನ್ ಕಲ್ಯಾಣ್ ಜೊತೆಗೆ ಬಾಬಿ ಡಿಯೋಲ್ ಮತ್ತು ನಿಧಿ ಅಗರ್ವಾಲ್ ಪಾತ್ರಗಳು ಸಹ ಬಹಳ ಚೆನ್ನಾಗಿ ಮೂಡಿ ಬಂದಿವೆಯಂತೆ.

ಇನ್ನು ‘ರಾಮಾಯಣ’ ಗ್ಲಿಂಪ್ಸ್ ಅನ್ನು ಜುಲೈ 3 ರಂದು ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾ ಶೂಟಿಂಗ್ ಪ್ರಾರಂಭ ಆದ ಮೇಲೆ ಸಿನಿಮಾ ಕುರಿತಾಗಿ ಹೊರಬಿಡಲಾಗುತ್ತಿರುವ ಅಧಿಕೃತ ಅಪ್​ಡೇಟ್ ಇದಾಗಿದ್ದು, ಈಗಾಗಲೇ ವಿಶೇಷ ಸ್ಕ್ರೀನಿಂಗ್​​ನಲ್ಲಿ ಕೆಲವರಿಗೆ ‘ರಾಮಾಯಣ’ ಗ್ಲಿಂಪ್ಸ್ ಅನ್ನು ತೋರಿಸಲಾಗಿದೆ. ಚಿತ್ರಮಂದಿರದಲ್ಲಿ ರಾಮಾಯಣ ಗ್ಲಿಂಪ್ಸ್ ಅಥವಾ ಟೀಸರ್ ನೋಡಿರುವ ಖ್ಯಾತ ವಿಮರ್ಶಕ ಭಾರದ್ವಜ ರಂಗನ್, ‘ಕೆಲವರನ್ನು ರಾಮಾಯಣ ಗ್ಲಿಂಪ್ಸ್​ ವೀಕ್ಷಿಸಲು ಆಹ್ವಾನಿಸಲಾಗಿತ್ತು. ಮೊದಲ ಸೀನ್​​ನಲ್ಲಿ ಬರುವ ಬ್ರಹ್ಮ, ವಿಷ್ಣು, ಶಿವ ಕಾಣುತ್ತಾರೆ ಆಗಿನಿಂದಲೂ ಸಹ ಇದು ಹೊಸತನ ಎನಿಸಿತು. ಈ ರೀತಿಯದ್ದಾದ ಒಂದನ್ನು ನಾವು ಈ ಹಿಂದೆ ನೋಡಿಲ್ಲ. ಹೀರೋ-ವಿಲನ್, ಒಳಿತು-ಕೆಡುಕು, ರಣ್​ಬೀರ್-ಯಶ್ ಒಟ್ಟಾರೆ ಇದು ಹೊಸತು. ಎರಡು ಭಾಗಗಳ ಚಲನಚಿತ್ರವಾಗಿದ್ದರೂ, ಮಹಾಕಾವ್ಯವು ತುಂಬಾ ವಿಸ್ತಾರವಾಗಿದೆ, ಅವರು ಕಥೆ + ಐಮ್ಯಾಕ್ಸ್-ಟ್ಯೂನ್ ಮಾಡಿದ ದೃಶ್ಯಗಳನ್ನು ಹೇಗೆ ಸಮತೋಲನಗೊಳಿಸುತ್ತಾರೆ ಎಂಬುದನ್ನು ನೋಡಲು ನಾನು ಕಾತುರನಾಗಿದ್ದೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ