ವೈರಲ್ ಫೋಟೊ: ಒಂದೇ ಸಿನಿಮಾನಲ್ಲಿ ಚಿರಂಜೀವಿ-ಪವನ್ ಕಲ್ಯಾಣ್
Chiranjeevi-Pawan Kalyan: ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅವರುಗಳು ತೆಲುಗು ಚಿತ್ರರಂಗದ ಇಬ್ಬರು ಬಹು ದೊಡ್ಡ ಸೂಪರ್ ಸ್ಟಾರ್ಗಳು. ಈ ಇಬ್ಬರು ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಿದರೆ ಬಾಕ್ಸ್ ಆಫೀಸ್ ಛಿಂದಿ ಆಗುವುದು ಪಕ್ಕಾ. ಇದೀಗ ಈ ಇಬ್ಬರೂ ಒಟ್ಟಿಗೆ ಸಿನಿಮಾ ಸೆಟ್ನಲ್ಲಿ ಇರುವ ಚಿತ್ರ ವೈರಲ್ ಆಗಿದ್ದು, ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಯಾವುದು ಆ ಸಿನಿಮಾ?

ಪವನ್ ಕಲ್ಯಾಣ್ (Pawan Kalyan) ಮತ್ತು ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ತೆಲುಗು ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ ಹೀರೋಗಳು. ಇಬ್ಬರಿಗೂ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಾಕಿದ ಹಣವನ್ನು ಒಂದೇ ದಿನ ಮರಳಿ ಗಳಿಸಿಕೊಡುವ ತಾಕತ್ತಿರುವ ನಟರು ಈ ಇಬ್ಬರು. ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿಯೂ ಆಗಿರುವ ಪವನ್ ಕಲ್ಯಾಣ್, ರಾಜಕೀಯದ ನಡುವೆ ತಾವು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಡುತ್ತಿದ್ದಾರೆ. ಈಗಾಗಲೇ ‘ಹರಿ ಹರ ವೀರ ಮಲ್ಲು’ ಸಿನಿಮಾ ಮುಗಿಸಿಕೊಟ್ಟಿದ್ದಾರೆ. ಈಗ ‘ಉಸ್ತಾದ್ ಭಗತ್ ಸಿಂಗ್’ ಮತ್ತು ‘ಓಜಿ’ ಸಿನಿಮಾಗಳನ್ನು ಮುಗಿಸಿಕೊಡುತ್ತಿದ್ದಾರೆ.
ಇದೀಗ ಪವನ್ ಹಾಗೂ ಅವರ ಸಹೋದರ ಚಿರಂಜೀವಿ ಅವರು ಒಟ್ಟಿಗೆ ಇರುವ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರ ಹಲವು ಸುದ್ದಿಗಳಿಗೆ ಕಾರಣವಾಗಿದೆ. ಚಿತ್ರ ವೈರಲ್ ಆಗುತ್ತಿದ್ದಂತೆ ನಾನಾ ಸುದ್ದಿಗಳು ಹರಿದಾಡಲು ಆರಂಭಿಸಿದ್ದು, ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಒಂದೇ ಸಿನಿಮಾನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿದೆ. ಈ ಇಬ್ಬರೂ ಒಂದೇ ಸಿನಿಮಾನಲ್ಲಿ ನಟಿಸಿದರೆ ಬಾಕ್ಸ್ ಆಫೀಸ್ ಅಲ್ಲೋಲ ಕಲ್ಲೋಲ ಆಗುವುದು ಪಕ್ಕಾ.
ಅಸಲಿಗೆ ನಡೆದಿರುವುದೇನೆಂದರೆ ಪವನ್ ಕಲ್ಯಾಣ್, ‘ಉಸ್ತಾದ್ ಭಗತ್ಸಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದು, ಆ ಸಿನಿಮಾ ಸೆಟ್ಗೆ ಚಿರಂಜೀವಿ ಇತ್ತೀಚೆಗಷ್ಟೆ ಭೇಟಿ ನೀಡಿದ್ದರು. ಚಿತ್ರ ನೋಡಿದವರು, ಚಿರಂಜೀವಿ ಅವರು ‘ಉಸ್ತಾದ್ ಭಗತ್ಸಿಂಗ್’ ಸಿನಿಮಾದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದೇ ಕಾರಣಕ್ಕೆ ಅವರು ಸಿನಿಮಾ ಸೆಟ್ಗೆ ಹೋಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ಮರು ಬಿಡುಗಡೆ
ಪವನ್ ಕಲ್ಯಾಣ್ ಈ ಹಿಂದೆ ಚಿರಂಜೀವಿ ಅವರ ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಶಂಕರ್ ದಾದ ಎಂಬಿಬಿಎಸ್’ ಸಿನಿಮಾದ ಹಾಡೊಂದರಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದರು, ಆ ಬಳಿಕ ಬಿಡುಗಡೆ ಆದ ‘ಶಂಕರ್ ದಾದ ಜಿಂದಾಬಾದ್’ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಒಂದು ಫೈಟ್ ಸಹ ಅವರಿಗಾಗಿ ಇಡಲಾಗಿತ್ತು. ಇನ್ನು ಚಿರಂಜೀವಿ, ಈ ವರೆಗೆ ಯಾವುದೇ ಪವನ್ ಕಲ್ಯಾಣ್ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿಲ್ಲ. ಆದರೆ ಹಲವು ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ಚಿರಂಜೀವಿ ಅವರ ಚಿತ್ರ, ಹೆಸರನ್ನು ಬಳಸಿಕೊಳ್ಳಲಾಗಿದೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶನ ಮಾಡುತ್ತಿದ್ದು, ಪಕ್ಕಾ ಕಮರ್ಶಿಯಲ್ ನಿರ್ದೇಶಕ ಆಗಿರುವ ಹರೀಶ್ ಶಂಕರ್, ಸಿನಿಮಾಕ್ಕಾಗಿ ಅತಿಥಿ ಪಾತ್ರಗಳನ್ನು ಬಳಸಿಕೊಳ್ಳುತ್ತಾರೆ. ಹಾಗಾಗಿ ಈಗ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ಚಿರಂಜೀವಿ ಅವರನ್ನು ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ