AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಲಿವುಡ್​ನದ್ದು ಕೋಡಂಗಿತನ’: ದಕ್ಷಿಣ ಚಿತ್ರರಂಗ ಗ್ರೇಟ್ ಎಂದ ಪವನ್ ಕಲ್ಯಾಣ್

Pawan Kalyan movies: ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಬಾಲಿವುಡ್​ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಳ ಬಗ್ಗೆ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ‘ಬಾಲಿವುಡ್ ಕೋಡಂಗಿತನ ಪ್ರದರ್ಶಿಸಿದೆ’ ಎಂದಿರುವ ಪವನ್ ಕಲ್ಯಾಣ್, ಬಾಲಿವುಡ್​ಗೆ ಹೋಲಿಸಿದರೆ ದಕ್ಷಿಣ ಭಾರತ ಚಿತ್ರರಂಗ ಗ್ರೇಟ್ ಎಂದಿದ್ದಾರೆ.

‘ಬಾಲಿವುಡ್​ನದ್ದು ಕೋಡಂಗಿತನ’: ದಕ್ಷಿಣ ಚಿತ್ರರಂಗ ಗ್ರೇಟ್ ಎಂದ ಪವನ್ ಕಲ್ಯಾಣ್
Pawan Kalyan
ಮಂಜುನಾಥ ಸಿ.
|

Updated on: Jun 24, 2025 | 4:18 PM

Share

ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ (Pawan Kalyan) ಬಾಲಿವುಡ್​ ಬಗ್ಗೆ ಖಾರವಾದ ಹೇಳಿಕೆ ನೀಡಿದ್ದಾರೆ. ಬಾಲಿವುಡ್ ಸಿನಿಮಾಗಳನ್ನು​ ಯಾವುದೇ ಮುಲಾಜಿಲ್ಲದೆ ಕೋಡಂಗಿತನಕ್ಕೆ ಹೋಲಿಸಿದ್ದಾರೆ ಪವನ್ ಕಲ್ಯಾಣ್. ಆರ್ಗನೈಜರ್ಸ್ ವೀಕ್ಲಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪವನ್ ಕಲ್ಯಾಣ್, ಬಾಲಿವುಡ್​ ಕೇವಲ ಹಣಕ್ಕಾಗಿ ಸಿನಿಮಾ ಮಾಡುತ್ತಿದೆ ಎಂದಿದ್ದಾರೆ. ಭಾರತೀಯತೆಯನ್ನು ಗೌರವಿಸುತ್ತಾ, ಸಂಸ್ಕೃತಿಯೊಂದಿಗೆ ಸಂಬಂಧ ಇರಿಸಿಕೊಂಡಿರುವುದು ದಕ್ಷಿಣ ಭಾರತ ಚಿತ್ರರಂಗ ಮಾತ್ರ ಎಂದಿದ್ದಾರೆ. ಮಾತ್ರವಲ್ಲದೆ, ‘ಭಾರತೀಯ ಚಿತ್ರರಂಗ’ ಎಂಬ ಏಕತೆಯೇ ಸರಿಯಿಲ್ಲ ಎಂದು ಸಹ ವಾದಿಸಿದ್ದಾರೆ.

ಬೇರೆ ಬೇರೆ ಜನರೇಷನ್​​ನ ಸಿನಿಮಾ ನಿರ್ಮಾಪಕ, ನಿರ್ದೇಶಕರು ಬಂದು ಬಾಲಿವುಡ್​ನ ಚಿತ್ರಣವೇ ಬದಲಾಗಿದೆ. ಬಾಲಿವುಡ್ ತನ್ನ ಕೋಡಂಗಿತ ತೋರಿಸಿ​, ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ, ಹಣದ ಆಸೆಗೆ ಸಂಸ್ಕೃತಿಗೆ ಹೊರತಾದ ಪಾತ್ರಗಳನ್ನು ಸೃಷಿಸಿತು, ಸಂಸ್ಕೃತಿಗೆ ಸಂಬಂಧವಿಲ್ಲದ ಪರ ಸಂಸ್ಕೃತಿಯ ಸಿನಿಮಾಗಳನ್ನು ನಿರ್ಮಿಸಿದೆ’ ಎಂದಿದ್ದಾರೆ.

‘ಈ ದಿನಗಳಲ್ಲಿ ಬಾಲಿವುಡ್​ಗೆ ಹೋಲಿಸಿದರೆ ದಕ್ಷಿಣ ಭಾರತ ಚಿತ್ರರಂಗ ಸತತವಾಗಿ ನೆಲದ ಸಂಸ್ಕೃತಿಗೆ, ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದೆ. ಈ ಹಿಂದೆ ಬಾಲಿವುಡ್​​ನಲ್ಲಿ ಇಂಥಹಾ ಪ್ರಯತ್ನಗಳು ನಡೆದಿದ್ದವು. ಉದಾಹರಣೆಗೆ ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾ. ಅದು ಭಾರತೀಯತೆಯನ್ನು ಒಳಗೊಂಡ ಸಿನಿಮಾ ಆಗಿತ್ತು. ಅದರೆ ಇತ್ತೀಚೆಗೆ ಬಾಲಿವುಡ್​ ಅಂಥಹಾ ಸಿನಿಮಾಗಳನ್ನು ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್​ಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಹೊರಹಾಕಿದ ಧನುಷ್

ಪ್ಯಾನ್ ಇಂಡಿಯಾ ಸಂಸ್ಕೃತಿ ಹೆಚ್ಚಾದ ಬಳಿಕ ಭಾರತದ ಎಲ್ಲ ಚಿತ್ರರಂಗವನ್ನೂ ಸೇರಿಸಿ ‘ಭಾರತೀಯ ಚಿತ್ರರಂಗ’ ಎಂದು ಕರೆಯಲಾಗುತ್ತಿದೆ. ಇದಕ್ಕೂ ಆಕ್ಷೇಪಣೆ ವ್ಯಕ್ತಪಡಿಸಿರುವ ಪವನ್ ಕಲ್ಯಾಣ್, ಭಾರತದ ಪ್ರತಿಯೊಂದು ಚಿತ್ರರಂಗಕ್ಕೂ ಅದರದ್ದೇ ಆದ ಭಿನ್ನತೆ, ವಿಶೇಷತೆಗಳಿವೆ. ಅವು ಹಾಗೆಯೇ ಉಳಿಯಬೇಕು. ‘ಭಾರತೀಯ ಚಿತ್ರರಂಗ’ ಎಂದು ಆ ಭಿನ್ನತೆಯನ್ನು ಹಾಳು ಮಾಡಬಹುದಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದೆ. ಜುಲೈ 24 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಇದರ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ಮತ್ತು ‘ಓಜಿ’ ಸಿನಿಮಾಗಳ ಚಿತ್ರೀಕರಣವನ್ನೂ ಸಹ ಪವನ್ ಕಲ್ಯಾಣ್ ಪ್ರಾರಂಭ ಮಾಡಿದ್ದು, ಇನ್ನೊಂದೆರಡು ತಿಂಗಳುಗಳಲ್ಲಿ ಆ ಸಿನಿಮಾಗಳ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ