ಪವನ್ ಕಲ್ಯಾಣ್ಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಹೊರಹಾಕಿದ ಧನುಷ್
ಧನುಷ್ ಅವರು 'ರಾಯನ್' ಚಿತ್ರದ ಯಶಸ್ಸಿನ ನಂತರ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಜೂನ್ 20ರಂದು 'ಕುಬೇರ' ಸಿನಿಮಾ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ, ಪವನ್ ಕಲ್ಯಾಣ್ ಅವರ ಚಿತ್ರವನ್ನು ತೆಲುಗಿನಲ್ಲಿ ನಿರ್ದೇಶನ ಮಾಡುವ ಆಸೆಯನ್ನು ಧನುಷ್ ವ್ಯಕ್ತಪಡಿಸಿದ್ದಾರೆ. ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿಯಾಗಿರುವುದರಿಂದ ಈ ಯೋಜನೆ ಯಶಸ್ವಿಯಾಗುವುದೇ ಎಂಬುದು ಕಾದು ನೋಡಬೇಕಿದೆ.

ನಟ ಧನುಷ್ (Dhanush) ಅವರು ಈಗ ಕೇವಲ ನಟ ಮಾತ್ರ ಅಲ್ಲ. ಅವರು ಈಗ ಖ್ಯಾತ ನಿರ್ದೇಶಕರು ಕೂಡ ಹೌದು. ಈ ಮೊದಲು ಅವರು ನಿರ್ದೇಶನ ಮಾಡಿದ್ದ ‘ರಾಯನ್’ ಚಿತ್ರವು ಯಶಸ್ಸು ಕಂಡಿತು. ಇದರಿಂದ ಧನುಷ್ ಒಳ್ಳೆಯ ನಿರ್ದೇಶಕ ಎನಿಸಿಕೊಂಡರು. 2024ರಲ್ಲಿ ಈ ಚಿತ್ರವು ರಿಲೀಸ್ ಆಯಿತು. ಈಗ ಅವರ ನಟನೆಯ ‘ಕುಬೇರ’ ಸಿನಿಮಾ ಜೂನ್ 20ರಂದು ರಿಲೀಸ್ ಆಗಲಿದೆ. ಶೇಖರ್ ಕಮ್ಮುಲ್ಲಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ಅವರು ಬ್ಯುಸಿ ಇದ್ದಾರೆ. ಈ ವೇಳೆ ಪವನ್ ಕಲ್ಯಾಣ್ಗೆ ಸಿನಿಮಾ ಮಾಡುವ ಆಸೆಯನ್ನು ಅವರು ಹೊರಹಾಕಿದ್ದಾರೆ.
ಇತ್ತೀಚೆಗೆ ‘ಕುಬೇರ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಚಿತ್ರದಲ್ಲಿ ನಾಗಾರ್ಜುನ ಕೂಡ ನಟಿಸಿದ್ದಾರೆ. ಹೀಗಾಗಿ, ಅದ್ದೂರಿಯಾಗಿ ಈವೆಂಟ್ ನಡೆದಿದೆ. ಧನುಷ್ ಅವರು ಪವನ್ ಕಲ್ಯಾಣ್ಗೆ ನಟನೆಯ ಸಿನಿಮಾಗೆ ನಿರ್ದೇಶನ ಮಾಡುವ ಆಸೆಯನ್ನು ಹೊರಹಾಕಿದ್ದಾರೆ.
‘ನಾನು ಪವನ್ ಕಲ್ಯಾಣ್ ಸಿನಿಮಾಗೆ ತೆಲುಗಿನಲ್ಲೇ ನಿರ್ದೇಶನ ಮಾಡಬೇಕು’ ಎಂದು ಹೇಳಿದರು. ಇದನ್ನು ಕೇಳಿ ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಆಯಿತು. ಇದಕ್ಕೆ ಯಾವಾಗ ಕಾಲ ಕೂಡಿ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಪವನ್ ಕಲ್ಯಾಣ್ ಖ್ಯಾತ ಹೀರೋ. ಈಗಾಗಲೇ ಅವರು ರಾಜಕೀಯದಲ್ಲಿ ಬ್ಯುಸಿ ಇರುವುದರಿಂದ ಅವರು ಒಪ್ಪಿಕೊಂಡ ಸಿನಿಮಾ ಕೆಲಸಗಳನ್ನು ಮಾಡೋದು ಕಷ್ಟ ಆಗುತ್ತಿದೆ. ಹೀಗಾಗಿ, ಮುಂದಿನ ಸಿನಿಮಾಗಳಿಗೆ ಅವರು ಕಾಲ್ಶೀಟ್ ಕೊಡುವಾಗ ಆಲೋಚನೆ ಮಾಡುತ್ತಾರೆ.
ಪವನ್ ಕಲ್ಯಾಣ್ ಅವರು ಖ್ಯಾತ ಹೀರೋ. ಅವರ ಸಿನಿಮಾಗಳಿಗೆ ನಿರ್ದೇಶನ ಮಾಡಬೇಕು ಎಂದರೆ ಸಾಕಷ್ಟು ಅನುಭವ ಬೇಕು. ಧನುಷ್ ಹಿರೋ ಆಗಿ ಯಶಸ್ಸು ಕಂಡಿರಬಹುದು. ಆದರೆ, ನಿರ್ದೇಶಕನಾಗಿ ಪವನ್ ಕಲ್ಯಾಣ್ನ ಹ್ಯಾಂಡಲ್ ಮಾಡೋದು ಕಷ್ಟ ಆಗಲಿದೆ.
ಇದನ್ನೂ ಓದಿ: ‘ಕುಬೇರ’ ಪ್ರಚಾರ: ರಶ್ಮಿಕಾ ಮಂದಣ್ಣ ಕಾಲೆಳೆದ ನಟ ಧನುಶ್
‘ಕುಬೇರ’ ಚಿತ್ರವು ಜೂನ್ 20ರಂದು ರಿಲೀಸ್ ಆಗಲಿದೆ. ಈ ಸಿನಿಮಾಗೆ ಧನುಷ್ ಹೀರೋ. ಅವರ ಜೊತೆ ನಾಗಾರ್ಜುನ, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ವಾರಿಸು’ ಬಳಿಕ ರಶ್ಮಿಕಾ ಮತ್ತೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.