‘ಇದು ಪ್ರೇಮಲೋಕ ಮಾರಿ ಇಲ್ಲೆ’; ರವಿಚಂದ್ರನ್ಗೆ ನೋವಾಗದಂತೆ ಸಿನಿಮಾ ಚೆನ್ನಾಗಿಲ್ಲ ಎಂದಿದ್ದ ತಂದೆ ವೀರಸ್ವಾಮಿ
ರವಿಚಂದ್ರನ್ ಮತ್ತು ಅವರ ತಂದೆ ವೀರಸ್ವಾಮಿ ಇಬ್ಬರೂ ಕನ್ನಡ ಚಿತ್ರರಂಗದ ದಿಗ್ಗಜರು. 'ಪ್ರೇಮಲೋಕ'ದ ಯಶಸ್ಸಿನ ನಂತರ 'ರಣಧೀರ' ಚಿತ್ರವನ್ನು ರವಿಚಂದ್ರನ್ ನಿರ್ದೇಶನ ಮಾಡಿದ್ದರು. ಆದರೆ, ಸಿನಿಮಾ ಹಿಟ್ ಆಗುತ್ತದೆ ಎಂಬ ನಂಬಿಕೆ ವೀರಸ್ವಾಮಿಗೆ ಇರಲೇ ಇಲ್ಲ. ಆದಾಗ್ಯೂ ಚಿತ್ರ ಹಿಟ್ ಆಯಿತು.

ರವಿಚಂದ್ರನ್ (Ravichandran) ಹಾಗೂ ಅವರ ತಂದೆ ವೀರಸ್ವಾಮಿ ಇಬ್ಬರೂ ಸಿನಿಮಾ ಕೃಷಿ ಮಾಡುತ್ತಾ ಬಂದವರು. ರವಿಚಂದ್ರನ್ ಸಿನಿಮಾ ಮಾಡುತ್ತೇನೆ ಎಂದು ಹೊರಟಾಗ ವೀರಸ್ವಾಮಿ ಎಂದಿಗೂ ತಡೆದಿಲ್ಲ. ಏಕೆಂದರೆ ವೀರಸ್ವಾಮಿ ಖ್ಯಾತ ನಿರ್ಮಾಪಕರಾಗಿದ್ದರು. ಆಗಿನ ಕಾಲಕ್ಕೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಅವರು ಕೊಟ್ಟಿದ್ದರು. ರವಿಚಂದ್ರನ್ ಕೂಡ ತಂದೆಯನ್ನು ಫಾಲೋ ಮಾಡಿದರು. ‘ಪ್ರೇಮಲೋಕ’ ಸಿನಿಮಾ ಬಳಿಕ ಬಂದ ‘ರಣಧೀರ’ ಚಿತ್ರ ವೀರಸ್ವಾಮಿಗೆ ಇಷ್ಟವೇ ಆಗಿರಲಿಲ್ಲ. ಇದನ್ನು ಅವರು ರವಿಚಂದ್ರನ್ಗೆ ಹೇಳಿದ ರೀತಿ ಬೇರೆಯದೇ ರೀತಿಯಲ್ಲಿ ಇತ್ತು.
ರವಿಚಂದ್ರನ್ ಅವರು 1987ರಲ್ಲಿ ‘ಪ್ರೇಮಲೋಕ’ ಸಿನಿಮಾ ಮಾಡಿ ಯಶಸ್ಸು ಕಂಡರು. ಅದರ ಮುಂದಿನ ವರ್ಷವೇ ‘ರಣಧೀರ’ ಸಿನಿಮಾ ಮಾಡಿದರು. ‘ಪ್ರೇಮಲೋಕ’ ಸೂಪರ್ ಡೂಪಟ್ ಹಿಟ್ ಆಯಿತು. ‘ರಣಧೀರ’ ಸಿನಿಮಾನ ರವಿಚಂದ್ರನ್ ಅವರೇ ನಿರ್ದೇಶನ ಮಾಡಿದ್ದರು. ವೀರಸ್ವಾಮಿ ಇದಕ್ಕೆ ನಿರ್ಮಾಣ ಮಾಡಿದ್ದರು. ಸಿನಿಮಾ ಬಜೆಟ್ ಮಿತಿಮೀರಿತ್ತು. ಅಲ್ಲದೆ, ವೀರಸ್ವಾಮಿಗೆ ಸಿನಿಮಾ ಇಷ್ಟ ಆಗದ ಕಾರಣ, ಚಿತ್ರ ಗೆಲ್ಲುತ್ತದೆ ಎನ್ನುವ ಭರವಸೆ ಅವರಿಗೆ ಇರಲಿಲ್ಲ.
View this post on Instagram
‘ನಮ್ಮ ಅಪ್ಪನತ್ರ ಬಂದು ಚೆನ್ನೈಗೆ ಹೋಗ್ತೀನಿ, ಸಿನಿಮಾ ಕೆಲಸ ಇದೆ ಎಂದೆ. ಅವರು ಓಕೆ ಎಂದರು. ಅಲ್ಲದೆ ಅವರು ಒಂದು ವಿಚಾರವನ್ನು ಕೇಳಿದರು. ಸಿನಿಮಾಗೆ ನೀನು ಎಷ್ಟು ಖರ್ಚು ಮಾಡಿದೀಯಾ ಗೊತ್ತಾ? ಪ್ರೇಮಲೋಕ ಚಿತ್ರಕ್ಕೆ 1 ಕೋಟಿ ರೂಪಾಯಿ ಖರ್ಚು ಮಾಡಿದೆ. ಎರಡು ಭಾಷೆ ಸಿನಿಮಾ ಆಗಿದ್ದರಿಂದ ನಾವು ಗೆದ್ದೆವು. ಆದರೆ ಪ್ರೇಮಲೋಕ ಹಿಂದಿ ರಿಮೇಕ್ ಇದು. ಮೂಲ ಸಿನಿಮಾ ಸಂತೋಷ್ ಥಿಯೇಟರ್ನಲ್ಲಿ 25 ವಾರ ಓಡಿದೆ. ರಣಧೀರ್ ಸಿನಿಮಾದಿಂದ ನಮಗೆ ದುಡ್ಡು ಬರಲ್ಲ. ಏಕೆಂದರೆ ಒಂದು ಮುಕ್ಕಾಲು ಕೋಟಿ ಖರ್ಚಾಗಿದೆ ಎಂದು ತಂದೆ ನನಗೆ ಹೇಳಿದರು’ ಎಂದು ವಿವರಿಸಿದರು ರವಿಚಂದ್ರನ್. ‘ರಣಧೀರ’ ಹಿಂದಿಯ ‘ಹೀರೋ’ ಚಿತ್ರದ ರಿಮೇಕ್ ಆಗಿದೆ.
ಇದನ್ನೂ ಓದಿ: ರವಿಚಂದ್ರನ್, ಉಪೇಂದ್ರಗೆ ಹೀರೋಯಿನ್ ಆದ ಈ ಸ್ಟಾರ್ ನಟಿ ಯಾರೆಂದು ಗುರುತಿಸುತ್ತೀರಾ?
‘ನನ್ನ ತಂದೆಗೆ ಸಿನಿಮಾ ಇಷ್ಟ ಆಗಿರಲಿಲ್ಲ. ಮಗ ಸಿನಿಮಾನ ಪ್ರೀತಿಸಿ ಸಿನಿಮಾ ಮಾಡಿದ್ದಾನೆ ಎಂಬ ಭಾವನೆ ಅವರದ್ದು. ಆದರೆ, ಚೆನ್ನಾಗಿಲ್ಲ ಎಂದು ಹೇಗೆ ಹೇಳಬೇಕು ಎಂಬ ಪ್ರಶ್ನೆ ಅವರನ್ನು ಕಾಡಿದೆ. ಬಾ ಎಂದು ನನ್ನ ಕರೆದುಕೊಂಡು ಹೋದರು. ‘ಇದು ಪ್ರೇಮ ಲೋಕ ಮಾರಿ ಇಲ್ಲೆ’ ಎಂದರು. ಪ್ರೇಮಲೋಕ ಹಿಟ್ ಕೊಟ್ಟಿದೀಯಾ. ಅದೇ ನಿರೀಕ್ಷೆಯಲ್ಲಿ ಜನರು ಬರುತ್ತಾರೆ. ಇದರಲ್ಲಿ ಮ್ಯೂಸಿಕ್ ಚೆನ್ನಾಗಿಲ್ಲ ಎಂದಿದ್ದರು. ಆದರೆ, ಸಿನಿಮಾ ಹಿಟ್ ಆಯಿತು’ ಎಂದು ವಿವರಿಸಿದ್ದರು ರವಿಚಂದ್ರನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








