ಸಲ್ಮಾನ್ ಖಾನ್ ಮದುವೆ ಆಗದಿರಲು ವಿಚ್ಛೇದನದ ಭಯವೇ ಕಾರಣ; ಓಪನ್ ಆಗಿ ಮಾತನಾಡಿದ ನಟ
ಸಲ್ಮಾನ್ ಖಾನ್ ಅವರು 59 ವರ್ಷ ವಯಸ್ಸಿನಲ್ಲೂ ಮದುವೆಯಾಗದಿರುವ ಬಗ್ಗೆ 'ದಿ ಗ್ರೇಟ್ ಇಂಡಿಯನ್ ಕಪಿಲ್' ಶೋನಲ್ಲಿ ಮಾತನಾಡಿದ್ದಾರೆ. ವಿಚ್ಛೇದನದ ಭಯ ಅವರ ಮದುವೆಗೆ ತಡೆಯಾಗಿದೆ ಎಂದು ಹೇಳಲಾಗುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಈ ಶೋನಲ್ಲಿ ಸಲ್ಮಾನ್ ತಮ್ಮ ಸೋದರ ಅಳಿಯಂದಿರೊಂದಿಗೆ ಕಾಣಿಸಿಕೊಂಡಿದ್ದಾರೆ.

ನಟ ಸಲ್ಮಾನ್ ಖಾನ್ (Salman Khan) ಅವರಿಗೆ ವಯಸ್ಸು ಈಗ 59 ವರ್ಷ. ಈವರೆಗೆ ಅವರು ವಿವಾಹ ಆಗುವ ಬಗ್ಗೆ ಆಲೋಚಿಸಿಲ್ಲ. ಅವರು ಮದುವೆ ಆಗದಿರಲು ಕಾರಣ ಏನು ಎಂಬುದು ಕೂಡ ಅವರು ರಿವೀಲ್ ಮಾಡಿಲ್ಲ. ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿಟ್ಟರೂ ಅವರಿಗೆ ಮಕ್ಕಳನ್ನು ಹೊಂದಬೇಕು ಎಂಬ ಆಸೆ ಬಂದಿಲ್ಲ. ಈಗ ಈ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್ ಆಗುತ್ತದೆ ಎನ್ನುವ ಭಯಕ್ಕೆ ಸಲ್ಮಾನ್ ಖಾನ್ ಮದುವೆ ಆಗಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
ನೆಟ್ಫ್ಲಿಕ್ಸ್ ಈಗ ‘ದಿ ಗ್ರೇಟ್ ಇಂಡಿಯನ್ ಕಪಿಲ್’ ಶೋನ ಮೂರನೇ ಸೀಸನ್ ಆರಂಭಿಸಿದೆ. ಈ ಶೋಗೆ ಸಲ್ಮಾನ್ ಖಾನ್ ಅವರು ತಮ್ಮ ಸೋದರ ಅಳಿಯಂದಿರಾದ ಅರ್ಹಾನ್, ನಿರ್ವಣ್ ಮತ್ತು ಅಯಾನ್ ಜೊತೆ ಆಗಮಿಸಿದ್ದಾರೆ. ಈ ಮೂಲಕ ಹೊಸ ಸೀಸನ್ನ ಮೊದಲ ಎಪಿಸೋಡ್ ಅದ್ದೂರಿಯಾಗಿ ಆರಂಭ ಆಗುತ್ತಿದೆ. ಸದ್ಯ ಈ ಎಪಿಸೋಡ್ ಎಲ್ಲರ ಗಮನ ಸೆಳೆಯುತ್ತಿದೆ.
ದಂಪತಿಗಳ ಮಧ್ಯೆ ಏಕೆ ವಿಚ್ಛೇದನ ಆಗುತ್ತಿದೆ ಎನ್ನುವ ಬಗ್ಗೆ ಕಪಿಲ್ ಶರ್ಮಾ ಮಾತನಾಡಿದ್ದಾರೆ. ‘ಮೊದಲೆಲ್ಲ ತ್ಯಾಗ ಮಾಡುತ್ತಿದ್ದರು. ಇದರ ಜೊತೆ ಸಹಿಷ್ಣುತೆಯ ಮನೋಭಾವ ಇತ್ತು. ಅಚಾನಕ್ಕಾಗಿ ಒಂದು ಕಾಲು ಮತ್ತೊಬ್ಬರ ಮೇಲೆ ಬಿದ್ದರೆ ವಿಚ್ಛೇದನ ಉಂಟಾಗುತ್ತದೆ. ಗೊರಕೆ ಕೂಡ ದಂಪತಿ ಬೇರೆ ಆಗಲು ಕಾರಣ ಆಗಬಹುದು. ಸಣ್ಣ ತಪ್ಪು ತಿಳುವಳಿಕೆಯಿಂದ ಪತಿ-ಪತ್ನಿ ಬೇರೆ ಆಗಬಹುದು’ ಎಂದಿದ್ದಾರೆ ಅವರು.
Bhai Spitting Facts💯😂@BeingSalmanKhan on The First Episode of #TheGreatIndianKapilShow Coming Soon Only On @NetflixIndia ♥️#TheGreatIndianKapilShowOnNetflix #KapilSharmaShow #SalmanKhan pic.twitter.com/NEUUvnlI0N
— Shoaib Qureshi (@BeingShoaib3099) June 13, 2025
ಸದ್ಯ ಸಲ್ಮಾನ್ ಖಾನ್ ಅವರ ಹೇಳಿಕೆಯನ್ನು ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಅವರು ವಿಚ್ಛೇದನದ ಭಯಕ್ಕೆ ವಿವಾಹ ಆಗುತ್ತಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. ಸದ್ಯ ನೆಟ್ಫ್ಲಿಕ್ಸ್ ರಿಲೀಸ್ ಮಾಡಿರೋ ಪ್ರೋಮೋ ಎಲ್ಲರ ಗಮನ ಸೆಳೆದಿದೆ. ವಿವಾಹ ಆಗದೆ ಇರಲು ಸಲ್ಲು ಏನಾದರೂ ಸ್ಪಷ್ಟ ಕಾರಣ ನೀಡಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಈ ಬಾರಿಯ ಬಿಗ್ ಬಾಸ್ಗೆ ಪಡೆಯೋ ಸಂಭಾವನೆ ಇಷ್ಟೊಂದಾ?
‘ದಿ ಗ್ರೇಟ್ ಇಂಡಿಯನ್ ಕಪಿಲ್’ ಸೋ ಗ್ರ್ಯಾಂಡ್ ಎಂಟ್ರಿ ಕೊಡಲು ರೆಡಿ ಆಗಿದೆ. ವಿಶೇಷ ಎಂದರೆ ನವಜೋತ್ ಸಿಂಗ್ ಸಿಧು ಅವರನ್ನು ಮತ್ತೆ ಕರೆಸಲಾಗಿದೆ. ಇದೇ ಮೊದಲ ಬಾರಿಗೆ ಕಪಿಲ್ ಶರ್ಮಾ ಶೋಗೆ ಇಬ್ಬರು ಜಡ್ಜ್ಗಳು. ನವಜೋತ್ ಅವರು ರಾಜಕೀಯದಲ್ಲಿ ಬ್ಯುಸಿ ಆದ ಬಳಿಕ ಶೋನ ತೊರೆದಿದ್ದರು. ಆ ಬಳಿಕ ಅರ್ಚನಾ ಪುರಾನಾ ಸಿಂಗ್ ಅವರು ಆ ಸ್ಥಾನ ತುಂಬಿದ್ದರು. ಈಗ ನವಜೋತ್ ಬಂದಿರುವುದರಿಂದ ಇಬ್ಬರೂ ಶೋನಲ್ಲಿ ಇರಲಿದ್ದಾರೆ. ಜೂನ್ 21ರಂದು ಮೊದಲ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








