AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ

ನಿಶಾ ರವಿಕೃಷ್ಣನ್ ಅವರು ಕನ್ನಡ ಕಿರುತೆರೆಯಲ್ಲಿ 'ಗಟ್ಟಿಮೇಳ' ಧಾರಾವಾಹಿಯ ಮೂಲಕ ಜನಪ್ರಿಯರಾದ ನಟಿ. ನಂತರ ತೆಲುಗು ಧಾರಾವಾಹಿಗಳಲ್ಲಿ ಅವಕಾಶ ಪಡೆದರು. ಆದರೆ, ತೆಲುಗು ಭಾಷೆ ತಿಳಿಯದ ಕಾರಣ ಆರಂಭದಲ್ಲಿ ಹಲವು ಸವಾಲುಗಳನ್ನು ಎದುರಿಸಿದರು. ಲಿಪ್ ರೀಡಿಂಗ್ ಮೂಲಕ ಭಾಷೆಯನ್ನು ಕಲಿತು ಯಶಸ್ವಿಯಾದರು.

ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ
ನಿಶಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Jun 12, 2025 | 8:04 AM

Share

ನಿಶಾ ರವಿಕೃಷ್ಣನ್ (Nisha Ravikrishnan) ಅವರು ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಅವರು ನಟಿಸಿದ ಧಾರಾವಾಹಿ ‘ಗಟ್ಟಿಮೇಳ’ ಯಶಸ್ಸು ಕಂಡಿತು. ನಿಜ ಹೇಳಬೇಕು ಎಂದರೆ ಅವರನ್ನು ಆ ಬಳಿಕ ಎಲ್ಲರೂ ರೌಡಿ ಬೇಬಿ ಎಂದು ಕರೆದರು. ಈಗ ಅವರು ತೆಲುಗು ಧಾರಾವಾಹಿ ಕೂಡ ಮಾಡುತ್ತಿದ್ದಾರೆ. ನಿಶಾ ಹುಟ್ಟಿದ್ದು ಯಾವುದೋ ಆಂಧ್ರ ಗಡಿಯಲ್ಲಿ ಅಲ್ಲ. ಹಾಗಾಗಿದ್ದರೆ ಅವರಿಗೆ ತೆಲುಗು ಸುಲಭದಲ್ಲಿ ಮಾತನಾಡಲು ಬರುತ್ತಿತ್ತು. ಅವರು ಜನಿಸಿದ್ದು, ಸಕಲೇಶಪುರದಲ್ಲಿ. ಅವರು ತೆಲುಗು ಧಾರಾವಾಹಿ ಮಾಡುವಾಗ ಅನುಭವಿಸಿದ ಕಷ್ಟಗಳನ್ನು ಈ ಮೊದಲು ಹೇಳಿಕೊಂಡಿದ್ದರು.

ನಿಶಾ ರವಿಕೃಷ್ಣನ್ ಅವರು ‘ಸರ್ವ ಮಂಗಲ ಮಾಂಗಲ್ಯೆ’ ಧಾರಾವಾಹಿಯಲ್ಲಿ ಮೊದಲು ನಟಿಸಿದರು. ಸ್ಟಾರ್ ಸುವರ್ಣದಲ್ಲಿ ಈ ಧಾರಾವಾಹಿ ಪ್ರಸಾರ ಕಂಡಿತು. 2018-19ರ ಅವಧಿಯಲ್ಲಿ ಧಾರಾವಾಹಿ ಪ್ರಸಾರ ಕಂಡಿತು. 2019-24ರವರೆಗೆ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಅವರು ಕಾಣಿಸಿಕೊಂಡರು. ಕನ್ನಡ ಧಾರಾವಾಹಿ ಮಾಡುವಾಗಲೇ ತೆಲುಗು ಕಿರುತೆರೆ ಲೋಕದಿಂದ ಆಫರ್ ಬಂತು. 2021ರಲ್ಲಿ ಅವರು ತೆಲುಗಿನಲ್ಲಿ ‘ಗೀತಾ’ ಹೆಸರಿನ ಧಾರಾವಾಹಿ ಮಾಡಿದರು.

ಇದನ್ನೂ ಓದಿ
Image
ಕೆಲಸದವರನ್ನು ಗೌರಿ ಖಾನ್ ಎಷ್ಟು ಉತ್ತಮವಾಗಿ ನೋಡಿಕೊಳ್ತಾರೆ ನೋಡಿ..
Image
ನನಗೆ ಮಾರ್ಗದರ್ಶನ ನೀಡಿದ್ದರೆ; ಡ್ರಗ್ಸ್ ಪಾರ್ಟಿ ಬಗ್ಗೆ ಮೌನ ಮುರಿದ ಮಂಗ್ಲಿ
Image
‘ಸಿತಾರೆ ಜಮೀನ್ ​ಪರ್’ ನೋಡಿ ವಿಮರ್ಶೆ ತಿಳಿಸಿದ ಸುಧಾ ಮೂರ್ತಿ
Image
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್

ಈಗ ನಿಶಾ ಅವರು, ‘ಅಮ್ಮಾಯಿಗಾರು’ ಹಾಗೂ ‘ಅಣ್ಣಯ್ಯ’ ಹೆಸರಿನ ಧಾರಾವಾಹಿ ಮಾಡುತ್ತಿದ್ದಾರೆ. ‘ಅಮ್ಮಾಯಿಗಾರು’ ತೆಲುಗಿನ ಧಾರಾವಾಹಿ. ‘ಅಣ್ಣಯ್ಯ’ ಪಕ್ಕಾ ಹಳ್ಳಿ ಕಥೆಯನ್ನು ಹೊಂದಿದೆ. ಈಗ ನಿಶಾ ಸುಲಭವಾಗಿ ತೆಲುಗು ಮಾತನಾಡ ಬಲ್ಲರು. ಆದರೆ, ಆರಂಭದಲ್ಲಿ ಅವರಿಗೆ ಸಾಕಷ್ಟು ಕಷ್ಟಗಳು ಉಂಟಾದವು. ಈ ಬಗ್ಗೆ ಅವರು ಹೇಳಿಕೊಂಡಿದ್ದರು.

ಸೆಲಬ್ರಿಟಿ ಪಾಡ್​ಕಾಸ್ಟ್ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದರು. ‘ನಂಗೆ ತೆಲುಗು ಬಗ್ಗೆ ಏನು ಎಂದರೆ ಏನೂ ಗೊತ್ತಿರಲಿಲ್ಲ. ತೆಲುಗಿನ ಕೆಲವೇ ಕೆಲವು ಶಬ್ದಗಳು ತಿಳಿದಿದ್ದವು. ಆರಂಭದಲ್ಲಿ ತುಂಬಾ ಕಷ್ಟ ಆಯ್ತು. ಕನ್ನಡ ನಿರರ್ಗಳವಾಗಿ ಮಾತನಾಡಬಲ್ಲೆ. ಇಲ್ಲಿ ನನಗೆ ಹೊಂದಾಣಿಕೆ ಆಗಿತ್ತು’ ಎಂದಿದ್ದಾರೆ ನಿಶಾ.

ಇದನ್ನೂ ಓದಿ: ಹೊಸ ಮನೆ ಕಟ್ಟಿದ ನಿಶಾ ರವಿಕೃಷ್ಣನ್; ಫೋಟೋ ವೈರಲ್ 

‘ನಾವು ಇಲ್ಲಿ ಲೈವ್ ಶೂಟ್ ಮಾಡುತ್ತೇವೆ. ಹಾಗೆಯೇ ಆಡಿಯೋ ಕ್ಯಾಪ್ಚರ್ ಆಗುತ್ತದೆ. ಅಲ್ಲಿ ಪ್ರಾಂಪ್ಟಿಂಗ್ ಇರುತ್ತಿತ್ತು. ಅದು ನನಗೆ ಹೊಸದು. ಅವರ ಜೊತೆ ನಾವು ಹೇಳಬೇಕು. ಇದು ಕಷ್ಟ ಆಯ್ತು. ಭಾಷೆ ಗೊತ್ತಿಲ್ಲ. ಅವರ ಲಿಪ್ ರೀಡ್ ಮಾಡಿ ಭಾಷೆ ಕಲಿತೆ. ಹೀಗೆ ಭಾಷೆ ಬಂತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:01 am, Thu, 12 June 25

Follow Us
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ