AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಾರಾದರೂ ನನಗೆ ಮಾರ್ಗದರ್ಶನ ನೀಡಿದ್ದರೆ..’; ಡ್ರಗ್ಸ್ ಪಾರ್ಟಿ ಬಗ್ಗೆ ಮೌನ ಮುರಿದ ಮಂಗ್ಲಿ

ಖ್ಯಾತ ಗಾಯಕಿ ಮಂಗ್ಲಿ ಅವರ ಬರ್ತ್​ಡೇ ದಿನ ನಡೆದ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮದ್ಯ ಮತ್ತು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂಬ ವರದಿ ಇದೆ. ನಂತರ ಮಂಗ್ಲಿ ತಮ್ಮ ಮೌನವನ್ನು ಮುರಿದಿದ್ದಾರೆ. ಅವರು ಡ್ರಗ್ಸ್ ಬಳಕೆಯನ್ನು ನಿರಾಕರಿಸಿದ್ದಾರೆ ಮತ್ತು ಪಾರ್ಟಿಗೆ ಅಗತ್ಯ ಪರವಾನಗಿ ಪಡೆಯದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

‘ಯಾರಾದರೂ ನನಗೆ ಮಾರ್ಗದರ್ಶನ ನೀಡಿದ್ದರೆ..’; ಡ್ರಗ್ಸ್ ಪಾರ್ಟಿ ಬಗ್ಗೆ ಮೌನ ಮುರಿದ ಮಂಗ್ಲಿ
ಮಂಗ್ಲಿ
ರಾಜೇಶ್ ದುಗ್ಗುಮನೆ
|

Updated on:Jun 12, 2025 | 7:29 AM

Share

ಖ್ಯಾತ ಗಾಯಕಿ ಮಂಗ್ಲಿ (Mangli) ಸದ್ಯ ಸುದ್ದಿಯಲ್ಲಿದ್ದಾರೆ. ಜೂನ್ 10ರಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ತಾಲೂಕಿನ ಎರ್ಲಪಲ್ಲಿಯ ಫಾರ್ಮ್​ಹೌಸ್​​​ನಲ್ಲಿ ನಡೆದ ಅವರ ಬರ್ತ್​ಡೇ ಪಾರ್ಟಿ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಡ್ರಗ್ಸ್ ಹಾಗೂ ವಿದೇಶಿ ಮದ್ಯ ವಶಕ್ಕೆ ಪಡೆದ ಬಗ್ಗೆ ಪೊಲೀಸರು ಹೇಳಿಕೆ ನೀಡಿದ್ದಾರೆ. ಇದನ್ನು ಮಂಗ್ಲಿ ಅಲ್ಲಗಳೆದಿದ್ದಾರೆ. ಅಲ್ಲದೆ ಕೆಲವು ವಿಚಾರದಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡಿರುವ ಅವರು, ಮಾರ್ಗದರ್ಶನಕ್ಕೊಬ್ಬರು ಬೇಕಿತ್ತು ಎಂದಿದ್ದಾರೆ.

ಜೂನ್ 10ರಂದು ಮಂಗ್ಲಿ ಬರ್ತ್​ಡೇ. ಈ ಕಾರಣಕ್ಕೆ ಅಂದು ರಾತ್ರಿ ಫಾರ್ಮ್​ಹೌಸ್​ನಲ್ಲಿ ಅವರು ಅದ್ದೂರಿ ಪಾರ್ಟಿ ಆಯೋಜನೆ ಮಾಡಿದ್ದರು. ಈ ವೇಳೆ ಅವರ ಆಪ್ತರು, ಗೆಳೆಯರು, ಕುಟುಂಬ ಸದಸ್ಯರು ಹಾಗೂ ತಂಡದ ಸದಸ್ಯರು ಇದ್ದರು. ಈ ವೇಳೆ ಮದ್ಯ ಬಳಕೆ ಆಗಿದೆ. ಇಷ್ಟು ದೊಡ್ಡ ಪಾರ್ಟಿ ಮಾಡುವಾಗ ಮತ್ತು ಮದ್ಯ ಕೊಡಲು ಒಪ್ಪಿಗೆ ಪಡೆಯಬೇಕು ಎಂಬ ನಿಯಮ ಇದೆ. ಆದರೆ, ಇದನ್ನು ತೆಗೆದುಕೊಂಡಿಲ್ಲ ಎನ್ನುವ ಬಗ್ಗೆ ಅವರಿಗೆ ಪಶ್ಚಾತಾಪ ಇದೆ.

‘ಆಲ್ಕೋಹಾಲ್ ನೀಡುವ ವಿಚಾರದಲ್ಲಿ ಒಪ್ಪಿಗೆ ಪಡೆಯಬೇಕು ಎನ್ನುವ ವಿಷಯ ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ನಾನು ಹಾಗೆ ಮಾಡಲಿಲ್ಲ ಎಂಬ ಕೊರಗು ಇದೆ. ಯಾರಾದರೂ ನನಗೆ ಮಾರ್ಗದರ್ಶನ ನೀಡಿದ್ದರೆ, ನಾನು ಹಾಗೆ ಮಾಡುತ್ತಿದ್ದೆ. ಪಾರ್ಟಿಯಲ್ಲಿ ಯಾವುದೇ ವಿದೇಶಿ ಮದ್ಯ ಇರಲಿಲ್ಲ. ಲಭ್ಯವಿದ್ದದ್ದು ಸ್ಥಳೀಯ ಮದ್ಯ ಮಾತ್ರ. ಪೊಲೀಸರು ಸಹ ಇದನ್ನೇ ದೃಢಪಡಿಸಿದ್ದಾರೆ. ಯಾವುದೇ ಮಾದಕ ದ್ರವ್ಯ ಸಿಕ್ಕಿಲ್ಲ ಎಂದು ಕೂಡ ಹೇಳಿದ್ದಾರೆ’ ಎಂದು ಮಂಗ್ಲಿ ಹೇಳಿದ್ದಾರೆ.

ಇದನ್ನೂ ಓದಿ
Image
‘ಸಿತಾರೆ ಜಮೀನ್ ​ಪರ್’ ನೋಡಿ ವಿಮರ್ಶೆ ತಿಳಿಸಿದ ಸುಧಾ ಮೂರ್ತಿ
Image
23 ವರ್ಷ ಕಿರಿಯ ನಟಿಯಿಂದ ಪತ್ನಿ ಪಾತ್ರ; ಸ್ಪಷ್ಟಪಡಿಸಿದ ಆಮಿರ್
Image
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
Image
ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್​ಗೆ ಜಾಮೀನು, ಬಿಡುಗಡೆ ಅನುಮಾನ

ಆ ಜಾಗದ ಮ್ಯಾನೇಜರ್​ ಡ್ರಗ್ಸ್ ಸೇವನೆ ಮಾಡಿದ್ದು ಖಚಿತವಾಗಿದೆ. ಈ ಬಗ್ಗೆ ಮಾತನಾಡಿರುವ ಮಂಗ್ಲಿ, ‘ಅವರು ಬೇರೆಲ್ಲೋ ಡ್ರಗ್ಸ್ ಸೇವನೆ ಮಾಡಿ ಬಂದಿದ್ದಿರಬಹುದು. ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ವಿಡಿಯೋ ಮಾಡೋದು ನಿಲ್ಲಿಸು’; ಡ್ರಗ್ ಪಾರ್ಟಿ ವೇಳೆ ಪೊಲೀಸರಿಗೆ ಗಾಯಕಿ ಮಂಗ್ಲಿ ಆವಾಜ್

ಮಂಗ್ಲಿ ಅವರು ದೊಡ್ಡ ಪಾರ್ಟಿ ಮಾಡಲು ಯಾವುದೇ ಒಪ್ಪಿಗೆ ಪಡೆದಿರಲಿಲ್ಲ. ಈ ವಿಚಾರ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ವಿದೇಶಿ ಮದ್ಯ ಸಿಕ್ಕಿದೆ ಎನ್ನಲಾಗಿದೆ. ಮಂಗ್ಲಿ ಅವರ ರಕ್ತ ಪರೀಕ್ಷೆ ಮಾಡಲಾಗಿದ್ದು, ಡ್ರಗ್ಸ್ ಸೇವನೆ ಮಾಡಿಲ್ಲ ಎಂಬುದು ಅಧಿಕೃತ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:29 am, Thu, 12 June 25