ವಯಸ್ಸಿನಲ್ಲಿ 23 ವರ್ಷ ಕಿರಿಯ ನಟಿಯಿಂದ ಪತ್ನಿ ಪಾತ್ರ; ಸ್ಪಷ್ಟಪಡಿಸಿದ ಆಮಿರ್
Aamir Khan: ಆಮಿರ್ ಖಾನ್ ಅವರು ತಮ್ಮ ಮುಂಬರುವ ಚಿತ್ರ 'ಸಿತಾರೆ ಜಮೀನ್ ಪರ್' ನಲ್ಲಿ ಜೆನಿಲಿಯಾ ಅವರೊಂದಿಗೆ ನಟಿಸುತ್ತಿದ್ದಾರೆ. ಇಬ್ಬರ ನಡುವೆ 23 ವರ್ಷಗಳ ವಯಸ್ಸಿನ ಅಂತರ ಇದೆ. ಆದರೆ ಆಮಿರ್ ಈ ವಯಸ್ಸಿನ ಅಂತರವನ್ನು VFX ತಂತ್ರಜ್ಞಾನದಿಂದ ನಿವಾರಿಸಬಹುದೆಂದು ಹೇಳಿದ್ದಾರೆ.

ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡ ನಂತರ, ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್, ನಟ ಆಮಿರ್ ಖಾನ್ ಕೊನೆಗೂ ಮತ್ತೆ ನಟಿಸಲು ಸಿದ್ಧರಾಗಿದ್ದಾರೆ. ಮುಂಬರುವ ಚಿತ್ರ ‘ಸಿತಾರೆ ಜಮೀನ್ ಪರ್’ ನಲ್ಲಿ ಅವರು ನಟಿ ಜೆನಿಲಿಯಾ ದೇಶ್ಮುಖ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಆಮಿರ್ (Aamir Khan) ಅವರ ಪತ್ನಿಯ ಪಾತ್ರವನ್ನು ಜೆನಿಲಿಯಾ ನಿರ್ವಹಿಸಿದ್ದಾರೆ. ಈ ಜೋಡಿಯನ್ನು ನೋಡಿ ಪ್ರೇಕ್ಷಕರು ಆಶ್ಚರ್ಯಚಕಿತರಾಗುತ್ತಾರೆ. ಏಕೆಂದರೆ ಆಮಿರ್ 60 ವರ್ಷ ವಯಸ್ಸಿನವರು ಮತ್ತು ಜೆನಿಲಿಯಾ ಅವರಿಗಿಂತ 23 ವರ್ಷ ಚಿಕ್ಕವರು. ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರಂತಹ ನಟರು ತಮಗಿಂತ ಕಿರಿಯ ನಟಿಯರೊಂದಿಗೆ ನಟಿಸಿದಾಗ ಇದೇ ರೀತಿ ಪ್ರಶ್ನೆ ಏಳುತ್ತಿತ್ತು. ಈಗ, ಆಮಿರ್ ಅವರ ಚಿತ್ರದಿಂದಾಗಿ, ಅವರು ಮತ್ತೆ ಚರ್ಚೆಯ ವಿಷಯವಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಆಮಿರ್ ಇದಕ್ಕೆ ಹೃತ್ಪೂರ್ವಕ ಪ್ರತಿಕ್ರಿಯೆ ನೀಡಿದ್ದಾರೆ.
‘ಈಗ ನಮ್ಮಲ್ಲಿ VFX ಇದೆ. ಕೆಲವು ವರ್ಷಗಳ ಹಿಂದೆ, ನಾನು 18 ವರ್ಷದ ಯುವಕನ ಪಾತ್ರವನ್ನು ನಿರ್ವಹಿಸಲು ಬಯಸಿದರೆ, ನಾನು ಮೇಕಪ್ ಅನ್ನು ಅವಲಂಬಿಸಬೇಕಾಗಿತ್ತು. ನಟ ಅನಿಲ್ ಕಪೂರ್ ‘ಈಶ್ವರ್’ ಚಿತ್ರದಲ್ಲಿ 80 ವರ್ಷದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದಾಗಲೂ ಅದನ್ನೇ ಮಾಡಿದ್ದರು. ಆದರೆ ಇಂದು, ದೃಶ್ಯ ಪರಿಣಾಮಗಳ ಸಹಾಯದಿಂದ, ನೀವು ಪರದೆಯ ಮೇಲೆ 80 ಅಥವಾ 40 ಅಥವಾ 20 ರಂತೆ ಕಾಣಿಸಬಹುದು. ಆದ್ದರಿಂದ, ನಟರಿಗೆ ಇನ್ನು ಮುಂದೆ ವಯಸ್ಸಿನ ಮಿತಿಯಿಲ್ಲ’ ಎಂದಿದ್ದಾರೆ.
‘ಲಾಲ್ ಸಿಂಗ್ ಚಡ್ಡಾ’ ಚಿತ್ರ ಹೀನಾಯವಾಗಿ ಸೋತಿತು. ನಂತರ, ಆಮಿರ್ ಸ್ವಲ್ಪ ಸಮಯದವರೆಗೆ ನಟನೆಯಿಂದ ವಿರಾಮ ತೆಗೆದುಕೊಂಡರು. ಈ ವಿರಾಮದಲ್ಲಿ ಅವರು ಕುಟುಂಬದ ಜೊತೆ ಸಮಯ ಕಳೆದರು. ಮಗಳು ಇರಾ ಮದುವೆ ಮಾಡಿದರು.
ಇದನ್ನೂ ಓದಿ: ಡ್ರೈವರ್ ಅಚಾತುರ್ಯ; ಕೂದಲೆಳೆಯಲ್ಲಿ ತಪ್ಪಿತು ದುರಂತ; ಆದರೂ ಜೆನಿಲಿಯಾ ಸಿಟ್ಟಾಗಲಿಲ್ಲ
ಬ್ರೇಕ್ ಬಳಿಕ ಅವರ ಮೊದಲ ಚಿತ್ರ ‘ಸಿತಾರೆ ಜಮೀನ್ ಪರ್’ ಬಿಡುಗಡೆಯಾಗುತ್ತಿದೆ. ಆರ್.ಎಸ್. ಪ್ರಸನ್ನ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಜೂನ್ 20 ರಂದು ಬಿಡುಗಡೆಯಾಗಲಿದೆ. ಆಮಿರ್ ಖಾನ್ ಅವರು ಆ್ಯಕ್ಷನ್ ಸಿನಿಮಾ ಮಾಡಬೇಕು ಎಂಬುದು ಆಪ್ತರ ಕೋರಿಕೆ ಆಗಿತ್ತು. ಆದರೆ, ಇದನ್ನು ಅವರು ಧಿಕ್ಕರಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.