ಒಂದೇ ವರ್ಷ, ಮೂರು ಖ್ಯಾತ ನಿರ್ದೇಶಕರು ಮತ್ತು ನಾಲ್ಕು ಡಿಸಾಸ್ಟರ್ ಸಿನಿಮಾಗಳು
ಶಂಕರ್, ಮಣಿರತ್ನಂ ಮತ್ತು ಎ.ಆರ್. ಮುರುಗದಾಸ್ ಅವರಂತಹ ಖ್ಯಾತ ನಿರ್ದೇಶಕರು ಇತ್ತೀಚೆಗೆ ತಮ್ಮ ಚಿತ್ರಗಳ ಮೂಲಕ ನಿರಾಸೆ ಮೂಡಿಸಿದ್ದಾರೆ. 'ಇಂಡಿಯನ್ 2', ‘ಗೇಮ್ ಚೇಂಜರ್’, 'ಸಿಕಂದರ್' ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿವೆ. ಈ ನಿರ್ದೇಶಕರ ಹಿಂದಿನ ಯಶಸ್ವಿ ಚಿತ್ರಗಳ ಹಿನ್ನೆಲೆಯಲ್ಲಿ ಈ ಸೋಲುಗಳು ಹೆಚ್ಚು ಗಮನ ಸೆಳೆದಿವೆ.

ಒಮ್ಮೆ ಹಿಟ್ ಸಿನಿಮಾ ಕೊಟ್ಟ ಬಳಿಕ ನಿರ್ದೇಶಕರ (Directors) ಮೇಲೆ ಸಾಕಷ್ಟು ನಿರೀಕ್ಷೆ ಮೂಡುತ್ತದೆ. ಅವರ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಜನರು ಇಟ್ಟುಕೊಳ್ಳುತ್ತಾರೆ. ಆದರೆ, ಈ ವರ್ಷ ಖ್ಯಾತ ನಾಮರಿಗೆ ಸಂಕಷ್ಟ ಎದುರಾಗಿದೆ. ಸೂಪರ್ ಹಿಟ್ ಸಿನಿಮಾ ನೀಡಿದ ಮೂರು ನಿರ್ದೇಶಕರ ನಾಲ್ಕು ಪ್ರಾಜೆಕ್ಟ್ಗಳು ಹಳ್ಳ ಹಿಡಿದಿವೆ. ಯಾರು ಆ ನಿರ್ದೇಶಕರು, ಯಾವುದು ಆ ಸಿನಿಮಾ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಶಂಕರ್, ಮಣಿರತ್ನಂ ಹಾಗೂ ಎಆರ್ ಮುರುಗದಾಸ್ಗೆ ಈ ವರ್ಷ ಶುಭಕರವಾಗಿಲ್ಲ. ಈ ಮೂರು ನಿರ್ದೇಶಕರು ಸೋಲನ್ನು ಕಂಡಿದ್ದಾರೆ. ಇವರು ವೃತ್ತಿ ಜೀವನದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹೊರತಾಗಿಯೂ ಅವರಿಗೆ ಗೆಲುವು ಸಿಕ್ಕಿಲ್ಲ ಅನ್ನೋದು ಬೇಸರದ ವಿಚಾರ.
ಮಣಿರತ್ನಂ ಅವರು ಮೊದಲು ಸಿನಿಮಾ ಮಾಡಿದ್ದು ಕನ್ನಡದಲ್ಲಿ. ಅವರ ನಿರ್ದೇಶನದ ‘ಪಲ್ಲವಿ ಅನುಪಲ್ಲವಿ’ ಸೂಪರ್ ಹಿಟ್ ಆಯಿತು. ಆ ಬಳಿಕ ‘ಮೌನ ರಾಗಂ’, ‘ನಾಯಕುಡು’, ‘ರೋಜಾ’, ‘ಬಾಂಬೆ’, ‘ದಿಲ್ ಸೇ’ ರೀತಿಯ ಚಿತ್ರಗಳು ನೀಡಿದರು. ಆದರೆ, ಇತ್ತೀಚೆಗೆ ‘ನವಾಬ್’, ‘ಪೊನಿಯಿನ್ ಸೆಲ್ವನ್’ ರೀತಿಯ ಚಿತ್ರಗಳು ಅವರು ನೀಡಿ ಹೆಸರು ಕೆಡಿಸಿಕೊಂಡಿದ್ದಾರೆ. ಅವರ ನಿರ್ದೇಶನದ ‘ಥಗ್ ಲೈಫ್’ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸ್ಥಿತಿ ತಲುಪಿದೆ.
ಇನ್ನು ನಿರ್ದೇಶಕ ಶಂಕರ್ ವಿಚಾರಕ್ಕೆ ಬರೋದಾದರೆ ಅವರು ‘ಜಂಟಲ್ಮನ್’, ‘ಅಪರಿಚಿತುಡು’, ‘ಮುಧಲ್ವನ್’, ‘ಶಿವಾಜಿ’, ರೋಬೋಟ್’ ರೀತಿಯ ಚಿತ್ರಗಳನ್ನು ಅವರು ಮಾಡಿ ಭೇಷ್ ಎನಿಸಿಕೊಂಡರು. ಆದರೆ ಇತ್ತೀಚೆಗೆ ‘2.0’, ‘ಇಂಡಿಯನ್ 2’ ‘ಗೇಮ್ ಚೇಂಜರ್’ ರೀತಿ ಸಿನಿಮಾ ನೀಡಿ ಫ್ಲಾಪ್ ನಿರ್ದೇಶಕರಾಗಿದ್ದಾರೆ. ‘ಇಂಡಿಯ್ 2’ ಹಾಗೂ ‘ಗೇಮ್ ಚೇಂಜರ್’ ಬ್ಯಾಕ್ ಟು ಬ್ಯಾಕ್ ರಿಲೀಸ್ ಆಯಿತು. ಎರಡೂ ಚಿತ್ರ ಹೀನಾಯ ಸೋಲು ಕಂಡಿತು ಎನ್ನಬಹುದು.
ಇದನ್ನೂ ಓದಿ: ಕಮಲ್ ಹಾಸನ್ ಬಳಿಕ ಕನ್ನಡಕ್ಕೆ ಮಸಿ ಬಳಿಯಲು ಬಂದ ಆರ್ಜಿವಿ; ಅಣ್ಣಾವ್ರ ಹೀಗಳೆದ ನಿರ್ದೇಶಕ
ಇನ್ನು, ಎಆರ್ ಮುರುಗದಾಸ್ ಅವರು ‘ಘಜಿನಿ’, ‘ತುಪಾಕಿ’ ರೀತಿಯ ಸಿನಿಮಾ ಕೊಟ್ಟವರು. ಆದರೆ, ‘ಸಿಕಂದರ್’ ಸಿನಿಮಾ ಹೀನಾಯ ಸೋಲು ಕಂಡಿತು. ಈ ಚಿತ್ರದ ಮೂಲಕ ಅವರು ಗೆಲ್ಲುವ ಭರವಸೆಯಲ್ಲೇನೋ ಇದ್ದರು. ಆದರೆ, ಅದು ಈಡೇರಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:44 am, Tue, 10 June 25