AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದು ದಿನ ಕಳೆದರೂ 50 ಕೋಟಿ ಗಳಿಸದ ‘ಥಗ್ ಲೈಫ್’; ನಿರ್ಮಾಪಕ ಕಮಲ್​ಗೆ ಆದ ನಷ್ಟ ಎಷ್ಟು?

‘ಥಗ್ ಲೈಫ್’ ಸಿನಿಮಾ ಬಿಡುಗಡೆಯಾಗಿ ಐದು ದಿನಗಳು ಕಳೆದರೂ ನಿರೀಕ್ಷಿತ ಗಳಿಕೆ ಕಾಣುತ್ತಿಲ್ಲ. ಕೇವಲ 40 ಕೋಟಿ ರೂಪಾಯಿ ಗಳಿಸಿದ್ದು, 300 ಕೋಟಿ ರೂಪಾಯಿ ಬಜೆಟ್‌ಗೆ ಹೋಲಿಸಿದರೆ ದೊಡ್ಡ ನಷ್ಟ ಎದುರಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಬಿಡುಗಡೆಯಾಗದಿರುವುದು ಹಾಗೂ ಉತ್ತಮ ವಿಮರ್ಶೆಗಳನ್ನು ಪಡೆಯದಿರುವುದು ಚಿತ್ರದ ಗಳಿಕೆಯ ಮೇಲೆ ಪ್ರಭಾವ ಬೀರಿದೆ.

ಐದು ದಿನ ಕಳೆದರೂ 50 ಕೋಟಿ ಗಳಿಸದ ‘ಥಗ್ ಲೈಫ್’; ನಿರ್ಮಾಪಕ ಕಮಲ್​ಗೆ ಆದ ನಷ್ಟ ಎಷ್ಟು?
ಥಗ್ ಲೈಫ್
ರಾಜೇಶ್ ದುಗ್ಗುಮನೆ
|

Updated on: Jun 10, 2025 | 8:42 AM

Share

‘ಥಗ್ ಲೈಫ್’ ಸಿನಿಮಾ ರಿಲೀಸ್ ಆಗಿ ಐದು ದಿನಗಳು ಕಳೆದಿವೆ. ಆದರೆ ಕಲೆಕ್ಷನ್ ಮಾತ್ರ ಇನ್ನೂ ಕುಟುಂತ್ತಲೇ ಸಾಗುತ್ತಿದೆ. ಈ ಚಿತ್ರ ಏಳ್ಗೆ ಕಾಣುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ಚಿತ್ರ ಐದು ದಿನಕ್ಕೆ 50 ಕೋಟಿ ರೂಪಾಯಿ ಕ್ಲಬ್ ಸೇರಲು ಒದ್ದಾಡುತ್ತಿದೆ. ಹೀಗೆ ಮುಂದುವರಿದರೆ ನಿರ್ಮಾಪಕ ಕಮಲ್ ಹಾಸನ್​ಗೆ ದೊಡ್ಡ ಮಟ್ಟದಲ್ಲಿ ನಷ್ಟ ಆಗೋದು ಪಕ್ಕಾ ಎನ್ನುವ ಮಾತುಗಳು ಕೇಳಿ ಬಂದಿವೆ.

‘ಥಗ್ ಲೈಫ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಚಿತ್ರ ಉತ್ತಮ ವಿಮರ್ಶೆ ಪಡೆದಿಲ್ಲ. ಈ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗದೇ ಇರುವುದು ಕೂಡ ಚಿತ್ರಕ್ಕೆ ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡಿದೆ. ಈ ಸಿನಿಮಾ ಸೋಮವಾರದ (ಜೂನ್ 9) ಪರೀಕ್ಷೆಯಲ್ಲಿ ಫೇಲ್ ಆಗಿದೆ. ಈ ಸಿನಿಮಾ ಕೇವಲ 3 ಕೋಟಿ ರೂಪಾಯಿ ಗಳಿಸಿದೆ. ಸಾಮಾನ್ಯವಾಗಿ ಚಿತ್ರಗಳು ವೀಕೆಂಡ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತವೆ. ಆದರೆ, ವಾರದ ದಿನಗಳಲ್ಲಿ ಸಿನಿಮಾದ ಗಳಿಕೆ ಕುಂಟುತ್ತದೆ. ಆದರೆ, ‘ಥಗ್ ಲೈಫ್’ ವೀಕೆಂಡ್ ಹಾಗೂ ವಾರದ ದಿನ ಎರಡರಲ್ಲೂ ಡಲ್ ಹೊಡೆದಿದೆ. ಸದ್ಯ ‘ಥಗ್ ಲೈಫ್’ ಚಿತ್ರದ ಒಟ್ಟೂ ಗಳಿಕೆ 40 ಕೋಟಿ ರೂಪಾಯಿ ಆಗಿದೆ.

‘ಥಗ್ ಲೈಫ್’ ಚಿತ್ರದ ಬಜೆಟ್ 300 ಕೋಟಿ ರೂಪಾಯಿ ಎಂದು ತಂಡದವರು ಇತ್ತೀಚೆಗೆ ಮಾಹಿತಿ ನೀಡಿದ್ದರು. ಈಗಾಗಲೇ ಒಟಿಟಿ ಹಕ್ಕಿನಿಂದ ಚಿತ್ರಕ್ಕೆ 150 ಕೋಟಿ ರೂಪಾಯಿ ಬಂದಿದೆ. ಸಿನಿಮಾ ಲಾಭ-ಟಿವಿ ಹಕ್ಕು ಸೇರಿ 50 ಕೋಟಿ ರೂಪಾಯಿ ಲಾಭ ಬಂತು ಎಂದರೂ ನಿರ್ಮಾಪಕರಿಗೆ 100 ಕೋಟಿ ರೂಪಾಯಿ ಮೇಲೆ ನಷ್ಟ ಉಂಟಾಗಲಿದೆ. ಇದನ್ನು ಕಮಲ್ ಹಾಸನ್ ಹೇಗೆ ಭರಿಸುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ
Image
ಒಂದೇ ವರ್ಷ, ಮೂರು ಖ್ಯಾತ ನಿರ್ದೇಶಕರು ಮತ್ತು ನಾಲ್ಕು ಡಿಸಾಸ್ಟರ್ ಸಿನಿಮಾ
Image
ಸಿನಿಮಾ ಇಲ್ಲದೆ ಕಷ್ಟದಲ್ಲಿರೋ ತ್ರಿವಿಕ್ರಂಗೆ ದೊಡ್ಡ ಸಲಹೆ ಕೊಟ್ಟ ಪವನ್
Image
ಹೊಸ ಅಧ್ಯಾಯ ಆರಂಭಿಸಿದ ಜೀ ಕನ್ನಡ; ವಿನೂತನ ಲೋಗೋ, ಹೊಸ ಅಧ್ಯಾಯ
Image
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್

ಇದನ್ನೂ ಓದಿ:  ‘ಥಗ್ ಲೈಫ್’ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್​ಗೆ ಹಿನ್ನಡೆ

ಈ ಮೊದಲು ‘ವಿಕ್ರಮ್’ ಸಿನಿಮಾ ಮಾಡಿ ಕಮಲ್ ಹಾಸನ್ ಅವರು ದೊಡ್ಡ ಮೊಟ್ಟದಲ್ಲಿ ಲಾಭ ಕಂಡಿದ್ದರು. ಇದೇ ಹುಮ್ಮಸಿನಲ್ಲಿ ಅವರು ‘ಥಗ್ ಲೈಫ್’ ಸಿನಿಮಾನ ನಿರ್ಮಾಣ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಇಂದು (ಜೂನ್ 10) ಕರ್ನಾಟಕ ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ಇದೆ. ಈ ವೇಳೆ ಸಿನಿಮಾದ ಭವಿಷ್ಯ ನಿರ್ಧಾರ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್