‘ಜನರಿಗೆ ಮನು ಬುದ್ಧಿ ತೋರಿಸಲು ಆ ಆಡಿಯೋ ಬಿಟ್ಟೆ’; ಸಂತ್ರಸ್ತೆಯ ನೇರ ಮಾತು
ಮಡೆನೂರು ಮನು ಅವರು ಮಾಡಿದ ಅವಾಂತರ ಒಂದೆರಡಲ್ಲ. ಸಹ ಕಲಾವಿದೆಗೆ ಅವರು ಕಿರುಕುಳ ನೀಡಿದ್ದರು. ಅವರ ಮೇಲೆ ಅತ್ಯಾಚಾರ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಮನು ಅವರು ಜೈಲು ಸೇರಿ ಬಂದಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಮಾತನಾಡಿದ್ದಾರೆ. ಅವರು ದುಖಃ ತೋಡಿಕೊಂಡಿದ್ದಾರೆ.
ಮಡೆನೂರು ಮನು (Madenuru Manu) ಅವರು ಸದ್ಯ ಜೈಲಿನಿಂದ ಬಿಡುಗಡೆ ಆಗಿ ಬಂದಿದ್ದಾರೆ. ಸಹ ಕಲಾವಿದೆ ಮೇಲೆ ಅತ್ಯಾಚಾರ ಮಾಡಿದ ಆರೋಪ ಅವರ ಮೇಲೆ ಇದೆ. ಈ ಮಧ್ಯೆ ಕನ್ನಡ ಚಿತ್ರರಂಗದ ಸ್ಟಾರ್ ಹೀರೋಗಳ ಬಗ್ಗೆ ಮನು ಮಾತನಾಡಿದ್ದಾರೆ ಎನ್ನುವ ಆಡಿಯೋ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಈ ಆಡಿಯೋ ಬಿಡೋಕೆ ಕಾರಣ ಏನು ಎಂಬುದನ್ನು ಸಂತ್ರಸ್ತೆ ವಿವರಿಸಿದ್ದಾರೆ. ‘ನನ್ನ ಹಾಗೂ ಮನು ಮಧ್ಯೆ ಇರೋದು ಪ್ರಕರಣ. ಈ ಪ್ರಕರಣಕ್ಕೆ ಸಂಬಂಧ ಇಲ್ಲದೆ ಇರುವ ಆಡಿಯೋನ ಅವನು ರಿಲೀಸ್ ಮಾಡಿದ. ಇದಕ್ಕೆ ನಾನು ಈ ಆಡಿಯೋ ಬಿಡುಗಡೆ ಮಾಡಿದೆ. ಅವನ ಬುದ್ಧಿ ಏನು ಎಂಬುದನ್ನು ಜನರಿಗೆ ತೋರಿಸಬೇಕಿತ್ತು’ ಎಂದಿದ್ದಾರೆ ಸಂತ್ರಸ್ತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?

Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್

ಟೇಕಾಫ್ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
