ಟ್ರೆಜರಿ ಕಚೇರಿಯಲ್ಲಿ ಜಮೆಯಾಗಿದ್ದ ₹16 ಲಕ್ಷಕ್ಕೂ ಹೆಚ್ಚು ಹಣದೊಂದಿಗೆ ನಾಪತ್ತೆಯಾದ ಬಳ್ಳಾರಿ ಆರ್ಟಿಒ ಗುಮಾಸ್ತ
ಮೇ 26ರಿಂದ ಮೇ 31 ರವರೆಗೆ ಖಜಾನೆ ಕಚೇರಿಯಲ್ಲಿ ಜಮೆಯಾಗಿದ್ದ ಹಣವನ್ನು ತೆಗದುಕೊಂಡು ರವಿ ಕಣ್ಮರೆಯಾಗಿದ್ದಾನೆ. ಸಂಡೂರುನಲ್ಲಿ ಅಪಘಾತ ನಡೆದ ಪ್ರಕರಣದಲ್ಲಿ ತಾನು ವ್ಯಸ್ತನಾಗಿದ್ದಾಗ ರವಿ ಈ ಕೃತ್ಯವೆಸಗಿದ್ದು ಅದು ತನ್ನ ಗಮನಕ್ಕೆ ಜೂನ್ 4 ರಂದು ಬಂದಿದೆ ಎಂದು ಅಧಿಕಾರಿ ಹೇಳುತ್ತಾರೆ. ರವಿ ಕಚೇರಿಗೆ ಬಾರದ ಕಾರಣ ವೀರೇಶ್ ಹೆಸರಿನ ಕಚೇರಿ ಮೇಲ್ವಿಚಾರಕರನ್ನು ಅವನ ಮನೆಗೆ ಕಳಿಸಿದಾಗ ಅವನು ಊರು ಬಿಟ್ಟಿದ್ದು ಗೊತ್ತಾಗಿದೆ.
ಬಳ್ಳಾರಿ, ಜೂನ್ 10: ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲಸ ಮಾಡುವ ದ್ವಿತೀಯ ದರ್ಜೆ ಗುಮಾಸ್ತನೊಬ್ಬ (Second Division Assistant) ಖಜಾನೆ ಕಚೇರಿಯಲ್ಲಿ ವಾಹನ ತೆರಿಗೆ ಇತರ ಬಾಬತ್ತುಗಳಿಂದ ಜಮಾ ಆಗಿದ್ದ ₹16,72,218 ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಮಾಧ್ಯಮದ ಜೊತ ವಿಷಯ ಹಂಚಿಕೊಂಡ ಬಳ್ಳಾರಿಯ ಅರ್ಟಿಒ, ಹಣದೊಂದಿಗೆ ನಾಪತ್ತೆಯಾಗಿರುವ ಎಸ್ಡಿಎ ಹೆಸರು ರವಿ ತಾವರಖೇಡ ಆಗಿದ್ದು ಅವರು ವಿಜಯಪುರ ಮೂಲದವರೆಂದು ಹೇಳಿದ್ದಾರೆ. ರವಿ ಮತ್ತು ಅವನ ಪತ್ನಿಗೆ ಫೋನ್ ಮಾಡಿದಾಗ ಇಬ್ಬರೂ ಒಂದೊಂದು ದಿನದ ಸಮಯ ಕೇಳಿದ್ದಾರೆ ಆದರೆ ಇದುವರೆಗೆ ಹಣದ ಜೊತೆ ರವಿ ವಾಪಸ್ಸಾಗಿಲ್ಲ ಎಂದು ಅಧಿಕಾರಿ ಹೇಳುತ್ತಾರೆ.
ಇದನ್ನೂ ಓದಿ: Viral : ಬಾತ್ ರೂಮ್ ಗೆ ಹೋಗುವ ನೆಪದಲ್ಲಿ ಚಿನ್ನಾಭರಣ ನಗದು ಜೊತೆ ಪರಾರಿ ಆದ ವಧು, ಕಂಗಾಲಾದ ವರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ