ಸಿಎಂ ಮತ್ತು ಡಿಸಿಎಂರಂತೆ ದೆಹಲಿಯಲ್ಲಿರುವ ಸತೀಶ್ ಜಾರಕಿಹೊಳಿ ತಾನು ಬಂದಿರೋ ಕಾರಣ ಬೇರೆ ಎಂದರು
ತಾನು ದೆಹಲಿಗೆ ಭೇಟಿ ನೀಡುವುದು ಪೂರ್ವ ನಿಯೋಜಿತವಾಗಿತ್ತು, ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕಿದೆ ಎಂದು ಹೇಳಿದ ಸತೀಶ್ ಜಾರಕಿಹೊಳಿ, ಕಾಲ್ತುಳಿತ ಘಟನೆಗೆ ಯಾರು ಕಾರಣ, ತಪ್ಪಿತಸ್ಥರು ಯಾರು ಅಂತ ವರದಿ ಬಂದ ನಂತರವೇ ಗೊತ್ತಾಗುತ್ತದೆ, ವರದಿಗಾಗಿ ಇನ್ನೂ 15ದಿನ ಇಲ್ಲವೇ ಒಂದು ತಿಂಗಳು ಕಾಯದೆ ವಿಧಿಯಿಲ್ಲ ಎಂದರು.
ದೆಹಲಿ, ಜೂನ್ 10: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿ ತಲುಪಿದ್ದಾರೆ ಮತ್ತು ನಿನ್ನೆ ಬೆಂಗಳೂರಲ್ಲಿದ್ದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಸಹ ದೆಹಲಿಗೆ ಹೋಗಿದ್ದಾರೆ. ನಮ್ಮ ದೆಹಲಿ ವರದಿಗಾರ ಸತೀಶ್ ಅವರೊಂದಿಗೆ ಮಾತಾಡಿದ್ದು, ತನ್ನ ಮತ್ತು ಸಿಎಂ, ಡಿಸಿಎಂ ಭೇಟಿಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಆರ್ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಮತ್ತು 11 ಜನರ ಸಾವಿನ ಬಗ್ಗೆ ವಿವರಣೆ ಕೇಳಲು ಸಿಎಂ ಮತ್ತು ಡಿಸಿಎಂರನ್ನು ಕರೆಸಲಾಗಿದೆ, ಇಂಥ ಘಟನೆಗಳು ನಡೆದಾಗ ಹೈಕಮಾಂಡ್ಗೆ ಮುಖ್ಯಮಂತ್ರಿಯವರು ವಿವರಣೆ ನೀಡಬೇಕಿರುವುದು ಸ್ವಾಭಾವಿಕ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಅಧಿಕಾರ ಶಾಶ್ವತ ಅಲ್ಲ, ಚಕ್ರ ತಿರುಗುತ್ತಲೇ ಇರತ್ತೆ: ರಾಮನಗರ ಹೆಸರು ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಮಾರ್ಮಿಕ ಹೇಳಿಕೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ