ಡ್ರೈವರ್ ಅಚಾತುರ್ಯ; ಕೂದಲೆಳೆಯಲ್ಲಿ ತಪ್ಪಿತು ದುರಂತ; ಆದರೂ ಜೆನಿಲಿಯಾ ಸಿಟ್ಟಾಗಲಿಲ್ಲ
Genilia D'Souza: ಜೆನಿಲಿಯಾ ದೇಶಮುಖ್ ಅವರು ತಮ್ಮ ಮಕ್ಕಳೊಂದಿಗೆ ಕಾರನ್ನು ಹತ್ತುವಾಗ ಚಾಲಕನ ಅಚಾತುರ್ಯದಿಂದ ಅಪಾಯದಿಂದ ತಪ್ಪಿಸಿಕೊಂಡರು. ಕಾರಿನ ಬಾಗಿಲು ತೆರೆದಿರುವಾಗಲೇ ಚಾಲಕ ಕಾರನ್ನು ಚಲಾಯಿಸಿದರೂ, ಜೆನಿಲಿಯಾ ಅವರು ಶಾಂತವಾಗಿ ಪ್ರತಿಕ್ರಿಯಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ತಾಳ್ಮೆ ಮತ್ತು ಸಂಯಮ ನೆಟ್ಟಿಗರನ್ನು ಆಕರ್ಷಿಸಿದೆ.

ಬಾಲಿವುಡ್ (Bollywood) ನಟಿಯರಿಗೆ ಸಂಭವಿಸುವ ಅನೇಕ ಘಟನೆಗಳು ಕ್ಯಾಮೆರಾ ಕಣ್ಣಿಗೆ ಸೆರೆಯಾಗುತ್ತವೆ. ನಟಿ ಜೆನಿಲಿಯಾ ಡಿಸೋಜಾ ದೇಶಮುಖ್ ಅವರ ವಿಷಯದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ಜೆನಿಲಿಯಾ ತಮ್ಮ ಮಕ್ಕಳಾದ ರಯಾನ್ ಮತ್ತು ರಾಹಿಲ್ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡರು. ಒಂದು ವಿಡಿಯೋದಲ್ಲಿ, ಅವರು ಮೂವರು ಕಾರನ್ನು ಹತ್ತಲು ಹೋಗುತ್ತಿರುವುದ ಕಂಡು ಬಂತು. ಜೆನಿಲಿಯಾ ಮಕ್ಕಳೊಂದಿಗೆ ಕಾರನ್ನು ಹತ್ತಲು ಹೋದಾಗ, ಕಾರಿನ ಬಾಗಿಲು ಇನ್ನೂ ತೆರೆದಿತ್ತು ಮತ್ತು ಚಾಲಕ ಕಾರನ್ನು ಓಡಿಸಿಕೊಂಡು ಹೋಗಿರುವುದು ಬಂತು. ಜೆನೆಲಿಯಾ ಒಳಗೆ ಹೋಗಲು ಇನ್ನೂ ಸಾಧ್ಯವಾಗಿರಲಿಲ್ಲ. ಆದರೆ ಈ ಘಟನೆಯ ನಂತರ ಅವರ ಪ್ರತಿಕ್ರಿಯೆಯನ್ನು ನೋಡಿದ ನಂತರ, ಜನರು ಅವರನ್ನು ತುಂಬಾ ಹೊಗಳುತ್ತಿದ್ದಾರೆ.
ಚಾಲಕ ಕಾರನ್ನು ಮುಂದಕ್ಕೆ ಓಡಿಸಲು ಪ್ರಾರಂಭಿಸಿದಾಗಲೂ ಜೆನಿಲಿಯಾ ಕೋಪಗೊಳ್ಳಲಿಲ್ಲ. ಅವರು ಕೆಲವು ಸೆಕೆಂಡುಗಳು ಕಾಯುತ್ತಿದ್ದರು. ಚಾಲಕ ಬೇಗನೆ ಕಾರನ್ನು ನಿಲ್ಲಿಸಿ ನಟಿಯನ್ನು ಸುರಕ್ಷಿತವಾಗಿ ಕಾರಿಗೆ ಹತ್ತಲು ಅವಕಾಶ ಮಾಡಿಕೊಟ್ಟನು. ಆದರೆ ಈ ಘಟನೆಯ ನಂತರ, ಜೆನೆಲಿಯಾ ಜಾಗದಲ್ಲಿ ಬೇರೆ ಯಾವುದೇ ನಟಿ ಇದ್ದಿದ್ದರೂ ಸಹ, ಅವರು ಕೋಪಗೊಳ್ಳುತ್ತಿದ್ದರು. ಆದರೆ ಜೆನೆಲಿಯಾ ಅಂತಹದ್ದೇನೂ ಮಾಡಲಿಲ್ಲ.
ನೆಟ್ಟಿಗರು ಜೆನಿಲಿಯಾ ಸ್ವಭಾವವನ್ನು ಇಷ್ಟಪಟ್ಟಿದ್ದಾರೆ. ಅವರ ಶಾಂತ ಮತ್ತು ಅರ್ಥಮಾಡಿಕೊಳ್ಳುವ ಸ್ವಭಾವ ಹಾಗೂ ಆ ಸಮಯದಲ್ಲಿ ಅವರು ತೋರಿಸಿದ ತಾಳ್ಮೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಈ ಬಾರಿ, ಜೆನೆಲಿಯಾ ಟಿ-ಶರ್ಟ್ ಮಿಡಿ ಡ್ರೆಸ್ ಧರಿಸಿದ್ದರು. ಅವರ ಕೇಶ ವಿನ್ಯಾಸದ ವಿಷಯಕ್ಕೆ ಬಂದರೆ, ಅವರು ತಮ್ಮ ಕೂದಲನ್ನು ನಯವಾದ ಪೋನಿಟೇಲ್‌ನಲ್ಲಿ ಕಟ್ಟಿಕೊಂಡು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅಂಗಾಗ ದಾನ ಮಾಡುವ ಘೋಷಣೆ ಮಾಡಿದ ಜೆನಿಲಿಯಾ-ರಿತೇಷ್
ಜೆನಿಲಿಯಾ ಅವರು ಆಮಿರ್ ಖಾನ್ ಅವರೊಂದಿಗೆ ಮುಂಬರುವ ‘ಸಿತಾರ್ ಜಮೀನ್ ಪರ್’ ಚಿತ್ರದಲ್ಲಿ ದೊಡ್ಡ ಪರದೆಗೆ ಮರಳುವ ಮೂಲಕ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಆಮಿರ್ ಖಾನ್ ಅವರ ಪ್ರೇಯಸಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಜಾನೆ ತು… ಯಾ ಜಾನೆ ನಾ’ ಚಿತ್ರದ ನಂತರ ಆಮಿರ್ ಖಾನ್ ಪ್ರೊಡಕ್ಷನ್ಸ್ ಜೊತೆಗಿನ ಅವರ ಮತ್ತೊಂದು ಸಹಯೋಗ ಇದು. ಇದಲ್ಲದೆ, ಕನ್ನಡದ ಕಿರೀಟಿ ನಟಿಸುತ್ತಿರುವ ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ‘ಜೂನಿಯರ್’ ಟೈಟಲರ್ ಇಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



