AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನ್ ಚಿತ್ರೋತ್ಸವದಲ್ಲಿ ದಕ್ಷಿಣದ ನಟನ ಬಗ್ಗೆ ಆಲಿಯಾ ಭಟ್ ಮಾತು

Alia Bhatt: ನಟಿ ಆಲಿಯಾ ಭಟ್ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ಕೆಲವು ಸಂದರ್ಶನಗಳನ್ನು ಸಹ ನೀಡಿದ್ದಾರೆ. ನಟಿ ಆಲಿಯಾ ಭಟ್ ದಕ್ಷಿಣ ಭಾರತದ ಪ್ರತಿಭಾವಂತ ನಟರೊಬ್ಬರ ಬಗ್ಗೆ ಬಹಳ ಗೌರವದಿಂದ ಮಾತನಾಡಿರುವ ಆಲಿಯಾ ಭಟ್, ಅವರೊಟ್ಟಿಗೆ ಕೆಲಸ ಮಾಡಲು ಕಾತರಳಾಗಿದ್ದೇನೆ ಎಂದಿದ್ದಾರೆ. ಯಾರು ಆ ನಟ?

ಕಾನ್ ಚಿತ್ರೋತ್ಸವದಲ್ಲಿ ದಕ್ಷಿಣದ ನಟನ ಬಗ್ಗೆ ಆಲಿಯಾ ಭಟ್ ಮಾತು
Alia Bhatt
ಮಂಜುನಾಥ ಸಿ.
|

Updated on: May 26, 2025 | 12:03 PM

Share

ನಟಿ ಆಲಿಯಾ ಭಟ್ (Alia Bhatt) ಪ್ರತಿಷ್ಠಿತ ಕಾನ್ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಭಾರತದ ಹಲವಾರು ಮಂದಿ ನಟ-ನಟಿಯರು ಭಾಗಿ ಆಗಿದ್ದರು. ಆದರೆ ಸಮಾರೋಪ ಸಮಾರಂಭದ ಅತಿಥಿಯಾಗಿ ಆಲಿಯಾ ಭಾಗವಹಿಸಿದ್ದು ವಿಶೇಷವಾಗಿತ್ತು. ಕಾನ್​ನಲ್ಲಿ ಸಂವಾದ ಕಾರ್ಯಕ್ರಮದಲ್ಲಿಯೂ ಸಹ ಆಲಿಯಾ ಭಾಗವಹಿಸಿದ್ದರು. ಈ ವೇಳೆ ಕೇಳಲಾದ ಹಲವು ಪ್ರಶ್ನೆಗಳಿಗೆ ಆಲಿಯಾ ಭಟ್ ಉತ್ತರ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಒಬ್ಬ ಪ್ರತಿಭಾವಂತ ನಟನ ಬಗ್ಗೆಯೂ ಆಲಿಯಾ ಮಾತನಾಡಿದ್ದು ವಿಶೇಷ.

ಕಾನ್​​ನಲ್ಲಿ ಬ್ರುಟ್ ಜೊತೆಗಿನ ಸಂದರ್ಶನದಲ್ಲಿ ಫಹಾದ್ ಫಾಸಿಲ್ ಬಗ್ಗೆ ಮಾತನಾಡಿರುವ ಆಲಿಯಾ ಭಟ್, ‘ನನಗೆ ಫಹಾದ್ ಫಾಸಿಲ್ ನಟನೆಯ ಬಹಳ ಇಷ್ಟವಾಗುತ್ತದೆ. ಅವರ ನಟನೆಯ ‘ಆವೇಶಂ’ ಸಿನಿಮಾ ನನ್ನ ಅಚ್ಚು ಮೆಚ್ಚಿನ ಸಿನಿಮಾಗಳಲ್ಲಿ ಒಂದು. ನಾನು ಫಹಾದ್ ಫಾಸಿಲ್ ಪ್ರತಿಭೆಯನ್ನು ಬಹಳ ಗೌರವಿಸುತ್ತೇನೆ. ಫಹಾದ್ ಫಾಸಿಲ್ ಒಬ್ಬ ಅದ್ಭುತ ಪರ್ಫಾರ್ಮರ್. ಅವರೊಂದಿಗೆ ಕೆಲಸ ಮಾಡುವುದು ನನ್ನ ಪಾಲಿಗೆ ಗೌರವದಾಯಕವಾದುದು, ಎಂದಾದರೂ ಅದಕ್ಕಾಗಿ ಎದುರು ನೋಡುತ್ತೇನೆ’ ಎಂದಿದ್ದಾರೆ.

ಫಹಾದ್ ಫಾಸಿಲ್ ಮಾತ್ರವೇ ಅಲ್ಲದೆ ಒಟ್ಟಾರೆ ಮಲಯಾಳಂ ಚಿತ್ರರಂಗದ ಬಗ್ಗೆ ಗೌರವದಿಂದ ಮಾತನಾಡಿದ ಆಲಿಯಾ ಭಟ್, ‘ಮಲಯಾಳಂ ಚಿತ್ರರಂಗ ಅದ್ಭುತವಾದ ಸಿನಿಮಾಗಳನ್ನು ನೀಡುತ್ತಿದೆ. ಆ ಚಿತ್ರರಂಗದ ಬಗ್ಗೆ ಬಹಳ ಗೌರವ ಇದೆ. ‘ಡಾರ್ಲಿಂಗ್ಸ್’ ಸಿನಿಮಾನಲ್ಲಿ ನಾನು ಮಲಯಾಳಂ ನಟ ರೋಷನ್ ಮ್ಯಾಥ್ಯು ಜೊತೆ ನಟಿಸಿದೆ. ಅವರು ಅದ್ಭುತವಾದ ಪ್ರತಿಭೆ ಹೊಂದಿದ್ದಾರೆ. ಅವರು ಹಿಂದಿ ಪ್ರೇಕ್ಷಕರಿಗೂ ಮೆಚ್ಚಿನ ನಟ ಆಗಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ:ತಾಯಿಯಾದ ಬಳಿಕ ಆಗಿರುವ ಬದಲಾವಣೆಗಳ ಬಗ್ಗೆ ಆಲಿಯಾ ಭಟ್ ಮಾತು

ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳ ಸಿನಿಮಾಗಳನ್ನು ಮಾಡುತ್ತೀರ ಎಂಬ ಪ್ರಶ್ನೆಗೆ, ‘ಪ್ರಾದೇಶಿಕ, ಬಾಲಿವುಡ್ ಎಂಬ ಬೇಧ ಏನು ಇಲ್ಲ ಎಂಬುದನ್ನು ಕೋವಿಡ್ ನಮಗೆ ಅರ್ಥ ಮಾಡಿಸಿದೆ. ನಾವೆಲ್ಲರೂ ಸಹ ಒಂದೇ ಕ್ಷೇತ್ರಕ್ಕೆ ಸೇರಿದವರು ಹಾಗಾಗಿ ನಮ್ಮಲ್ಲಿ ಭಿನ್ನತೆ ಇಲ್ಲ. ನಿಮ್ಮ ಕೆಲಸವನ್ನು ವಿಶ್ವದ ಯಾವುದೇ ಮೂಲೆಯ ಜನರಿಗಾದರೂ ನೀವು ತಲುಪಿಸಬಹುದು. ಹಾಗೆಯೇ ನಾವೂ ಸಹ ಯಾವುದೇ ಕಂಟೆಂಟ್ ಅನ್ನಾದರೂ ನೋಡಬಹುದು. ಇತ್ತೀಚೆಗಷ್ಟೆ ಆಸ್ಕರ್ ವಿಜೇತ ಅನಿಮೇಟೆಡ್ ಸಿನಿಮಾ ನೋಡುತ್ತಿದ್ದೆ. ಒಟಿಟಿ ಎಂಬ ವೇದಿಕೆ ಇರುವುದರಿಂದಲೇ ಯಾವುದೋ ಮೂಲೆಯಲ್ಲಿ ಮಾಡಲಾದ ಸಿನಿಮಾವನ್ನು ನೋಡಲು, ಅಲ್ಲಿಯ ಜನರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ’ ಎನಿಸಿತು ಎಂದಿದ್ದಾರೆ ಆಲಿಯಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!