ಆಲಿಯಾ ಭಟ್ ಮತ್ತೆ ಪ್ರೆಗ್ನೆಂಟ್? ವೈರಲ್ ಆಯ್ತು ಬೇಬಿ ಬಂಪ್ ವಿಡಿಯೋ
ಆಲಿಯಾ ಭಟ್ ಅವರ ಹೊಟ್ಟೆ ಸ್ವಲ್ಪ ಉಬ್ಬಿರುವಂತೆ ಕಾಣಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಅವರು ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ ಎಂಬ ಊಹಾಪೋಹಗಳು ಹರಡುತ್ತಿವೆ. ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಅವರು ಕಾಣಿಸಿಕೊಂಡ ರೀತಿಯಿಂದ ಈ ಚರ್ಚೆ ಹೆಚ್ಚಾಗಿದೆ. ಆಲಿಯಾ ಮತ್ತು ರಣಬೀರ್ ಕಪೂರ್ ದಂಪತಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆಲಿಯಾ ಭಟ್ (Alia Bhatt) ಅವರು 2022ರ ನವೆಂಬರ್ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈಗ ಮಗುವಿಗೆ ಎರಡೂವರೆ ವರ್ಷ. ಹೀಗಿರುವಾಗಲೇ ಆಲಿಯಾ ಭಟ್ ಅವರು ಮತ್ತೊಂದು ಮಗು ಹೊಂದಲು ರೆಡಿ ಆಗುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಇದಕ್ಕೆ ಸಾಕ್ಷಿ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಆಲಿಯಾ ಭಟ್ ಅವರು ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿ ಆಗಿದ್ದಾರೆ. ಫ್ರಾನ್ಸ್ನಲ್ಲಿ ನಡೆಯುತ್ತಿರುವ ಈ ಸಿನಿಮೋತ್ಸವದಲ್ಲಿ ಆಲಿಯಾ ಮೊದಲ ಬಾರಿಗೆ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದಾರೆ. ಅವರು ಪೋಸ್ ಕೊಡುವಾಗ ಹೊಟ್ಟೆ ಸ್ವಲ್ಪ ಮುಂದೆ ಬಂದಂತೆ ಕಾಣಿಸಿದೆ. ಇದರಿಂದ ಅವರು ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಆಲಿಯಾ ಭಟ್ ಅವರು ಮದುವೆ ಆದ ಕೇವಲ ಏಳು ತಿಂಗಳಿಗೆ ಮಗುವಿಗೆ ಜನ್ಮನೀಡಿದರು. ಮದುವೆಗೂ ಮೊದಲೇ ಅವರು ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂತು. ಆದರೆ, ಮಗು ಏಳು ತಿಂಗಳಿಗೆ ಜನಿಸಿದೆ ಎಂದು ಕುಟುಂಬದವರು ಹೇಳಿಕೊಂಡರು. ಆ ಬಳಿಕ ಆಲಿಯಾ ಭಟ್ ಅವರು ವಿವಿಧ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡರು. ಈಗ ಅವರ ಕೈಯಲ್ಲಿ ಕೆಲ ಪ್ರಮುಖ ಸಿನಿಮಾಗಳು ಇವೆ. ಹೀಗಿರುವಾಗಲೇ ಅವರಿಗೆ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಅವರಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.
Alia Bhatt at the L’Oreal Lights On Women Awards at Cannes byu/Big-Criticism-8926 inBollyBlindsNGossip
‘ಆಲಿಯಾ ಪ್ರೆಗ್ನೆಂಟ್ ರೀತಿ ಕಾಣಿಸುತ್ತಾರೆ’ ಎಂದು ಕೆಲವರು ಹೇಳಿದ್ದಾರೆ. ‘ಇವರು ಮತ್ತೊಮ್ಮೆ ಪ್ರೆಗ್ನೆಂಟ್ ಆಗಿದ್ದಾರೆ’ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಈ ವಿಡಿಯೋಗೆ ಬಹುತೇಕರು ಇದೇ ರೀತಿಯ ಕಮೆಂಟ್ ಮಾಡಿದ್ದಾರೆ. ಇದರಿಂದ ಕುತೂಹಲ ಮತ್ತಷ್ಟು ಜೋರಾಗಿದೆ. ಈ ಬಗ್ಗೆ ಆಲಿಯಾ-ರಣಬೀರ್ ದಂಪತಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಮಿಂಚು ಹರಿಸಿದ ಆಲಿಯಾ ಭಟ್
ಆಲಿಯಾ ಭಟ್ 2024ರಲ್ಲಿ ‘ಜಿಗ್ರಾ’ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಈ ಚಿತ್ರ ಸೂಪರ್ ಹಿಟ್ ಆಗಿದೆ. 2025ರಲ್ಲಿ ‘ಆಲ್ಫಾ’ ಹೆಸರಿನ ಸಿನಿಮಾ ಮಾಡಬೇಕಿದೆ. ಇದು ಯಶ್ ರಾಜ್ ಫಿಲ್ಮ್ಸ್ ಚಿತ್ರದ ಸ್ಪೈ ಯೂನಿವರ್ಸ್ ಚಿತ್ರದ ಭಾಗವಾಗಿದೆ. ಇದಲ್ಲದೆ, ‘ಲವ್ ಆ್ಯಂಡ್ ವಾರ್’ ಚಿತ್ರ ಕೂಡ ಮಾಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:18 pm, Sat, 24 May 25








