AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗಾಗ ದಾನ ಮಾಡುವ ಘೋಷಣೆ ಮಾಡಿದ ಜೆನಿಲಿಯಾ-ರಿತೇಷ್

ಅಂಗಾಗ ದಾನಕ್ಕೆ ಬದುಕಿದ್ದಾಗಲೇ ಸಹಿ ಹಾಕಬೇಕು. ಈ ರೀತಿ ಸಹಿ ಹಾಕಿದ ವ್ಯಕ್ತಿ ನಿಧನ ಹೊಂದಿದ ಬಳಿಕ ಕಣ್ಣು ಮೊದಲಾದ ಅಂಗಾಗಳನ್ನು ಪಡೆಯಲಾಗುತ್ತದೆ. ರಿತೇಷ್ ಹಾಗೂ ಜೆನಿಲಿಯಾ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ದಂಪತಿ ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಅಂಗಾಗ ದಾನ ಮಾಡುವ ಘೋಷಣೆ ಮಾಡಿದ ಜೆನಿಲಿಯಾ-ರಿತೇಷ್
ಜೆನಿಲಿಯಾ-ರಿತೇಷ್
ರಾಜೇಶ್ ದುಗ್ಗುಮನೆ
|

Updated on: Jul 08, 2024 | 10:45 AM

Share

ಬಾಲಿವುಡ್​ನ ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲಿ ಜೆನಿಲಿಯಾ ಡಿಸೋಜಾ ಹಾಗು ರಿತೇಷ್ ದೇಶ್​ಮುಖ್ ಕೂಡ ಒಬ್ಬರು. ಇಬ್ಬರೂ ಪ್ರೀತಿಸಿ ಮದುವೆ ಆದವರು. ಈಗ ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ಸೆಲೆಬ್ರಿಟಿ ಜೋಡಿ ಅಂಗಾಗ ದಾನ ಮಾಡುವ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ದಂಪತಿಗೆ ಧನ್ಯವಾದ ಹೇಳಿದೆ. ರಿತೇಷ್ ಅವರ ವಿಡಿಯೋನ ಇವರು ಪೋಸ್ಟ್ ಮಾಡಿದ್ದಾರೆ.

ಬದುಕಿದ್ದಾಗಲೇ ಅಂಗಾಗ ದಾನಕ್ಕೆ ಸಹಿ ಹಾಕಬೇಕು. ಈ ರೀತಿ ಸಹಿ ಹಾಕಿದ ವ್ಯಕ್ತಿ ನಿಧನ ಹೊಂದಿದ ಬಳಿಕ ಕಣ್ಣು ಮೊದಲಾದ ಅಂಗಾಗಳನ್ನು ಪಡೆಯಲಾಗುತ್ತದೆ. ಇದನ್ನು ಅಗತ್ಯ ಇರೋ ವ್ಯಕ್ತಿಗಳಿಗೆ ನೀಡಲಾಗುತ್ತದೆ. ರಿತೇಷ್ ಹಾಗೂ ಜೆನಿಲಿಯಾ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಮೊದಲು ರಿತೇಷ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ‘ನಾನು ಹಾಗೂ ಜೆನಿಲಿಯಾ ನಮ್ಮ ಅಂಗಾಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದೇವೆ’ ಎಂದು ರಿತೇಷ್ ಹೇಳಿದ್ದರು. ಈ ವಿಚಾರವನ್ನು ಜೆನಿಲಿಯಾ ಕೂಡ ಖಚಿತಪಡಿಸಿದ್ದರು. ಈ ವಿಡಿಯೋನ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಹಂಚಿಕೊಂಡಿದೆ. ‘ರಿತೇಷ್ ಹಾಗೂ ಜೆನಿಲಿಯಾ ದಂಪತಿಗೆ ಧನ್ಯವಾದಗಳು. ಅವರು ಅಂಗಾಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಇವರ ನಿರ್ಧಾರ ಅನೇಕರಿಗೆ ಸ್ಫೂರ್ತಿದಾಯಕವಾಗಲಿ’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ‘ಹೌಸ್​ಫುಲ್ 5’ ಸಿನಿಮಾದ ಭಾಗವಾಗಲಿದ್ದಾರೆ ಅಭಿಷೇಕ್ ಬಚ್ಚನ್; ನಗಿಸೋಕೆ ರೆಡಿ ಆದ ಸ್ಟಾರ್ ಹೀರೋ

ಸಿನಿಮಾ ವಿಚಾರಕ್ಕೆ ಬರೋದಾದರೆ ಸೋನಾಕ್ಷಿ ಸಿನ್ಹಾ, ಶಖೀಬ್ ಸಲೀಮ್ ಜೊತೆ ರಿತೇಷ್ ಅವರು ‘ಕಕುಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದಿತ್ಯ ಸರ್​​ಪೋತ್​ದಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜುಲೈ 12ರಂದು ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More