‘ನಾವು ಯಾರಿಗೆ ಹುಟ್ಟಿದ್ದೇವೆ?’; ಕರಣ್ ಜೋಹರ್​ಗೆ ಮಕ್ಕಳಿಂದ ಎದುರಾಗುತ್ತಿದೆ ಉತ್ತರಿಸಲಾಗದ ಪ್ರಶ್ನೆ

ತಮ್ಮ ಮಕ್ಕಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸಲು ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅವರಿಗೆ ವಿಶೇಷ ಸಹಾಯದ ಅಗತ್ಯವಿದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಾವು ಯಾರಿಗೆ ಹುಟ್ಟಿದ್ದೇವೆ ಎಂದು ಅವರ ಮಕ್ಕಳು ಕೇಳುತ್ತಿದ್ದಾರೆ.

‘ನಾವು ಯಾರಿಗೆ ಹುಟ್ಟಿದ್ದೇವೆ?’; ಕರಣ್ ಜೋಹರ್​ಗೆ ಮಕ್ಕಳಿಂದ ಎದುರಾಗುತ್ತಿದೆ ಉತ್ತರಿಸಲಾಗದ ಪ್ರಶ್ನೆ
ಕರಣ್ ಹಾಗೂ ಮಕ್ಕಳು
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jul 08, 2024 | 12:08 PM

ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ 2017ರಲ್ಲಿ ಬಾಡಿಗೆ ತಾಯ್ತನದ ಮೂಲಕ ಎರಡು ಮಕ್ಕಳ ತಂದೆಯಾದರು. ಅವರ ಮಕ್ಕಳ ಹೆಸರು ಯಶ್ ಮತ್ತು ರೂಹಿ. ವಿವಿಧ ಸಂದರ್ಶನಗಳಲ್ಲಿ, ಕರಣ್ ಅವರು ಮಕ್ಕಳನ್ನು ಸಾಕೋದು ಎಷ್ಟು ಕಷ್ಟ ಎಂದು ಹೇಳಿಕೊಂಡಿದ್ದಾರೆ. ಕರಣ್ ತಮ್ಮ ತಾಯಿ ಹಿರೂ ಜೊತೆಗೆ ಎರಡೂ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ. ಅವರ ಮಕ್ಕಳು ತಮ್ಮ ತಾಯಿ ಮತ್ತು ಹುಟ್ಟಿನ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಮಕ್ಕಳ ಈ ಪ್ರಶ್ನೆಗಳಿಗೆ ಉತ್ತರಿಸಲು ಅಗತ್ಯ ಮಾರ್ಗದರ್ಶನವನ್ನೂ ತೆಗೆದುಕೊಳ್ಳಬೇಕು ಎಂದರು.

ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕರಣ್ ಮಾತನಾಡಿದ್ದಾರೆ. ‘ನಮ್ಮದು ಆಧುನಿಕ ಕುಟುಂಬ. ಇದೊಂದು ವಿಚಿತ್ರ ಸನ್ನಿವೇಶ. ಹಾಗಾಗಿ ಮಕ್ಕಳಿಂದ ನಾನಾ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ನಾವು ಯಾರ ಹೊಟ್ಟೆಯಲ್ಲಿ ಹುಟ್ಟಿದ್ದೇವೆ? ನಮ್ಮ ಅಮ್ಮ ನಿಜವಾದ ಅಮ್ಮ ಅಲ್ಲ, ಅವರು (ಹಿರೂ) ನಮ್ಮ ಅಜ್ಜಿ ಎನ್ನುತ್ತಾರೆ. ಅವರಿಗೆ ಯಾವ ರೀತಿಯಲ್ಲಿ ಉತ್ತರಗಳನ್ನು ನೀಡಬೇಕೆಂದು ನಾನು ಅರ್ಥಮಾಡಿಕೊಳ್ಳಬೇಕಿದೆ. ಹೀಗಾಗಿ, ನಾನೇ ಕೌನ್ಸೆಲಿಂಗ್‌ ಹೋಗುತ್ತಿದ್ದೇನೆ. ಪೋಷಕರಾಗಿರುವುದು ಎಂದಿಗೂ ಸುಲಭವಲ್ಲ’ ಎಂದಿದ್ದಾರೆ ಅವರು.

‘ನನ್ನ ಮಗ ಸಕ್ಕರೆ ತಿನ್ನುವುದನ್ನು ನೋಡಿದಾಗ, ಅವನು ತೂಕ ಹೆಚ್ಚಾಗುತ್ತಿರುವುದನ್ನು ನೋಡಿದಾಗ ನನಗೆ ಅವನ ಮೇಲೆ ಕೋಪ ಬರುತ್ತದೆ. ಒಮ್ಮೆ ನಾನು ಅವನ ಮೇಲೆ ತುಂಬಾ ಕೋಪಗೊಂಡಿದ್ದೆ. ಆದರೆ ನಂತರ ನಾನು ಅವನಲ್ಲಿ ಕ್ಷಮೆಯಾಚಿಸಿದೆ. ಜೀವನವನ್ನು ಸಂತೃಪ್ತಿಯಿಂದ ಬದುಕಲು ಬಯಸುವ ವಯಸ್ಸು ಇದು. ಅವನು ಸಂತೋಷದಿಂದ ಮತ್ತು ಉತ್ಸಾಹದಿಂದ ಇರಬೇಕೆಂದು ನಾನು ಬಯಸುತ್ತೇನೆ. ನನ್ನ ಜೀವನದಲ್ಲಿ ನಾನು ಮಾಡಲು ಸಾಧ್ಯವಾಗದ ಎಲ್ಲವನ್ನೂ ಮಾಡಲು ನಾನು ಅವನನ್ನು ಕೇಳುತ್ತೇನೆ’ ಎಂದಿದ್ದಾರೆ ಕರಣ್.

‘ಮಕ್ಕಳ ಮೇಲೆ ಷರತ್ತುಗಳನ್ನು ವಿಧಿಸಲು ನಾನು ಬಯಸುವುದಿಲ್ಲ. ಅವರ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅಧಿಕಾರ ನೀಡಬೇಕೆಂದು ನಾನು ಬಯಸುತ್ತೇನೆ’ ಎಂಬುದು ಕರಣ್ ಜೋಹರ್ ಮಾತು.

ಇದನ್ನೂ ಓದಿ: ‘ಒಬ್ಬ ರಾಜ, ಒಬ್ಬಳು ರಾಣಿ, ಆದರೆ ಜಾತಿ ಬೇರೆ ಬೇರೆ’: ಕರಣ್ ಜೋಹರ್ ಹೊಸ ಸಿನಿಮಾ

2020ರಲ್ಲಿ ಯಶ್ ಮತ್ತು ರೂಹಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕರಣ್ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಾಕಿದ್ದರು. ‘ನಾನು ಸಮಾಜದ ದೃಷ್ಟಿಯಿಂದ ಸಿಂಗಲ್ ಪೇರೆಂಟ್. ಆದರೆ ವಾಸ್ತವವಾಗಿ ನಾನು ಆ ರೀತಿ ಅಲ್ಲ. ನನ್ನ ತಾಯಿ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಆಕೆಯ ಬೆಂಬಲವಿಲ್ಲದೆ ನಾನು ಎಂದಿಗೂ ಇಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದರು. ಈ ಮೂಲಕ ಮಕ್ಕಳನ್ನು ಬೆಳೆಸಲು ಕರಣ್ ತಾಯಿ ಎಷ್ಟು ಶ್ರಮ ಹಾಕುತ್ತಿದ್ದಾರೆ ಎಂಬುದನ್ನು ವಿವರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:07 pm, Mon, 8 July 24

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ