‘ಬಿಕಿನಿ ಧರಿಸಿಲ್ಲ ಎಂದು ಆ ಫೋಟೋಗ್ರಾಫರ್​ ಕೋಪ ಮಾಡಿಕೊಂಡಿದ್ದ’: ಮನಿಷಾ ಕೊಯಿರಾಲಾ

‘ಹೀರಾಮಂಡಿ’ ವೆಬ್​ ಸರಣಿ ಮೂಲಕ ನಟಿ ಮನಿಷಾ ಕೊಯಿರಾಲಾ ಅವರು ದೊಡ್ಡ ಯಶಸ್ಸು ಪಡೆದಿದ್ದಾರೆ. ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು. ಬಿಕಿನಿ ಧರಿಸುವಂತೆ ಫೋಟೋಗ್ರಾಫರ್​ಗಳು ಮನಿಷಾಗೆ ಒತ್ತಾಯ ಮಾಡುತ್ತಿದ್ದರು. ಆ ಸಂದರ್ಭ ಹೇಗಿತ್ತು ಎಂಬುದನ್ನು ಮನಿಷಾ ಈಗ ವಿವರಿಸಿದ್ದಾರೆ.

‘ಬಿಕಿನಿ ಧರಿಸಿಲ್ಲ ಎಂದು ಆ ಫೋಟೋಗ್ರಾಫರ್​ ಕೋಪ ಮಾಡಿಕೊಂಡಿದ್ದ’: ಮನಿಷಾ ಕೊಯಿರಾಲಾ
ಮನಿಷಾ ಕೊಯಿರಾಲಾ
Follow us
|

Updated on: Jul 08, 2024 | 9:28 PM

ನಟಿ ಮನಿಷಾ ಕೊಯಿರಾಲಾ ಅವರು ಸ್ಟಾರ್​ ನಟಿಯಾಗಿ ಬೆಳೆದಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಅವರು ಅನೇಕ ಕಹಿ ಘಟನೆಗಳನ್ನು ಎದುರಿಸಿದ್ದರು. ಆ ಪೈಕಿ ಒಂದು ಘಟನೆಯ ಬಗ್ಗೆ ಈಗ ಅವರು ಮಾತನಾಡಿದ್ದಾರೆ. 90ರ ದಶಕದಲ್ಲಿ ತಾವು ಅನುಭವಿಸಿದ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ನಟಿಯಾಗಬೇಕು ಎಂಬ ಹಂಬಲ ಹೊಂದಿದ್ದ ಅವರು ಫೋಟೋಶೂಟ್​ ಮಾಡಿಸಲು ತೆರಳಿದ್ದರು. ಆಗ ಫೋಟೋಗ್ರಾಫರ್​ ನಡೆದುಕೊಂಡ ರೀತಿಯ ಬಗ್ಗೆ ಮನಿಷಾಗೆ ತೀವ್ರ ಅಸಮಾಧಾನ ಇದೆ. ಬಿಕಿನಿ ಧರಿಸುವಂತೆ ಫೋಟೋಗ್ರಾಫರ್​ ಒತ್ತಾಯ ಮಾಡಿದ್ದ ಎಂಬುದನ್ನು ಮನಿಷಾ ಕೊಯಿರಾಲಾ ಈಗ ನೆನಪು ಮಾಡಿಕೊಂಡಿದ್ದಾರೆ.

‘ನನ್ನ ವೃತ್ತಿಜೀವನದ ಆರಂಭದಲ್ಲಿ ಫೋಟೋಶೂಟ್​ ಮಾಡಿಸಲು ಹೇಳಿದ್ದರು. ಆಗ ತುಂಬ ಫೇಮಸ್​ ಆಗಿದ್ದ ಫೋಟೋಗ್ರಾಫರ್​ ಒಬ್ಬರು ಇದ್ದರು. ಅಮ್ಮನ ಜೊತೆ ನಾನು ಅವರ ಬಳಿ ಹೋದೆ. ನೀವೇ ಮುಂದಿನ ಸೂಪರ್​ ಸ್ಟಾರ್​ ಎಂದು ಆ ಫೋಟೋಗ್ರಾಫರ್ ನನಗೆ ಹೇಳಿದರು. ನಂತರ ಒಂದು ಬಿಕಿನಿ ತಂದುಕೊಟ್ಟು, ಅದನ್ನು ಧರಿಸು ಅಂತ ಒತ್ತಾಯಿಸಿದರು’ ಎಂದಿದ್ದಾರೆ ಮನಿಷಾ ಕೊಯಿರಾಲಾ.

‘ಸರ್​, ನಾನು ಇದನ್ನು ಬೀಚ್​ಗೆ ಹೋದಾಗ ಅಥವಾ ಈಜಲು ಹೋದಾಗ ಮಾತ್ರ ಧರಿಸುತ್ತೇನೆ. ಒಂದು ವೇಳೆ ಈ ರೀತಿಯಲ್ಲಿ ನಾನು ಸಿನಿಮಾ ಅವಕಾಶ ಪಡೆಯಬೇಕು ಎಂಬುದಾದರೆ ಅದು ನನಗೆ ಬೇಡ. ನಾನು ಬಿಕಿನಿ ಧರಿಸುವುದಿಲ್ಲ. ನನ್ನ ಫೋಟೋ ತೆಗೆಯುವುದಾದರೆ ಪೂರ್ತಿ ಬಟ್ಟೆಯಲ್ಲೇ ತೆಗೆಯಿರಿ ಅಂತ ಅವರಿಗೆ ನೇರವಾಗಿ ಹೇಳಿದೆ’ ಎಂದು ಆ ಘಟನೆಯನ್ನು ಮನಿಷಾ ಕೊಯಿರಾಲಾ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್​ ಮಾಡಿದ್ದರು ಸಲ್ಮಾನ್​ ಖಾನ್​

ಮನಿಷಾ ನೀಡಿದ ಉತ್ತರದಿಂದ ಆ ಫೋಟೋಗ್ರಾಫರ್​ಗೆ ಕೋಪ ಬಂದಿತ್ತು. ‘ಮಣ್ಣು ಹಸಿಯಾಗಲು ಒಪ್ಪದಿದ್ದರೆ ನಾನು ಮೂರ್ತಿ ಮಾಡಲು ಹೇಗೆ ಸಾಧ್ಯ’ ಎಂದು ಆತ ಸಿಟ್ಟುಮಾಡಿಕೊಂಡಿದ್ದ. ‘ಇದು ಅಂಥ ಜನರ ಮನಸ್ಥಿತಿ. ಎಲ್ಲರೂ ಹೀಗೆ ಇರುವುದಿಲ್ಲ. ನಾನು ದೊಡ್ಡ ಸೆಲೆಬ್ರಿಟಿ ಆದ ಬಳಿಕ ಅದೇ ವ್ಯಕ್ತಿ ನನ್ನ ಫೋಟೋಶೂಟ್​ ಮಾಡಿದ. ಅವರಿಗೆ ನಾನು ಅವಮಾನ ಮಾಡುತ್ತಿಲ್ಲ. ಆದರೆ ಅವರ ತಿಳಿವಳಿಕೆಯೇ ಅಷ್ಟು. ಆದ್ದರಿಂದ ಅವರು ಆ ರೀತಿ ವರ್ತಿಸಿದ್ದರು’ ಎಂದಿದ್ದಾರೆ ಮನಿಷಾ ಕೊಯಿರಾಲಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಸದನದಲ್ಲಿ ನಡೆಯುತ್ತಿರುವ ಚರ್ಚೆಗಳು ಕಳವಳಕಾರಿ ಮತ್ತು ವ್ಯರ್ಥ ಅನಿಸುತ್ತಿವೆ
ಸದನದಲ್ಲಿ ನಡೆಯುತ್ತಿರುವ ಚರ್ಚೆಗಳು ಕಳವಳಕಾರಿ ಮತ್ತು ವ್ಯರ್ಥ ಅನಿಸುತ್ತಿವೆ
ಗಾಯಾಳು ನೆರವಿಗೆ ಧಾವಿಸದ ಪೊಲೀಸ್ರು, ಮಾನವೀಯತೆ ಮರೆತರಾ?
ಗಾಯಾಳು ನೆರವಿಗೆ ಧಾವಿಸದ ಪೊಲೀಸ್ರು, ಮಾನವೀಯತೆ ಮರೆತರಾ?
ಚುನಾವಣಾ ಸೋಲುಗಳಿಗೆ ಕುಮಾರಸ್ವಾಮಿ ಕುಟುಂಬ ಬೇರೆಯವರನ್ನು ದೂಷಿಸುತ್ತದೆ!
ಚುನಾವಣಾ ಸೋಲುಗಳಿಗೆ ಕುಮಾರಸ್ವಾಮಿ ಕುಟುಂಬ ಬೇರೆಯವರನ್ನು ದೂಷಿಸುತ್ತದೆ!
ಬೆಂಗಳೂರಲ್ಲಿ ಹೆಚ್ಚಿದ ಪುಂಡರ ಹುಚ್ಚಾಟ; ಕಾರಿನ ಹಿಂಭಾಗ ನೇತಾಡಿ ಪ್ರಯಾಣ
ಬೆಂಗಳೂರಲ್ಲಿ ಹೆಚ್ಚಿದ ಪುಂಡರ ಹುಚ್ಚಾಟ; ಕಾರಿನ ಹಿಂಭಾಗ ನೇತಾಡಿ ಪ್ರಯಾಣ
ಸದನದಲ್ಲಿ ‘ವಾಲ್ಮೀಕಿ' ಹಗರಣ ಗುದ್ದಾಟ: ಸಿದ್ದರಾಮಯ್ಯ ನೆಮ್ಮದಿಗೆ ಭಂಗವಿಲ್ಲ
ಸದನದಲ್ಲಿ ‘ವಾಲ್ಮೀಕಿ' ಹಗರಣ ಗುದ್ದಾಟ: ಸಿದ್ದರಾಮಯ್ಯ ನೆಮ್ಮದಿಗೆ ಭಂಗವಿಲ್ಲ
ಶೇಕಡ 58ರಷ್ಟು ಹೆಚ್ಚಲಿದೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ!
ಶೇಕಡ 58ರಷ್ಟು ಹೆಚ್ಚಲಿದೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ!
ಜೈಲಿನಲ್ಲಿರುವ ಪ್ರಜ್ವಲ್​ ರೇವಣ್ಣಗೆ ಎರಡು ಬ್ಯಾಗ್​ನಲ್ಲಿ ಬಂತು ಸ್ಪೆಷಲ್ ಊಟ
ಜೈಲಿನಲ್ಲಿರುವ ಪ್ರಜ್ವಲ್​ ರೇವಣ್ಣಗೆ ಎರಡು ಬ್ಯಾಗ್​ನಲ್ಲಿ ಬಂತು ಸ್ಪೆಷಲ್ ಊಟ
ಶಿವಕುಮಾರ್ ಸದನದಲ್ಲಿ ಮಾತಾಡುವ ಶೈಲಿ ಬದಲಿಸದಿದ್ದರೆ ವಿಪಕ್ಷ ಅನುಕರಿಸುತ್ತದೆ
ಶಿವಕುಮಾರ್ ಸದನದಲ್ಲಿ ಮಾತಾಡುವ ಶೈಲಿ ಬದಲಿಸದಿದ್ದರೆ ವಿಪಕ್ಷ ಅನುಕರಿಸುತ್ತದೆ
ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ
ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ
ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್​ಡೇಟ್ ಮಾಡಬೇಕು!
ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್​ಡೇಟ್ ಮಾಡಬೇಕು!