ದೊಡ್ಡ ಸೆಲೆಬ್ರಿಟಿಗಳ ಜೊತೆ ನಟಿಸೋಕೆ ನೋ ಎಂದ ಸ್ಟಾರ್ಗಳು ಇವರು
ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಬಾಲಿವುಡ್ನ ಫೇವರಿಟ್ ಜೋಡಿ ಎನಿಸಿಕೊಂಡಿದ್ದರು. ಇವರು ಕೆಲವು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇವರು ಪರಸ್ಪರ ಪ್ರೀತಿಸುತ್ತಿದ್ದರು. ಆ ಬಳಿಕ ಬ್ರೇಕಪ್ ಆಯಿತು. ‘ಹಮ್ ದಿಲ್ ದೇ ಚುಕೆ ಸನಮ್’ ಬಳಿಕ ಇವರು ಒಟ್ಟಾಗಿ ನಟಿಸಲೇ ಇಲ್ಲ. ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರೂ ಇವರು ಮಾತನಾಡಲ್ಲ.
ಬಾಲಿವುಡ್ನಲ್ಲಿ ಹಲವು ಸೂಪರ್ಸ್ಟಾರ್ಗಳು ಇದ್ದಾರೆ. ಅಗತ್ಯ ಬಂದಾಗ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸುತ್ತಾರೆ. ಆದರೆ, ಸಲ್ಮಾನ್ ಖಾನ್, ಐಶ್ವರ್ಯಾ ರೈ, ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಒಬ್ಬರ ಸಿನಿಮಾದಲ್ಲಿ ಮತ್ತೊಬ್ಬರು ನಟಿಸಲು ನೋ ಎಂದಿದ್ದರು. ಇದಕ್ಕೆ ಕಾರಣ ಭಿನ್ನ ಭಿನ್ನವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ
ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಬಾಲಿವುಡ್ನ ಫೇವರಿಟ್ ಜೋಡಿ ಎನಿಸಿಕೊಂಡಿದ್ದರು. ಇವರು ಕೆಲವು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇವರು ಪರಸ್ಪರ ಪ್ರೀತಿಸುತ್ತಿದ್ದರು. ಆ ಬಳಿಕ ಬ್ರೇಕಪ್ ಆಯಿತು. ‘ಹಮ್ ದಿಲ್ ದೇ ಚುಕೆ ಸನಮ್’ ಬಳಿಕ ಇವರು ಒಟ್ಟಾಗಿ ನಟಿಸಲೇ ಇಲ್ಲ. ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರೂ ಇವರು ಮಾತನಾಡಲ್ಲ. ಸಲ್ಲುಗೆ ಐಶ್ವರ್ಯಾ ಮೇಲೆ ಹಾಗೂ ಐಶ್ವರ್ಯಾಗೆ ಸಲ್ಲು ಮೇಲೆ ದ್ವೇಷ ಬೆಳೆದಿದೆ.
ಸಲ್ಮಾನ್ ಖಾನ್ ಹಾಗೂ ವಿವೇಕ್ ಒಬೆರಾಯ್
ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ಪ್ರೀತಿಸುತ್ತಿದ್ದರು. ಬಳಿಕ ಬ್ರೇಕಪ್ ಆಯಿತು. ಆ ಬಳಿಕ ಐಶ್ವರ್ಯಾ ವಿವೇಕ್ ಜೊತೆ ಸುತ್ತಾಟ ನಡೆಸಿದರು ಎನ್ನಲಾಗಿದೆ. ಇದು ಸಲ್ಲು ಕೋಪಕ್ಕೆ ಕಾರಣ ಆಗಿತ್ತು. ವಿವೇಕ್ ವೃತ್ತಿ ಜೀವನ ಕೊನೆಗೋಳಿಸೋ ಪ್ರಯತ್ನ ಸಲ್ಮಾನ್ ಖಾನ್ ಕಡೆಯಿಂದ ನಡೆದಿತ್ತು. ಇವರು ಒಟ್ಟಾಗಿ ನಟಿಸಲೇ ಇಲ್ಲ.
ಪ್ರಿಯಾಂಕಾ-ಕರೀನಾ
ಪ್ರೀಯಾಂಕಾ ಚೋಪ್ರಾ ಹಾಗೂ ಕರೀನಾ ಕಪೂರ್ ಅವರ ಫ್ರೆಂಡ್ಶಿಪ್ ಹಳಸಿದೆ. 2000ನೇ ಇಸ್ವಿಯಲ್ಲಿ ಇವರು ಕಿತ್ತಾಡಿಕೊಂಡರು. ಇವರು ಒಟ್ಟಾಗಿ ಸಿನಿಮಾ ಮಾಡಿಲ್ಲ. ಸದ್ಯ ಪ್ರಿಯಾಂಕಾ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ.
ಬಿಪಾಶಾ ಬಸು ಹಾಗೂ ಕರೀನಾ
ಕರೀನಾ ಕಪೂರ್ ಅವರು ಬಾಲಿವುಡ್ನಲ್ಲಿ ಅನೇಕರ ಜೊತೆ ದ್ವೇಷ ಹೊಂದಿದ್ದಾರೆ. ಕರೀನಾ ಹಾಗೂ ಬಿಪಾಶಾ ಮಧ್ಯೆ ಕಿರಿಕ್ ಆಗಿದೆ. ಕರೀನಾ ಅವರು ಬಿಪಾಶಾನ ‘ಕಪ್ಪು ಬೆಕ್ಕು’ ಎಂದು ಕರೆದಿದ್ದರು. ಆ ಬಳಿಕ ಇಬ್ಬರೂ ಕೆಲಸ ಮಾಡದೆ ಇರಲು ನಿರ್ಧರಿಸಿದರು.
ಕರಣ್ ಜೋಹರ್ ಹಾಗೂ ಕಂಗನಾ
ಬಾಲಿವುಡ್ನಲ್ಲಿ ದೊಡ್ಡ ನಿರ್ಮಾಪಕರ ಸಾಲಿನಲ್ಲಿ ಕರಣ್ ಜೋಹರ್ ಕೂಡ ಇದ್ದಾರೆ. ಅವರು ನೆಪೋಟಿಸಂನ ಬೆಂಬಲಿಸುತ್ತಾರೆ ಅನ್ನೋದು ಅನೇಕರ ಆರೋಪ. ಕಂಗನಾ ಅವರು ಓಪನ್ ಆಗಿ ಕರಣ್ ವಿರುದ್ಧ ಸಿಟ್ಟು ಹೊರ ಹಾಕಿದ್ದರು. ಆ ಬಳಿಕ ಕರಣ್ ಅವರು ಕಂಗನಾರಿಂದ ಅಂತರ ಕಾಯ್ದುಕೊಂಡರು.
ಕಂಗನಾ ಹಾಗೂ ಹೃತಿಕ್ ರೋಷನ್
ಕಂಗನಾ ರಣಾವತ್ ಹಾಗೂ ಹೃತಿಕ್ ರೋಷನ್ ಅವರು ಪರಸ್ಪರ ಡೇಟ್ ಮಾಡುತ್ತಿದ್ದರು ಎನ್ನಲಾಗಿದೆ. ಹೃತಿಕ್ ವಿರುದ್ಧ ಕಂಗನಾ ಅವರು ಸಾಕಷ್ಟು ಆರೋಪ ಮಾಡಿದ್ದರು. ಈ ಕಿರಿಕ್ನಿಂದ ಇಬ್ಬರೂ ಬೇರೆ ಆದರು.
ಇದನ್ನೂ ಓದಿ: ನಾನು ಮತ್ತು ಕಂಗನಾ ರಣಾವತ್ ಗಂಡ ಹೆಂಡತಿಯಂತೆ ಇದ್ದೆವು ಎಂದು ಹೇಳಿದ್ದ ಬಾಲಿವುಡ್ ಖ್ಯಾತ ನಟ
ಶಾರುಖ್ ಖಾನ್ ಹಾಗೂ ಆಮಿರ್
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ಆಮಿರ್ ಖಾನ್ ಅವರು ಯಾವುದೇ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿಲ್ಲ. ಇಬ್ಬರೂ ಸಿನಿಮಾಗಳ ಆಯ್ಕೆಯಲ್ಲಿ ಬೇರೆ ಬೇರೆಯ ಥಿಯರಿ ಹೊಂದಿದ್ದಾರೆ. ಇತ್ತೀಚೆಗೆ ಇವರು ಒಟ್ಟಾಗಿ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.