ನಾನು ಮತ್ತು ಕಂಗನಾ ರಣಾವತ್ ಗಂಡ ಹೆಂಡತಿಯಂತೆ ಇದ್ದೆವು ಎಂದು ಹೇಳಿದ್ದ ಬಾಲಿವುಡ್ ಖ್ಯಾತ ನಟ

ಕಂಗನಾ ಬಗ್ಗೆ ಇಂತಹ ಹೇಳಿಕೆ ನೀಡಿದ್ದು ನಟ ಆದಿತ್ಯ ಪಾಂಚೋಲಿ. ಆದಿತ್ಯ ಮತ್ತು ಕಂಗನಾ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರ ನಡುವೆ 21 ವರ್ಷಗಳ ಅಂತರವಿತ್ತು. ಆ ಬಳಿಕ ಕಂಗನಾ ಬಾಲಿವುಡ್‌ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆಗ ಎಲ್ಲೆಡೆ ಕಂಗನಾ-ಆದಿತ್ಯ ಸಂಬಂಧದ ಮಾತು ಚರ್ಚೆ ಆಗಿತ್ತು.

ನಾನು ಮತ್ತು ಕಂಗನಾ ರಣಾವತ್ ಗಂಡ ಹೆಂಡತಿಯಂತೆ ಇದ್ದೆವು ಎಂದು ಹೇಳಿದ್ದ ಬಾಲಿವುಡ್ ಖ್ಯಾತ ನಟ
ಕಂಗನಾ ರಣಾವತ್​
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 12, 2024 | 8:00 AM

ಬಿಜೆಪಿ ಪರವಾಗಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ನಟಿ ಕಂಗನಾ ರಣಾವತ್ (Kangana Ranaut) ಗೆಲುವು ಕಂಡಿದ್ದಾರೆ. ಈ ಮೂಲಕ ಮೊದಲ ಚುನಾವಣೆಯಲ್ಲೇ ಗೆಲುವಿನ ನಗೆ ಬೀರಿ ರಾಜಕೀಯ ಬದುಕು ಆರಂಭಿಸಿದ್ದಾರೆ. ಅವರು ಸದಾ ವಿವಾದಾತ್ಮಕ ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ಈಗ ಅವರು ರಾಜಕೀಯದತ್ತ ಮುಖ ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳೊಂದಿಗೆ ಕಂಗನಾ ಹೆಸರು ತಳುಕು ಹಾಕಿತ್ತು. ಆದರೆ ಯಾರೊಂದಿಗಾದರೂ ಕಂಗನಾ ಸಂಬಂಧವು ಮದುವೆಗೆ ತಲುಪಲು ಸಾಧ್ಯವಾಗಿಲ್ಲ. ಆದರೆ ನಟರೊಬ್ಬರು ‘ನಾನು ಮತ್ತು ಕಂಗನಾ ಗಂಡ ಹೆಂಡತಿಯಂತೆ ಬದುಕಿದ್ದೆವು’ ಎಂದಿದ್ದರು.

ಕಂಗನಾ ಬಗ್ಗೆ ಇಂತಹ ಹೇಳಿಕೆ ನೀಡಿದ್ದು ನಟ ಆದಿತ್ಯ ಪಾಂಚೋಲಿ. ಆದಿತ್ಯ ಮತ್ತು ಕಂಗನಾ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರ ನಡುವೆ 21 ವರ್ಷಗಳ ಅಂತರವಿತ್ತು. ಆ ಬಳಿಕ ಕಂಗನಾ ಬಾಲಿವುಡ್‌ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆಗ ಎಲ್ಲೆಡೆ ಕಂಗನಾ-ಆದಿತ್ಯ ಸಂಬಂಧದ ಮಾತು ಚರ್ಚೆ ಆಗಿತ್ತು. ಬ್ರೇಕಪ್ ನಂತರ ಆದಿತ್ಯ ಪಾಂಚೋಲಿ ನಟಿಯ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು.

‘ಕಂಗನಾ ಮತ್ತು ನಾನು 2004ರಲ್ಲಿ ಭೇಟಿಯಾದೆವು. ಆಗ ಅವಳ ಬಳಿ ಒಂದು ರೂಪಾಯಿ ಕೂಡ ಇರಲಿಲ್ಲ. ಸ್ನೇಹಿತರೊಬ್ಬರು ನಟಿಗೆ ಸಹಾಯ ಮಾಡಲು ಕೇಳಿದ್ದರು. ಸುಮಾರು ಮೂರು ವರ್ಷಗಳಿಂದ ನಾವು ಒಂದೇ ಮನೆಯಲ್ಲಿ ಗಂಡ-ಹೆಂಡತಿಯಾಗಿ ವಾಸಿಸುತ್ತಿದ್ದೆವು’ ಎಂದು ಆದಿತ್ಯ ಪಾಂಚೋಲಿ ಹೇಳಿದ್ದರು.

‘ಒಬ್ಬ ಹುಡುಗ ಕಂಗನಾ ರಣಾವತ್‌ಗೆ ನಿರಂತರವಾಗಿ ತೊಂದರೆ ಕೊಡುತ್ತಿದ್ದ. ಆದರೆ ಅದೇ ಹುಡುಗನೊಂದಿಗೆ ಕಂಗನಾ ಬಹಳ ಹೊತ್ತು ಫೋನ್ ನಲ್ಲಿ ಮಾತನಾಡುತ್ತಿದ್ದರು. ಕಿರುಕುಳದ ಆರೋಪ ಮಾಡಿದ್ದ ಹುಡುಗನೊಂದಿಗೆ ಕಂಗನಾ ಒಂದು ತಿಂಗಳಿನಿಂದ ಮಾತನಾಡುತ್ತಿದ್ದರು’ ಎಂದು ಆದಿತ್ಯ ಪಾಂಚೋಲಿ ಆರೋಪ ಮಾಡಿದ್ದರು.

ಇದನ್ನೂ ಓದಿ: ಕಪಾಳಮೋಕ್ಷ ಬೆಂಬಲಿಸಿದ ವಿಕೃತ ಮನಸ್ಸುಗಳಿಗೆ ತಿರುಗೇಟು ನೀಡಿದ ಕಂಗನಾ

ಕಂಗನಾ ಕೂಡ ಆದಿತ್ಯ ಪಾಂಚೋಲಿ ವಿರುದ್ಧ ಕೆಲವು ಆರೋಪ ಮಾಡಿದ್ದರು. ‘ಅವರು ನನ್ನನ್ನು ಥಳಿಸಿದ್ದಾರೆ. ತನ್ನನ್ನು ರಕ್ಷಿಸಿಕೊಳ್ಳಲು ಮೊದಲ ಮಹಡಿಯಿಂದ ಜಿಗಿದಿದ್ದೆ’ ಎಂದು ಕಂಗನಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದಿತ್ಯ ಪಾಂಚೋಲಿಗೆ ಆಗ ಮದುವೆಯಾಗಿತ್ತು. ಆದಿತ್ಯ ಪಾಂಚೋಲಿ ನಂತರವೂ ಕಂಗನಾ ಹೆಸರು ಅನೇಕ ಖ್ಯಾತ ಸೆಲೆಬ್ರಿಟಿಗಳ ಜೊತೆ ತಳುಕು ಹಾಕಿಕೊಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ