ಕಪಾಳಮೋಕ್ಷ ಬೆಂಬಲಿಸಿದ ವಿಕೃತ ಮನಸ್ಸುಗಳಿಗೆ ತಿರುಗೇಟು ನೀಡಿದ ಕಂಗನಾ

ಖ್ಯಾತ ನಟಿ, ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್​ ಅವರ ಮೇಲೆ ಸಿಐಎಸ್​ಎಫ್​ ಮಹಿಳಾ ಸಿಬ್ಬಂದಿ ಕುಲ್ವಿಂದರ್​ ಕೌರ್​ ಅವರು ಹಲ್ಲೆ ಮಾಡಿದ ಘಟನೆಯನ್ನು ಕೆಲವರು ಬೆಂಬಲಿಸಿದರು. ಅಂಥವರಿಗೆ ಕಂಗನಾ ಅವರು ಖಾರವಾಗಿ ತಿರುಗೇಟು ನೀಡಿದ್ದಾರೆ. ಹಲ್ಲೆ ಮಾಡುವವರಿಗೆ ಬೆಂಬಲ ನೀಡುವವರ ಮನಸ್ಥಿತಿ ಯಾವ ರೀತಿ ಇರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಕಪಾಳಮೋಕ್ಷ ಬೆಂಬಲಿಸಿದ ವಿಕೃತ ಮನಸ್ಸುಗಳಿಗೆ ತಿರುಗೇಟು ನೀಡಿದ ಕಂಗನಾ
ಕಂಗನಾ ರಣಾವತ್​
Follow us
|

Updated on: Jun 09, 2024 | 9:05 PM

ನಟಿ, ಸಂಸದೆ ಕಂಗನಾ ರಣಾವತ್​ (Kangana Ranaut) ಅವರು ಇತ್ತೀಚೆಗೆ ಒಂದು ಶಾಕಿಂಗ್​ ಘಟನೆ ಎದುರಿಸಿದರು. ಚಂಡಿಗಢ ವಿಮಾನ ನಿಲ್ದಾಣದಲ್ಲಿ ಅವರ ಮೇಲೆ ಕೈ ಮಾಡಲಾಯಿತು. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿ ಕುಲ್ವಿಂದರ್​ ಕೌರ್​ (Kulwinder Kaur) ಎಂಬ ಮಹಿಳೆಯು ಕಂಗನಾ ರಣಾವತ್​ಗೆ ಕಪಾಳಮೋಕ್ಷ ಮಾಡಿದರು. ಈ ವಿಚಾರದ ಬಗ್ಗೆ ತನಿಖೆ ನಡೆಯುತ್ತಿದೆ. ಕುಲ್ವಿಂದರ್​ ಕೌರ್​ ಅವರ ವರ್ತನೆಯನ್ನು ಅನೇಕರು ಖಂಡಿಸಿದ್ದಾರೆ. ಆದರೆ ಕೆಲವರು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅಂಥವರಿಗೆ ಕಂಗನಾ ರಣಾವತ್​ ಅವರು ತಿರುಗೇಟು ನೀಡಿದ್ದಾರೆ.

‘ಎಕ್ಸ್​’ ಖಾತೆಯ ಮೂಲಕ ಕಂಗನಾ ರಣಾವತ್​ ಅವರು ಖಾರದ ಮಾತುಗಳಿಂದ ಪ್ರತಿಕ್ರಿಯೆ ನೀಡಿದ್ದಾರೆ. ‘ಎಲ್ಲ ಅತ್ಯಾಚಾರಿಗೆ, ಕೊಲೆಗಾರನಿಗೆ, ಕಳ್ಳನಿಗೆ ಒಂದಲ್ಲಾ ಒಂದು ಕಾರಣ ಇರುತ್ತದೆ. ಕಾರಣ ಇಲ್ಲದೇ ಯಾವುದೇ ಅಪರಾಧ ನಡೆಯುವುದಿಲ್ಲ. ಹಾಗಿದ್ದರೂ ಕೂಡ ಅಂಥವರಿಗೆ ಕಾನೂನಿನಲ್ಲಿ ಶಿಕ್ಷೆ ಆಗುತ್ತದೆ. ಅಪರಾಧಿಯ ಎಮೋಷನ್​ ಜೊತೆ ನೀವು ನಿಲ್ಲುತ್ತೀರಿ ಎಂಬುದಾದರೆ, ಅನುಮತಿ ಇಲ್ಲದೇ ಒಬ್ಬರ ದೇಹವನ್ನು ಮುಟ್ಟುವ, ಹಲ್ಲೆ ಮಾಡುವುದು ನಿಮಗೆ ಸರಿ ಎನಿಸಿದರೆ ಮನಸ್ಸಿನ ಆಳದಲ್ಲಿ ಅತ್ಯಾಚಾರ, ಕೊಲೆಗೂ ನಿಮ್ಮ ಸಹಮತ ಇರುತ್ತದೆ’ ಎಂದು ಕಂಗನಾ ರಣಾವತ್​ ಅವರು ಹೇಳಿದ್ದಾರೆ.

‘ನೀನು ನಿಮ್ಮ ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡಬೇಕು. ದಯವಿಟ್ಟು ಧ್ಯಾನ ಮತ್ತು ಯೋಗ ಮಾಡಿ ಎಂದು ನಿಮಗೆ ಸಲಹೆ ನೀಡುತ್ತೇನೆ. ಇಲ್ಲದಿದ್ದರೆ ಜೀವನ ಕಹಿ ಆಗುತ್ತದೆ ಮತ್ತು ಭಾರ ಆಗುತ್ತದೆ. ಅಷ್ಟೊಂದು ಕಸ, ದ್ವೇಷ, ಅಸೂಯೆಯನ್ನು ಹೊತ್ತುಕೊಳ್ಳುಬೇಡಿ. ನಿಮ್ಮನ್ನು ನೀವು ಬಿಡುಗಡೆ ಮಾಡಿಕೊಳ್ಳಿ’ ಎಂದು ಕಂಗನಾ ರಣಾವತ್​ ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಕಂಗನಾಗೆ ಹೊಡೆದ ಮಹಿಳೆಗೆ ನಾನು ಕೆಲಸ ಕೊಡ್ತೀನಿ’: ಗಾಯಕ ವಿಶಾಲ್​ ದದ್ಲಾನಿ

ಕಂಗನಾ ರಣಾವತ್​ ಅವರ ಮೇಲೆ ಹಲ್ಲೆ ಮಾಡಿದ ಕುಲ್ವಿಂದರ್​ ಕೌರ್​ ಪರವಾಗಿ ಗಾಯಕ ವಿಶಾಲ್​ ದದ್ಲಾನಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು. ‘ಒಂದು ವೇಳೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯವರು ಕುಲ್ವಿಂದರ್​ ಅವರನ್ನು ಕೆಲಸದಿಂದ ತೆಗೆದು ಹಾಕಿದರೆ ಅವರಿಗಾಗಿ ನನ್ನಲ್ಲಿ ಒಳ್ಳೆಯ ಕೆಲಸ ಕಾದಿರುತ್ತದೆ’ ಎಂದು ವಿಶಾಲ್​ ಹೇಳಿದ್ದರು. ಅಂಥವರಿಗಾಗಿಯೇ ಕಂಗನಾ ರಣಾವತ್​ ಅವರು ಈ ಪೋಸ್ಟ್​ ಮಾಡಿದ್ದಾರೆ. ಆದರೆ ಎಲ್ಲಿಯೂ ನೇರವಾಗಿ ಹೆಸರು ಪ್ರಸ್ತಾಪಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ