‘ಹೌಸ್ಫುಲ್ 5’ ಸಿನಿಮಾದ ಭಾಗವಾಗಲಿದ್ದಾರೆ ಅಭಿಷೇಕ್ ಬಚ್ಚನ್; ನಗಿಸೋಕೆ ರೆಡಿ ಆದ ಸ್ಟಾರ್ ಹೀರೋ
ಅಕ್ಷಯ್ ಕುಮಾರ್, ಅನಿಲ್ ಕಪೂರ್, ನಾನಾ ಪಾಟೇಕರ್, ರಿತೇಶ್ ದೇಶ್ಮುಖ್, ಚಂಕಿ ಪಾಂಡೆ ‘ಹೌಸ್ಫುಲ್ 5’ನಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಅವರು ಈ ಚಿತ್ರದ ಭಾಗವಾಗಿದ್ದಾರೆ. ಆಗಸ್ಟ್ನಲ್ಲಿ ಲಂಡ್ನಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ.
‘ಹೌಸ್ಫುಲ್’ (Housefull) ಬಾಲಿವುಡ್ನ ಯಶಸ್ವಿ ಸಿನಿಮಾ ಸರಣಿಗಳಲ್ಲಿ ಒಂದು. ಅಕ್ಷಯ್ ಕುಮಾರ್, ರಿತೇಶ್ ದೇಶ್ಮುಖ್ ಮೊದಲಾದವರು ನಟಿಸಿರೋ ಈ ಸರಣಿಯಲ್ಲಿ ಐದನೇ ಸಿನಿಮಾ ಬರುತ್ತಿದೆ. ಇದರ ಜೊತೆಗೆ ಮತ್ತೊಂದು ಗುಡ್ನ್ಯೂಸ್ ಇದೆ. ಸಾಜಿಡ್ ನಾಡಿಯಾದ್ವಾಲಾ ನಿರ್ಮಾಣದ ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಕೂಡ ನಟಿಸಲಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.
ಅಕ್ಷಯ್ ಕುಮಾರ್, ಅನಿಲ್ ಕಪೂರ್, ನಾನಾ ಪಾಟೇಕರ್, ರಿತೇಶ್ ದೇಶ್ಮುಖ್, ಚಂಕಿ ಪಾಂಡೆ ‘ಹೌಸ್ಫುಲ್ 5’ನಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಅವರು ಈ ಚಿತ್ರದ ಭಾಗವಾಗಿದ್ದಾರೆ. ಆಗಸ್ಟ್ನಲ್ಲಿ ಲಂಡ್ನಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ.
ಅಭಿಷೇಕ್ ಬಚ್ಚನ್ಗೆ ‘ಹೌಸ್ಫುಲ್’ ಫ್ರಾಂಚೈಸಿ ಹೊಸದಲ್ಲ. ಈ ಮೊದಲು ‘ಹೌಸ್ಫುಲ್ 3’ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಅವರು ನಟಿಸಿದ್ದರು. ಈಗ ಅವರು ‘ಹೌಸ್ಫುಲ್ 5’ನಲ್ಲಿ ಮರಳುತ್ತಿದ್ದು, ಹೆಚ್ಚಿನ ಫನ್ ನಿರೀಕ್ಷಿಸಬಹುದು. ಅಭಿಷೇಕ್ ಕೂಡ ಈ ಬಗ್ಗೆ ಖುಷಿ ಹೊರಹಾಕಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ಹೌಸ್ಫುಲ್ ನನ್ನ ಫೇವರಿಟ್ ಕಾಮಿಡಿ ಫ್ರಾಂಚೈಸ್ಗಳಲ್ಲಿ ಒಂದು. ಇದರಲ್ಲಿ ನಟಿಸೋದು ಮನೆಗೆ ಮರಳಿದ ಭಾವನೆ ಕೊಡುತ್ತದೆ. ಸಾಜಿದ್ ಜೊತೆ ಕೆಲಸ ಮಾಡೋದು ಖುಷಿ ನೀಡುತ್ತದೆ. ಅಕ್ಷಯ್ ಹಾಗೂ ರಿತೇಷ್ ಜೊತೆ ಸೆಟ್ನಲ್ಲಿ ಫನ್ ಮಾಡಲು ಕಾದಿದ್ದೇನೆ. ದೋಸ್ತಾನಾ ಬಳಿಕ ನಿರ್ದೇಶಕ ತರುಣ್ ಮನ್ಸುಖಾನಿ ಜೊತೆ ಮತ್ತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ’ ಎಂದಿದ್ದಾರೆ ಅಭಿಷೇಕ್. ತರುಣ್ ಮನ್ಸುಖಾನಿ ‘ಹೌಸ್ಫುಲ್ 5’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: Housefull 5: ‘ಹೌಸ್ಫುಲ್ 5’ ಘೋಷಿಸಿದ ನಟ ಅಕ್ಷಯ್ ಕುಮಾರ್; ರಿಲೀಸ್ ದಿನಾಂಕವನ್ನೂ ಪ್ರಕಟಿಸಿದ ನಟ
‘ಹೌಸ್ಫುಲ್’ ಸರಣಿಯ ಐದನೇ ಸಿನಿಮಾ ಕೆಲಸಗಳು ಪ್ರಗತಿಯಲ್ಲಿವೆ. ಈ ಚಿತ್ರ 2025ರ ಜೂನ್ 6ರಂದು ರಿಲೀಸ್ ಆಗೋ ಸಾಧ್ಯತೆ ಇದೆ. ಈ ಮೊದಲ ನಾಲ್ಕೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿವೆ. ಮೊದಲ ಪಾರ್ಟ್ 2010ರಲ್ಲಿ, ಎರಡನೇ ಪಾರ್ಟ್ 2012ರಲ್ಲಿ, ಮೂರನೇ ಪಾರ್ಟ್ 2016ರಲ್ಲಿ ಹಾಗೂ ನಾಲ್ಕನೇ ಪಾರ್ಟ್ 2019ರಲ್ಲಿ ರಿಲೀಸ್ ಆಗಿದೆ. ಐದನೇ ಪಾರ್ಟ್ನ ತರುಣ್ ಮನ್ಸುಖಾನಿ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:29 pm, Mon, 6 May 24