Housefull 5: ‘ಹೌಸ್ಫುಲ್ 5’ ಘೋಷಿಸಿದ ನಟ ಅಕ್ಷಯ್ ಕುಮಾರ್; ರಿಲೀಸ್ ದಿನಾಂಕವನ್ನೂ ಪ್ರಕಟಿಸಿದ ನಟ
Akshay Kumar: ‘ಹೌಸ್ಫುಲ್’ ಅತ್ಯಂತ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿದೆ. ಈ ಸರಣಿಯಿಂದ ಈಗಾಗಲೇ ನಾಲ್ಕು ಸಿನಿಮಾಗಳು ರಿಲೀಸ್ ಆಗಿವೆ. ಈ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ.
ಅಕ್ಷಯ್ ಕುಮಾರ್ (Akshay Kumar) ಅವರು ತಾವು ನಟಿಸುತ್ತಿರುವ ಸಿನಿಮಾಗಳ ಆಯ್ಕೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ. ಗಂಭೀರ ವಿಚಾರಗಳು, ಸಮಾಜಕ್ಕೆ ಮೆಸೇಜ್ ನೀಡುವಂಥ ವಿಚಾರಗಳ ಮೇಲೆ ಅವರು ಹೆಚ್ಚು ಸಿನಿಮಾ ಮಾಡುತ್ತಿದ್ದಾರೆ. ಈಗ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಬಾರಿ ಅವರು ಅನೌನ್ಸ್ ಮಾಡಿದ್ದು ಹಾಸ್ಯಪ್ರಧಾನ ಸಿನಿಮಾ ಅನ್ನೋದು ವಿಶೇಷ. ಹೌದು, ‘ಹೌಸ್ಫುಲ್ 5’ (Housefull 5) ಮೂಲಕ ಅಕ್ಷಯ್ ಕುಮಾರ್ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ. ಈ ಬಗ್ಗೆ ಅವರ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.
‘ಹೌಸ್ಫುಲ್’ ಅತ್ಯಂತ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿದೆ. ಈ ಸರಣಿಯಿಂದ ಈಗಾಗಲೇ ನಾಲ್ಕು ಸಿನಿಮಾಗಳು ರಿಲೀಸ್ ಆಗಿವೆ. ಈ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ. ‘ಹೌಸ್ಫುಲ್ 4’ ವಿಮರ್ಶಕರಿಂದ ನೆಗೆಟಿವ್ ವಿಮರ್ಶೆ ಪಡೆಯಿತು. ಆದಾಗ್ಯೂ ಈ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು ಬರೋಬ್ಬರಿ 194 ಕೋಟಿ ರೂಪಾಯಿ. ಇದೇ ಭರವಸೆಯಲ್ಲಿ ಐದನೇ ಸಿನಿಮಾ ಘೋಷಣೆ ಆಗಿದೆ.
ಸಾಜಿದ್ ನಾಡಿಯಾದ್ವಾಲಾ ಅವರು ‘ಹೌಸ್ಫುಲ್ 5’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ತರುಣ್ಮನ್ಸುಖಾನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ‘ದೋಸ್ತಾನ’ ಚಿತ್ರ ನಿರ್ದೇಶನ ಮಾಡಿ ತರುಣ್ ಅವರು ಜನಪ್ರಿಯತೆ ಪಡೆದರು. ‘ಹೌಸ್ಫುಲ್ 5’ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಅಕ್ಷಯ್ ಕುಮಾರ್ ಮಾಡಿರುವ ಟ್ವೀಟ್ನಲ್ಲಿ ರಿತೇಷ್ ದೇಶ್ಮುಖ್ ಅವರನ್ನು ಟ್ಯಾಗ್ ಮಾಡಲಾಗಿದೆ. ಹೀಗಾಗಿ, ಅವರು ಈ ಸಿನಿಮಾದಲ್ಲಿ ನಟಿಸೋದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ದೀಪಾವಳಿ ಸಂದರ್ಭಕ್ಕೆ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗೋದು ವಾಡಿಕೆ. ಅದೇ ರೀತಿ ‘ಹೌಸ್ಫುಲ್ 5’ ಚಿತ್ರ ಕೂಡ 2024ರ ದೀಪಾವಳಿಯಂದು ರಿಲೀಸ್ ಆಗಲಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಅವರ ಕಾಮಿಡಿ ಪಂಚ್ ನೀಡಲು ರೆಡಿ ಆಗಿದ್ದಾರೆ.
Get ready for FIVE times the madness! ?
Bringing to y’all #SajidNadiadwala’s #Housefull5 Directed by @Tarunmansukhani
See you in cinemas on Diwali 2024! @Riteishd @NGEMovies @WardaNadiadwala pic.twitter.com/CbzMy0PxOO
— Akshay Kumar (@akshaykumar) June 30, 2023
ಇದನ್ನೂ ಓದಿ: ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದುಬಿದ್ದಾಗ ರವೀನಾ ಟಂಡನ್ಗೆ ಎದುರಾದ ಕಷ್ಟಗಳು ಒಂದೆರಡಲ್ಲ
ಅಕ್ಷಯ್ ಕುಮಾರ್ ಅವರು ಈ ವರ್ಷದ ಆರಂಭದಲ್ಲೇ ಸೋಲು ಕಂಡರು. ಅವರ ನಟನೆಯ ‘ಸೆಲ್ಫೀ’ ಚಿತ್ರ ರಿಲೀಸ್ ಆಗಿ ಸೋಲು ಕಂಡಿತು. ಅವರ ಕೈಯಲ್ಲಿ ಈಗ ಅರ್ಧ ಡಜನ್ಗೂ ಅಧಿಕ ಸಿನಿಮಾಗಳು ಇವೆ. ಪ್ರತಿ ಚಿತ್ರಕ್ಕೆ ಅಕ್ಷಯ್ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ