AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ್ ಕುಮಾರ್ ನನ್ನ ಕೊಲ್ಲಲು ಯತ್ನಿಸಿದ್ದ, ನನ್ನ ಬಂಧನಕ್ಕೆ ಅವನೇ ಕಾರಣ: ಕೆಆರ್​ಕೆ ಆರೋಪ

Akshay Kumar: ನಟ ಅಕ್ಷಯ್ ಕುಮಾರ್ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ ವಿವಾದಿತ ಸಿನಿಮಾ ವಿಮರ್ಶಕ ಕೆಆರ್​ಕೆ.

ಅಕ್ಷಯ್ ಕುಮಾರ್ ನನ್ನ ಕೊಲ್ಲಲು ಯತ್ನಿಸಿದ್ದ, ನನ್ನ ಬಂಧನಕ್ಕೆ ಅವನೇ ಕಾರಣ: ಕೆಆರ್​ಕೆ ಆರೋಪ
ಅಕ್ಕಿ-ಕೆಆರ್​ಕೆ
ಮಂಜುನಾಥ ಸಿ.
|

Updated on: Jun 09, 2023 | 10:26 PM

Share

ತನ್ನನ್ನು ತಾನು ಸಿನಿಮಾ ವಿಮರ್ಶಕನೆಂದು (Movie Critic), ಸಿನಿಮಾ ವ್ಯವಹಾರ ವಿಶ್ಲೇಷಕನೆಂದೂ, ಸಿನಿಮಾ ಪತ್ರಕರ್ತನೆಂದು ಕರೆದುಕೊಳ್ಳುವ ವಿವಾದಾತ್ಮಕ ವ್ಯಕ್ತಿತ್ವದ ಕೆಆರ್​ಕೆ (KRK) ಮತ್ತೆ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ. ಈ ಹಿಂದೆ ಬಾಲಿವುಡ್​ನ (Bollywood) ಹಲವರ ಮೇಲೆ ತೋಚಿದಂತೆ ಆರೋಪಗಳನ್ನು ಮಾಡಿ, ಆರ್​ಆರ್​ಆರ್, ಕೆಜಿಎಫ್ 2 ಇನ್ನೂ ಹಲವು ಸಿನಿಮಾಗಳಿಗೆ ತೀರ ಕಳಪೆ ಸಿನಿಮಾ ವಿಮರ್ಶೆ ನೀಡಿದ್ದ ಕೆಆರ್​ಕೆ ಕಣ್ಣು ಇದೀಗ ಬಾಲಿವುಡ್​ನ ಸ್ಟಾರ್ ನಟ ಅಕ್ಷಯ್ ಕುಮಾರ್ ಮೇಲೆ ಬಿದ್ದಿದೆ. ಅಕ್ಷಯ್ ವಿರುದ್ಧ ಸರಣಿ ಆರೋಪಗಳನ್ನು ಕೆಆರ್​ಕೆ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಕುರಿತು ಟ್ವೀಟ್ ಮಾಡಿರುವ ಕೆಆರ್​ಕೆ, ”ಅಕ್ಷಯ್ ಕುಮಾರ್ ಹೊರತುಪಡಿಸಿ ಬಾಲಿವುಡ್​ನಲ್ಲಿ ನನಗೆ ಹಲವರೊಟ್ಟಿಗೆ ಒಳ್ಳೆಯ ಸಂಬಂಧ ಇದೆ. ನನ್ನನ್ನು ಕೊಲ್ಲುವಂತೆ ಅಕ್ಷಯ್ ಕುಮಾರ್ ಸುಫಾರಿ ಕೊಟ್ಟಿದ್ದ. ನನ್ನ ಬಂಧನಕ್ಕೆ ಸಹ ಅಕ್ಷಯ್ ಕುಮಾರ್ ಕಾರಣ. ಜೈಲಿನಲ್ಲೇ ನನ್ನನ್ನು ಕೊಲ್ಲುವಂತೆ ಸುಫಾರಿ ನೀಡಿದ್ದ. ಅದಾದ ಬಳಿಕ ಪೊಲೀಸ್ ಠಾಣೆಯಲ್ಲಿ ಸಹ ನನ್ನನ್ನು ಕೊಲ್ಲಲು ಸುಫಾರಿ ನೀಡಿದ್ದ. ಆದರೆ ದೇವರ ದಯದಿಂದ ನಾನು ಜೈಲಿನಿಂದ ಸುರಕ್ಷಿತವಾಗಿ ಹೊರಬಂದೆ. ನಾನು ಅಕಾಲಿಕವಾಗಿ ಮರಣ ಹೊಂದಿದರೆ ಅದಕ್ಕೆ ಅಕ್ಷಯ್ ಕುಮಾರ್ ಹೊಣೆ, ಸಲ್ಮಾನ್, ಶಾರುಖ್​ಗೂ ನನ್ನ ಸಾವಿಗೂ ಸಂಬಂಧವಿರುವುದಿಲ್ಲ” ಎಂದಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ ”ಅಕ್ಷಯ್ ಕುಮಾರ್ ಪ್ರಕಾರ ನಾನು ಆತನನ್ನು ಕೆನಡಾ ಕುಮಾರ್ ಎಂದು ಕರೆಯಬಾರದಂತೆ. ನಾನೇಕೆ ಆತನನ್ನು ಕೆನಡಿಯನ್ ಎಂದು ಕರೆಯಬಾರದು. ಆತ ಕೆನಡಾದ ಪ್ರಜೆ ಹಾಗಿದ್ದಮೇಲೆ ಆತನನ್ನು ಕೆನಡಾ ಕುಮಾರ್ ಎಂದೇ ಕರೆಯುತ್ತೇನೆ” ಎಂದಿದ್ದಾರೆ. ಇನ್ನೂ ಕೆಲವು ಟ್ವೀಟ್​ಗಳನ್ನು ಅಕ್ಷಯ್ ಕುಮಾರ್ ಬಗ್ಗೆ ಮಾಡಿರುವ ಕೆಆರ್​ಕೆ ಅಕ್ಷಯ್​ಕುಮಾರ್ ಅವರ ಸಾಲು-ಸಾಲು ಫ್ಲಾಪ್ ಸಿನಿಮಾಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ನಟನೆಯ ಕೊನೆಯ ಹತ್ತು ಸಿನಿಮಾಗಳು 500 ಕೋಟಿ ರುಪಾಯಿ ಸಹ ಗಳಿಕೆ ಮಾಡಿಲ್ಲ. ಆದರೆ ಅದೇ ಹತ್ತು ಸಿನಿಮಾಗಳಿಗೆ ಅಕ್ಷಯ್ ಕುಮಾರ್ 1000 ಕೋಟಿಗೂ ಹೆಚ್ಚು ಹಣವನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ ಎಂದಿದ್ದಾರೆ. ಅಕ್ಷಯ್ ಕುಮಾರ್ ಇಂದಾಗಿ ಹಲವು ನಿರ್ಮಾಪಕರು ಬೀದಿಗೆ ಬಂದಿದ್ದಾರೆ ಎಂದಿದ್ದಾರೆ ಕೆಆರ್​ಕೆ. ಜೊತೆಗೆ ಅಕ್ಷಯ್ ನಟನೆಯ ಹೊಸ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗುತ್ತಿದ್ದು, ಅದೇ ದಿನ ಚಿರಂಜೀವಿ ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು, ಆ ಸಿನಿಮಾ ಸಹ ಫ್ಲಾಪ್ ಆಗಲಿದೆ ಎಂದಿದ್ದಾರೆ.

ಅಕ್ಷಯ್ ಕುಮಾರ್ ಸತತ ಸೋಲಿನ ಸುಳಿಯಲ್ಲಿರುವುದಂತೂ ನಿಜವೇ. ಅವರ ನಟನೆಯ ಹತ್ತು ಸಿನಿಮಾಗಳು ಸೋಲು ಕಂಡಿವೆ. ಹಾಕಿದ ಬಂಡವಾಳ ಸಹ ವಾಪಸ್ಸಾಗಿಲ್ಲ. ಹಾಗಿದ್ದರೂ ಸಹ ಸಿನಿಮಾಗಳ ಮೇಲೆ ಸಿನಿಮಾಗಳನ್ನು ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ. ಪ್ರತಿ ಸಿನಿಮಾಕ್ಕೆ ನೂರು ಕೋಟಿಗೂ ಹೆಚ್ಚು ಸಂಭಾವನೆ ಸಹ ಪಡೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ