Shah Rukh Khan: ಮತ್ತೆ 3 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆ ಆಗಲಿದೆ ‘ಪಠಾಣ್​’: ಈ ಬಾರಿ ‘ಕೆಜಿಎಫ್​ 2’ ಚಿತ್ರದ ದಾಖಲೆ ಮುರಿಯುತ್ತಾ?

Pathaan Movie: ಜುಲೈ 13ರಂದು ರಷ್ಯಾ, ತಜಿಕಿಸ್ತಾನ್​, ಅಜರ್​ಬೈಜಾನ್​ ಸೇರಿದಂತೆ ಹಲವು ದೇಶಗಳಲ್ಲಿ ‘ಪಠಾಣ್​’ ಸಿನಿಮಾ ತೆರೆಕಾಣಲಿದೆ. ಇದಕ್ಕಾಗಿ 3 ಸಾವಿರ ಪರದೆಗಳು ಮೀಸಲಾಗಿವೆ.

Shah Rukh Khan: ಮತ್ತೆ 3 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆ ಆಗಲಿದೆ ‘ಪಠಾಣ್​’: ಈ ಬಾರಿ ‘ಕೆಜಿಎಫ್​ 2’ ಚಿತ್ರದ ದಾಖಲೆ ಮುರಿಯುತ್ತಾ?
ಶಾರುಖ್​ ಖಾನ್​, ದೀಪಿಕಾ ಪಡುಕೋಣೆ
Follow us
ಮದನ್​ ಕುಮಾರ್​
|

Updated on:Jun 10, 2023 | 8:40 AM

ನಟ ಶಾರುಖ್​ ಖಾನ್​ (Shah Rukh Khan) ಅವರ ಕಮ್​ಬ್ಯಾಕ್​ ಚಿತ್ರವಾಗಿ ಮೂಡಿಬಂದ ‘ಪಠಾಣ್​’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿದ್ದು ಗೊತ್ತೇ ಇದೆ. ವಿಶ್ವಾದ್ಯಂತ ಈ ಸಿನಿಮಾ 1050 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತು. ಆ ಯಶಸ್ಸಿನ ಅಲೆಯಲ್ಲಿ ಶಾರುಖ್​ ಖಾನ್​ ತೇಲುತ್ತಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾ ಮತ್ತೆ ರಿಲೀಸ್​ ಆಗುತ್ತಿದೆ. ಹಾಗಂತ ಭಾರತದಲ್ಲಿ ಅಲ್ಲ. ರಷ್ಯಾ ಹಾಗೂ ಇತರೆ ದೇಶಗಳಲ್ಲಿ ‘ಪಠಾಣ್​’ (Pathaan) ಸಿನಿಮಾವನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ, ಅಂದಾಜು 3 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಹಾಗಾಗಿ ಈ ಚಿತ್ರದ ಟೋಟಲ್​ ಕಲೆಕ್ಷನ್​ ಹೆಚ್ಚಾಗಲಿದೆ. ಯಶ್​ ನಟನೆಯ ‘ಕೆಜಿಎಫ್​ 2’ (KGF 2 Movie) ಸಿನಿಮಾ 1200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತ್ತು. ಆ ಚಿತ್ರದ ದಾಖಲೆಯನ್ನು ‘ಪಠಾಣ್​’ ಮುರಿಯಲಿದೆಯೇ ಎಂಬ ಕೌತುಕ ನಿರ್ಮಾಣ ಆಗಿದೆ.

ಶಾರುಖ್​ ಖಾನ್​ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಕೆಲವೇ ದಿನಗಳ ಹಿಂದೆ ‘ಪಠಾಣ್​’ ಸಿನಿಮಾವನ್ನು ಬಾಂಗ್ಲಾದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು. ಅಲ್ಲಿ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಈಗ ರಷ್ಯಾದಲ್ಲೂ ಅದೇ ರೀತಿ ಜನಮೆಚ್ಚುಗೆ ಸಿಗಬಹುದು ಎಂಬ ನಿರೀಕ್ಷೆ ಇದೆ. ಜುಲೈ 13ರಂದು ರಷ್ಯಾ, ತಜಿಕಿಸ್ತಾನ್​, ಅಜರ್​ಬೈಜಾನ್​ ಸೇರಿದಂತೆ ಹಲವು ದೇಶಗಳಲ್ಲಿ ‘ಪಠಾಣ್​’ ಸಿನಿಮಾ ತೆರೆಕಾಣಲಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ವಿಲನ್​ ಪಾತ್ರದಲ್ಲಿ ಜಾನ್​ ಅಬ್ರಾಹಂ ಕಾಣಿಸಿಕೊಂಡಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್​ ಮೂಲಕ ನಿರ್ಮಾಣವಾದ ಈ ಸಿನಿಮಾಗೆ ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: Shah Rukh Khan: ತಕ್ಷಣ ನೋಡಿ ಇದು ಶಾರುಖ್​ ಖಾನ್​ ಅಂದುಕೊಳ್ಳಬೇಡಿ; ಈ ವ್ಯಕ್ತಿಯ ಕಥೆ ಬೇರೆಯೇ ಇದೆ

ಶಾರುಖ್​ ಖಾನ್​ ಅವರು ‘ಪಠಾಣ್​’ ಸಿನಿಮಾದ ಗೆಲುವಿನ ಬಳಿಕ ಟ್ರ್ಯಾಕ್​ಗೆ ಮರಳಿದ್ದಾರೆ. ಈಗ ಅವರು ಅಭಿನಯಿಸುತ್ತಿರುವ ‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಮನೆಮಾಡಿವೆ. ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಬಜೆಟ್​ನ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಜವಾನ್​’ ಪಾತ್ರವಾಗುತ್ತಿದೆ. ಈ ಚಿತ್ರವನ್ನು ಶಾರುಖ್ ಖಾನ್ ಅವರ ‘ರೆಡ್ ಚಿಲ್ಲೀಸ್ ಎಂಟರ್​ಟೈನ್​ಮೆಂಟ್’ ಸಂಸ್ಥೆ ನಿರ್ಮಿಸುತ್ತಿದೆ. ಕಾಲಿವುಡ್​ನ ಜನಪ್ರಿಯ ನಿರ್ದೇಶಕರಾದ ಅಟ್ಲಿ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಜವಾನ್’ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ, ಈ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿವೆ. ದೊಡ್ಡ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಿರುವ ಸುದ್ದಿ ಬಂದಿದೆ.

ಇದನ್ನೂ ಓದಿ: Suhana Khan: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ವ್ಯಕ್ತಿತ್ವ ಹೇಗಿದೆ? ಎಲ್ಲವನ್ನೂ ವಿವರಿಸಿದ ನೃತ್ಯ ನಿರ್ದೇಶಕ

‘ಜವಾನ್’ ಚಿತ್ರದ ಒಟಿಟಿ, ಸ್ಯಾಟಿಲೈಟ್ ಮತ್ತು ಆಡಿಯೋ ಹಕ್ಕುಗಳಿಗೆ ಬೇರೆಬೇರೆ ಸಂಸ್ಥೆಗಳು ದೊಡ್ಡ ಆಫರ್ ನೀಡಿವೆ ಎನ್ನಲಾಗುತ್ತಿದೆ. ಭಾರಿ ಮೊತ್ತಕ್ಕೆ ಹಕ್ಕುಗಳು ಸೇಲ್​ ಆಗಿರುವ ಸುದ್ದಿ ಇದೆ. ಆದರೆ, ಎಷ್ಟು ಕೋಟಿಗೆ ಹಕ್ಕುಗಳು ಮಾರಾಟವಾಗಿವೆ ಎಂಬ ಮಾಹಿತಿಯನ್ನು ಚಿತ್ರತಂಡದವರು ಬಹಿರಂಗಗೊಳಿಸಿಲ್ಲ. ಆಕ್ಷನ್ ಥ್ರಿಲ್ಲರ್ ಶೈಲಿಯ ‘ಜವಾನ್​’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್ ಅವರು ಈ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ‘ಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:34 am, Sat, 10 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ