ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದುಬಿದ್ದಾಗ ರವೀನಾ ಟಂಡನ್ಗೆ ಎದುರಾದ ಕಷ್ಟಗಳು ಒಂದೆರಡಲ್ಲ
1994ರಲ್ಲಿ ‘ಮೊಹ್ರಾ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅಕ್ಷಯ್ ಹಾಗೂ ರವೀನಾ ಒಟ್ಟಾಗಿ ಸುತ್ತಾಡಿದ್ದರು. ಅವರು ಡೇಟಿಂಗ್ ಮಾಡಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತು. ನಂತರ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ರವೀನಾ ಟಂಡನ್ (Raveena Tandan) ಅವರು ಚಿತ್ರರಂಗದಲ್ಲಿ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರಿಗೆ ಈಗ 48 ವರ್ಷ. ಈ ವಯಸ್ಸಲ್ಲೂ ಅವರು ಯುವತಿಯರನ್ನೂ ನಾಚಿಸುವಂತಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ‘ಕೆಜಿಎಫ್ 2’ ಚಿತ್ರದ ಮೂಲಕ ರವೀನಾ ಅವರು ಸ್ಯಾಂಡಲ್ವುಡ್ಗೆ ಮರಳಿದರು. ಈ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಗಮನ ಸೆಳೆದಿದ್ದಾರೆ. ಈ ಚಿತ್ರದಿಂದ ಅವರ ಬೇಡಿಕೆ ಮತ್ತಷ್ಟು ಹೆಚ್ಚಿದೆ. ರವೀನಾ ಟಂಡನ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಅಕ್ಷಯ್ ಕುಮಾರ್ ಜೊತೆಗಿನ ರಿಲೇಶನ್ಶಿಪ್ ಬಗ್ಗೆ ಹೇಳಿಕೊಂಡಿದ್ದರು.
1994ರಲ್ಲಿ ‘ಮೊಹ್ರಾ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅಕ್ಷಯ್ ಹಾಗೂ ರವೀನಾ ಒಟ್ಟಾಗಿ ಸುತ್ತಾಡಿದ್ದರು. ಅವರು ಡೇಟಿಂಗ್ ಮಾಡಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತು. ನಂತರ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಮದುವೆವರೆಗೆ ಇವರ ಸಂಬಂಧ ಹೋಗಿಲ್ಲ. ಇವರ ನಿಶ್ಚಿತಾರ್ಥ ಮುರಿದುಬಿತ್ತು. ಆ ಬಳಿಕ ಅವರಿಗೆ ಸಿನಿಮಾ ಕೆಲಸಗಳು ಸಿಗುತ್ತಿರಲಿಲ್ಲ. ವಿಡಿಯೋ ಒಂದರಲ್ಲಿ ಇದನ್ನು ಹೇಳಿಕೊಂಡು ಅವರು ಅತ್ತಿದ್ದರು.
ಇದನ್ನೂ ಓದಿ: Raveena Tandon: ‘ಏಕ್ ದೋ ತೀನ್..’ ಹಾಡಿಗೆ ಡ್ಯಾನ್ಸ್ ಮಾಡಿದ ರವೀನಾ ಟಂಡನ್; ಮಾಧುರಿ ದೀಕ್ಷಿತ್ ಮೆಚ್ಚುಗೆ
‘ನಿಶ್ಚಿತಾರ್ಥ ಮುರಿದು ಬಿದ್ದ ನಂತರ ನಾನು ದುಃಖಕ್ಕೆ ಒಳಗಾದೆ. ನನಗೆ ಕೆಲಸ ಇರಲಿಲ್ಲ. ರಾತ್ರಿ ನಿದ್ದೆ ಬರದಿದ್ದಾಗ ಕಾರು ತೆಗೆದುಕೊಂಡು ಡ್ರೈವ್ ಹೋಗುತ್ತಿದೆ. ಆಗ ಒಮ್ಮೆ ಗುಡಿಸಲುಗಳು ಕಂಡವು. ಅಲ್ಲಿ ಪತಿ ಕುಡಿದು ಹೆಂಡತಿಗೆ ಹೊಡೆಯುತ್ತಿದ್ದ. ಮಕ್ಕಳು ಬಟ್ಟೆ ಇಲ್ಲದೆ ಮನೆ ಹೊರಗೆ ಮಲಗಿದ್ದರು. ಇದನ್ನು ನೋಡಿದ ಮೇಲೆ ನನಗೆ ಜ್ಞಾನೋದಯ ಆಯಿತು. ಜಗತ್ತು ಹೀಗಿದೆ. ನನಗೇನು ಕಡಿಮೆ ಆಗಿದೆ ಅನಿಸಿತು. ನೇರವಾಗಿ ನಾನು ಮನೆಗೆ ಬಂದೆ. ಆ ಘಟನೆ ಬದುಕು ಬದಲಿಸಿತು’ ಎಂದಿದ್ದರು ಅವರು.
What a humble take amongst stars who rant about how tough it is for them by u/okay177 in BollyBlindsNGossip
ರವೀನಾ ಅವರ ಬಗ್ಗೆ ಹಲವು ಅಚ್ಚರಿಯ ವಿಚಾರಗಳು ಇವೆ. ರವೀನಾ ತಂದೆ ಹೆಸರು ರವಿ, ತಾಯಿ ವೀನಾ. ಇಬ್ಬರ ಹೆಸರನ್ನು ಸೇರಿಸಿ ಇವರಿಗೆ ರವೀನಾ ಎಂದು ಇಡಲಾಗಿದೆ. ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ರವೀನಾ ಕಾಲೇಜು ದಿನಗಳಲ್ಲಿ ಒಂದೇ ತರಗತಿಯಲ್ಲಿ ಕಲಿತಿದ್ದಾರೆ. ರವೀನಾ ತಾವು 21ನೇ ವಯಸ್ಸಿನಲ್ಲಿದ್ದಾಗ ಎರಡು ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ