‘ಕಣ್ಣು ತೆರೆಸೋ ಚಿತ್ರ’; ‘ಸಿತಾರೆ ಜಮೀನ್ ಪರ್’ ನೋಡಿ ವಿಮರ್ಶೆ ತಿಳಿಸಿದ ಸುಧಾ ಮೂರ್ತಿ
ಸುಧಾ ಮೂರ್ತಿಯವರು ಆಮೀರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಚಿತ್ ವೀಕ್ಷಿಸಿದ್ದಾರೆ. ಇದನ್ನು ಅವರು ಕಣ್ಣು ತೆರೆಸುವಂತಹ ಅನುಭವ ಎಂದು ಹೇಳಿದ್ದಾರೆ. ಇದು ಅರಿವು ಮೂಡಿಸುವ ಈ ಚಿತ್ರ ಭಾವನಾತ್ಮಕವಾಗಿ ಆಳವಾಗಿ ಪ್ರಭಾವ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಜೂನ್ 20 ರಂದು ಚಿತ್ರ ಬಿಡುಗಡೆಯಾಗಲಿದೆ.

ಆಮಿರ್ ಖಾನ್ (Aamir Khan) ನಟನೆಯ ‘ಸಿತಾರೇ ಜಮೀನ್ ಪರ್’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಸಿನಿಮಾ ರಿಲೀಸ್ ಆಗಲು ಇನ್ನೂ ಒಂದು ವಾರ ಬಾಕಿ ಇದೆ. ಈ ಚಿತ್ರವನ್ನು ಸೆಲೆಬ್ರಿಟಿಗಳಿಗೆ ಮೊದಲೇ ತೋರಿಸುವ ಕೆಲಸವನ್ನು ಆಮಿರ್ ಖಾನ್ ಮಾಡುತ್ತಿದ್ದಾರೆ. ಲೇಖಕಿ ಸುಧಾ ಮೂರ್ತಿ ಅವರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಈ ಸಿನಿಮಾನ ಅವರು ಕಣ್ಣು ತೆರೆಸುವ ಚಿತ್ರ ಎಂದಿದ್ದಾರೆ. ಅಲ್ಲದೆ, ಭಾವನಾತ್ಮಕವಾಗಿ ಸಿನಿಮಾ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ಕೂಡ ವಿವರಿಸಿದ್ದಾರೆ.
‘ಇದು ನಮ್ಮ ಕಣ್ಣು ತೆರೆಸುವಂತಹ ಸಿನಿಮಾ. ಏಕೆಂದರೆ, ನಾವು ಸಾಮಾನ್ಯರಲ್ಲ ಎಂದು ಕರೆಯುವ ಮಕ್ಕಳನ್ನು ಅನೇಕ ಜನರು ಅರ್ಥಮಾಡಿಕೊಳ್ಳುವುದಿಲ್ಲ. ಅವರ ಹೃದಯ ಶುದ್ಧವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರು ಜೀವನ ಯಾವಾಗಲೂ ಪರಿಶುದ್ಧ. ಹೀಗಾಗಿ, ಯಾವಾಗಲೂ ನಗುತ್ತಾರೆ. ಇದು ತುಂಬಾ ಸುಂದರವಾದ ಸಿನಿಮಾ’ ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಸುಧಾ ಮೂರ್ತಿ ಅವರು ಈ ರೀತಿ ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರಗಳನ್ನು ವೀಕ್ಷಿಸಿ ಈ ಮೊದಲು ಕೂಡ ವಿಮರ್ಶೆ ಮಾಡಿದ ಉದಾಹರಣೆ ಇದೆ. ಈಗ ಅವರು ‘ಸಿತಾರೇ ಜಮೀನ್ ಪರ್’ ಚಿತ್ರವನ್ನು ಹೊಗಳಿದ್ದು, ಸಿನಿಮಾಗೆ ಮೈಲೇಜ್ ಸಿಗಲು ಸಹಕಾರಿ ಆಗಲಿದೆ.
‘ಸಿತಾರೆ ಜಮೀನ್ ಪರ್’ ಚಿತ್ರದ ಬಗ್ಗೆ..
ಆರ್ಎಸ್ ಪ್ರಸನ್ನ ಅವರು ‘ಸಿತಾರೆ ಜಮೀನ್ ಪರ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2007ರಲ್ಲಿ ಬಂದ ಕ್ಲಾಸಿಕ್ ಸಿನಿಮಾ ‘ತಾರೇ ಜಮೀನ್ ಪರ್’ ಚಿತ್ರದ ಸೀಕ್ವೆಲ್ ಎಂದು ಇದನ್ನು ಕರೆಯಬಹುದು. ‘ತಾರೇ ಜಮೀನ್ ಪರ್’ ಚಿತ್ರ ಡಿಸ್ಲೆಕ್ಸಿಕ್ ಸಮಸ್ಯೆ ಬಗ್ಗೆ ಇತ್ತು. ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲೂ ಇದೇ ರೀತಿಯ ಕಥೆ ಇದೆ.
ಇದನ್ನೂ ಓದಿ: ಅಂಬಾನಿ ಮಗನ ಮದುವೆಯಲ್ಲೂ ಸುಧಾ ಮೂರ್ತಿ ಸಿಂಪಲ್; ಬರೀ ಮಂಗಳಸೂತ್ರದಲ್ಲಿ ಇನ್ಫೋಸಿಸ್ ಒಡತಿ
ಬಾಸ್ಕೆಟ್ ಬಾಲ್ ಕೋಚ್ ಆಗಿ ಆಮಿರ್ ಖಾನ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸ್ಪ್ಯಾನಿಶ್ನ ‘ಕ್ಯಾಮ್ಪೊಯೋನಸ್’ ಚಿತ್ರದ ರಿಮೇಕ್ ಆಗಿದೆ. ಯಥಾವತ್ತು ರಿಮೇಕ್ ಮಾಡಿದ ಆರೋಪ ಆಮಿರ್ ಖಾನ್ ಮೇಲೆ ಇದೆ. ಆಮಿರ್ ಜೊತೆ ಜೆನಿಲಿಯಾ ದೇಶ್ಮುಖ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಜೂನ್ 20ರಂದು ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








