AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ದಿನಕ್ಕೆ ಒಂದು ಲಕ್ಷ ಸಂಪಾದನೆ ಮಾಡಲು ಸುಧಾ ಮೂರ್ತಿ ಹೇಳಿದ್ದಾರೆಂಬ ವಿಡಿಯೋ ವೈರಲ್

ಫೇಸ್‌ಬುಕ್‌ ಖಾತೆದಾರರರೊಬ್ಬರು 3.34 ಸೆಕೆಂಡ್‌ಗಳನ್ನು ಒಳಗೊಂಡಿರುವ ಸುಧಾಮೂರ್ತಿಯವರ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಜನರಿಗೆ ದಿನಕ್ಕೆ 1,00,000 ರೂಪಾಯಿಗಳನ್ನು ಗಳಿಸುವ ಯೋಜನೆಯನ್ನು ಪ್ರಚಾರ ಮಾಡುತ್ತಿರುವುದನ್ನು ಕಾಣಬಹುದು.

Fact Check: ದಿನಕ್ಕೆ ಒಂದು ಲಕ್ಷ ಸಂಪಾದನೆ ಮಾಡಲು ಸುಧಾ ಮೂರ್ತಿ ಹೇಳಿದ್ದಾರೆಂಬ ವಿಡಿಯೋ ವೈರಲ್
Fact Check
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on:Nov 24, 2024 | 11:40 AM

Share

ಲೇಖಕಿ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರು ಹೂಡಿಕೆಯನ್ನು ಪ್ರಚಾರ ಮಾಡಲು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂಟರ್ನೆಟ್‌ನಲ್ಲಿ ಹಲವಾರು ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ ಖಾತೆದಾರರರೊಬ್ಬರು 3.34 ಸೆಕೆಂಡ್‌ಗಳನ್ನು ಒಳಗೊಂಡಿರುವ ಸುಧಾಮೂರ್ತಿಯವರ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಜನರಿಗೆ ದಿನಕ್ಕೆ 1,00,000 ರೂಪಾಯಿಗಳನ್ನು ಗಳಿಸುವ ಯೋಜನೆಯನ್ನು ಪ್ರಚಾರ ಮಾಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಸುಧಾ ಮೂರ್ತಿ ಹೇಳಿರುವುದೇನು?

ಜನರು ಕನಿಷ್ಟ ಒಂದುಲಕ್ಷ ರೂಪಾಯಿ ಗಳಿಸಲು ‘ಕ್ವಾಂಟ್ರಮ್‌ ಎಐ’ ಪ್ರೋಗ್ರಾಂನ್ನು ಅಭಿವೃದ್ಧಿ ಪಡೆಸಿದ್ದೇವೆ. ಈ ಯೋಜನೆಯನ್ನು ಉಪಯೋಗ ಮಾಡಿಕೊಳ್ಳಿ. ಇದರ ಪ್ರತಿಯಾಗಿ ನಾನು ಏನು ಆಶಿಸುತ್ತಿಲ್ಲ ಹಾಗೂ ನಾನು ಯಾವುದೇ ಮೋಸದ ಭರವಸೆಯನ್ನು ನೀಡುತ್ತಿಲ್ಲ. ಹಾಗೆ ಸಾಫ್ಟ್‌ವೇರ್‌ ಬಗ್ಗೆ ಮಾತನಾಡಿದ ಸುಧಾಮೂರ್ತಿಯವರು, ಕ್ವಾಂಟ್ರಮ್‌ ಎಐ ಪ್ರೋಗ್ರಾಂನ್ನು ಫೋನ್‌ ಅಥವಾ ಕಂಪ್ಯೂಟರ್‌ನಿಂದ ಮಾಡಬಹುದು. ಎಐ ಆಧಾರಿತ ತಂತ್ರಜ್ಞಾನವನ್ನು ಒಳಗೊಂಡ ಕ್ವಾಂಟ್ರಮ್‌ ಎಐ ಪ್ರೋಗ್ರಾಂ ಹಣಕಾಸು ಮಾರುಕಟ್ಟೆಯಲ್ಲಿ, ಪ್ರವೃತ್ತಿಗಳನ್ನು ವಿಶ್ಲೇಷಿಸಲು ಸಹಾಯ ಮಾಡುವುದಲ್ಲದೇ ನಿಮ್ಮ ಯಶಸ್ಸನ್ನು ಸಹ ಖಚಿತ ಪಡೆಸುತ್ತದೆ. ಈ ಸೌಲಭ್ಯವನ್ನು ಪಡೆಯಲು ನೀವು ಮೊದಲು ಕ್ವಾಂಟ್ರಮ್‌ ಎಐ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಅಗತ್ಯ ವಿವರಗಳನ್ನು ನಮೂದಿಸಬೇಕಾಗುತ್ತದೆ. ನಂತರ ಕಂಪನಿಯ ವೈಯಕ್ತಿಕ ವ್ಯವಸ್ಥಾಪಕರು ನಿಮ್ಮನ್ನು ಸಂಪರ್ಕಿಸಿ ನಿಮಗಿರುವ ಎಲ್ಲಾ ಸಂದೇಹಗಳಿಗೆ ಉತ್ತರಿಸಿ ನಿಮಗೆ ಫ್ಲಾಟ್‌ಫಾಮ್‌ಗೆ ಆಕ್ಸಿಸ್‌ ನೀಡುತ್ತಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಈ ವಿಡಿಯೋದ ಆಡಿಯೋ ಭಾಗವು AI ಯಿಂದ ರಚಿತವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಸುಧಾ ಮೂರ್ತಿ ಅವರ ತುಟಿ ಚಲನೆಗಳು ವೈರಲ್ ವಿಡಿಯೋದ ಆಡಿಯೋ ಭಾಗಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ನಾವು ಗಮನಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ, ನಾವು ಗೂಗಲ್ ಲೆನ್ಸ್ ಅನ್ನು ಬಳಸಿಕೊಂಡು ಮೇಲಿನ ವೈರಲ್ ವಿಡಿಯೋದಿಂದ ರಚಿಸಲಾದ ಕೀಫ್ರೇಮ್‌ಗಳನ್ನು ಹಿಮ್ಮುಖವಾಗಿ ಹುಡುಕಿದ್ದೇವೆ. ಆಗ ನಮಗೆ ಇದೇ ವಿಡಿಯೋದ ನೈಜ್ಯ ಆವೃತ್ತಿ ಸಿಕ್ಕಿದೆ. ಇದನ್ನು 2017 ರಲ್ಲಿ ‘ಶ್ರೀಮತಿ. ಜಮ್ನಾಬಾಯಿ ನರ್ಸೀ ಕ್ಯಾಂಪಸ್‌ನಲ್ಲಿ ಸುಧಾ ಮೂರ್ತಿ’ ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡಲಾಗಿದೆ. ಅವರು ಇದರಲ್ಲಿ ಆಡಿರುವ ಮಾತುಗಳಲ್ಲಿ ಯಾವುದೇ ಹೂಡಿಕೆಯ ಬಗ್ಗೆ ಇಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

ನೈಜ್ಯ ವಿಡಿಯೋದಲ್ಲಿ ಸುಧಾ ಮೂರ್ತಿ ಅವರು, ಮಕ್ಕಳನ್ನು ಆಡಂಬರದಿಂದ ಬೆಳೆಸಿದರೆ ಏನೆಲ್ಲ ತೊಂದರೆ ಆಗುತ್ತದೆ ಎಂಬ ಕುರಿತು ಮಾತನಾಡಿದ್ದಾರೆ. ನಾವು ಮತ್ತಷ್ಟು ನಿಜಾಂಶವನ್ನು ತಿಳಿಯಲು ಕೆಲವು ಕೀವರ್ಡ್‌ಗಳ ಮೂಲಕವೂ ಹುಡುಕಾಟ ನಡೆಸಿದೆವು. ನಮಗೆ ಹುಡುಕಾಟದಲ್ಲಿ ಯಾವುದೇ ಮಾಹಿತಿ ಸಿಗಲಿಲ್ಲ. ಸುಧಾಮೂರ್ತಿಯವರು ಕ್ವಾಂಟ್ರಮ್‌ ಎಐ ಪ್ರೋಗ್ರಾಮ್‌ ಬಗ್ಗೆ ಪ್ರಚಾರ ಮಾಡುತ್ತಿರುವ ಯಾವುದೇ ಅಧಿಕೃತ ವೆಬ್‌ಸೈಟ್ ಅಥವಾ ವಿಡಿಯೋವನ್ನು ಅಪ್‌ಲೋಡ್ ಮಾಡಿದ ಯಾವುದೇ ಕಾನೂನುಬದ್ಧ ವೆಬ್‌ಸೈಟ್ ನಮಗೆ ಕಂಡುಬಂದಿಲ್ಲ.

ಇದನ್ನೂ ಓದಿ: ಮತ್ತೊಂದು ಹೊಸ ಬಿಜಿನೆಸ್‌ ಪ್ರಾರಂಭಿಸಿದ ಡೊನಾಲ್ಡ್ ಟ್ರಂಪ್

ಇದಲ್ಲದೆ, ನಾವು ಆಡಿಯೋ ಭಾಗವನ್ನು ಪ್ರತ್ಯೇಕಿಸಿ ಮತ್ತು ಹೈವ್ ಮಾಡರೇಶನ್ ಅನ್ನು ಬಳಸಿಕೊಂಡು ಅದನ್ನು ಪರೀಕ್ಷಿಸಿದ್ದೇವೆ. ಆಗ ಅದು AI- ರಚಿತವಾಗಿದೆ ಎಂದು ಪ್ರಮಾಣೀಕರಿಸಿದೆ. ಆದ್ದರಿಂದ, AI- ರಚಿತವಾದ ಆಡಿಯೋವನ್ನು ವಿಡಿಯೋಗೆ ಡಿಜಿಟಲ್ ಆಗಿ ಸೇರಿಸಲಾಗಿದೆ ಎಂದು ತೀರ್ಮಾನಿಸಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:34 am, Sun, 24 November 24

ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
Daily Devotional: ಅನಾರೋಗ್ಯದಿಂದ ಪಾರಾಗಲು ಏನು ಮಾಡಬೇಕು ಗೊತ್ತಾ?
Daily Devotional: ಅನಾರೋಗ್ಯದಿಂದ ಪಾರಾಗಲು ಏನು ಮಾಡಬೇಕು ಗೊತ್ತಾ?
Daily horoscope: ಈ ರಾಶಿಯವರಿಗೆ ಏಳು ಗ್ರಹಗಳ ಶುಭಫಲ, ಧನಯೋಗ
Daily horoscope: ಈ ರಾಶಿಯವರಿಗೆ ಏಳು ಗ್ರಹಗಳ ಶುಭಫಲ, ಧನಯೋಗ
ವಿಷ್ಣುವರ್ಧನ್ ಸಮಾಧಿ ಉಳಿವಿಗೆ ಪ್ರಯತ್ನಿಸಿದ ಸ್ಟಾರ್ ನಟರು ಯಾರು?
ವಿಷ್ಣುವರ್ಧನ್ ಸಮಾಧಿ ಉಳಿವಿಗೆ ಪ್ರಯತ್ನಿಸಿದ ಸ್ಟಾರ್ ನಟರು ಯಾರು?
ಒಡಿಶಾದಲ್ಲಿ ಅಗ್ನಿ 5 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿ
ಒಡಿಶಾದಲ್ಲಿ ಅಗ್ನಿ 5 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿ
ವಿಷ್ಣು ಸಮಾಧಿ ಧ್ವಂಸ: ವಿಷಯ ತಿಳಿದಾಗ ಸುದೀಪ್ ಮೊದಲ ಪ್ರತಿಕ್ರಿಯೆ ಹೇಗಿತ್ತು
ವಿಷ್ಣು ಸಮಾಧಿ ಧ್ವಂಸ: ವಿಷಯ ತಿಳಿದಾಗ ಸುದೀಪ್ ಮೊದಲ ಪ್ರತಿಕ್ರಿಯೆ ಹೇಗಿತ್ತು
ಅನುದಾನ ಕೇಳಿದ್ರೆ ಜಾತಿ ಯಾವುದು ಅಂದ್ರು: ಸಚಿವರ ವಿರುದ್ಧ ಶಾಸಕ ಆರೋಪ
ಅನುದಾನ ಕೇಳಿದ್ರೆ ಜಾತಿ ಯಾವುದು ಅಂದ್ರು: ಸಚಿವರ ವಿರುದ್ಧ ಶಾಸಕ ಆರೋಪ
ಅಹಮದಾಬಾದ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿ ಕೊಲೆ; ತೀವ್ರಗೊಂಡ ಪ್ರತಿಭಟನೆ
ಅಹಮದಾಬಾದ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿ ಕೊಲೆ; ತೀವ್ರಗೊಂಡ ಪ್ರತಿಭಟನೆ
ಅನುದಾನದ ಕೊರತೆಯಿಂದ ನಗರದ ರಸ್ತೆ, ಕೆರೆ, ಪಾರ್ಕುಗಳು ಹಾಳಾಗಿವೆ: ವಿಶ್ವನಾಥ್
ಅನುದಾನದ ಕೊರತೆಯಿಂದ ನಗರದ ರಸ್ತೆ, ಕೆರೆ, ಪಾರ್ಕುಗಳು ಹಾಳಾಗಿವೆ: ವಿಶ್ವನಾಥ್
ಉಚ್ಚಾಟನೆಯಿಂದ ರಾಜಣ್ಣಗಾಗಿರುವಷ್ಟು ಅಪಮಾನ ನಂಗಾಗಿಲ್ಲ: ಯತ್ನಾಳ್
ಉಚ್ಚಾಟನೆಯಿಂದ ರಾಜಣ್ಣಗಾಗಿರುವಷ್ಟು ಅಪಮಾನ ನಂಗಾಗಿಲ್ಲ: ಯತ್ನಾಳ್