AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಮತ್ತೊಂದು ಹೊಸ ಬಿಜಿನೆಸ್‌ ಪ್ರಾರಂಭಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸದಾಗಿ ಎಲೆಕ್ಟ್ರಿಕ್ ಗಿಟಾರ್ ವ್ಯಾಪಾರವನ್ನು ಪ್ರಾರಂಭಿಸಿದ್ದಾರೆ. ಟ್ರಂಪ್ ಅವರ ಆಟೋಗ್ರಾಫ್ ಹೊಂದಿರುವ ಎಲೆಕ್ಟ್ರಿಕ್ ಗಿಟಾರ್‌ಗಳಿಗೆ ವಿಶೇಷ ಬೆಲೆ ನಿಗದಿಪಡಿಸಲಾಗಿದೆ. ಟ್ರಂಪ್ ಸಹಿ ಮಾಡಿರುವ ಗಿಟಾರ್ ಗಳ ಬೆಲೆ 10 ಸಾವಿರ ಡಾಲರ್ (8.45 ಲಕ್ಷ ರೂ.) ಎಂದು 'ಟ್ರಂಪ್ ಗಿಟಾರ್ಸ್' ವೆಬ್‌ಸೈಟ್ ಬಹಿರಂಗಪಡಿಸಿದೆ.

Viral News: ಮತ್ತೊಂದು ಹೊಸ ಬಿಜಿನೆಸ್‌  ಪ್ರಾರಂಭಿಸಿದ ಡೊನಾಲ್ಡ್ ಟ್ರಂಪ್
Trump Guitars
ಅಕ್ಷತಾ ವರ್ಕಾಡಿ
|

Updated on: Nov 24, 2024 | 11:10 AM

Share

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಹೊಸ ವ್ಯವಹಾರ ಆರಂಭಿಸಿದ್ದಾರೆ. ಹೊಸದಾಗಿ ಎಲೆಕ್ಟ್ರಿಕ್ ಗಿಟಾರ್ ವ್ಯಾಪಾರವನ್ನು ಪ್ರಾರಂಭಿಸಿದ್ದು, ಈ ಗಿಟಾರ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅದರಲ್ಲೂ ಅಮೆರಿಕದ ಧ್ವಜ ಮತ್ತು ಹದ್ದಿನ ಆಕೃತಿಗಳು ಈ ಗಿಟಾರ್ ನಲ್ಲಿ ಆಕರ್ಷಕವಾಗಿ ಕಾಣುತ್ತವೆ. ‘ಮೇಕ್ ಅಮೇರಿಕಾ ಗ್ರೇಟ್ ಅಗೇನ್’ ಎಂಬ ಘೋಷವಾಕ್ಯಗಳನ್ನು ಕಾಣಬಹುದು. ಇದಲ್ಲದೆ ಅವುಗಳಲ್ಲಿ ಕೆಲವು ಗಿಟಾರ್‌ಗಳಿಗೆ ಟ್ರಂಪ್ ಸಹಿ ಮಾಡಿದ್ದಾರೆ. ಅವರು ಈ ವ್ಯವಹಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.

ಇಲ್ಲದಿದ್ದರೆ, ಟ್ರಂಪ್ ಗಿಟಾರ್ ವೆಬ್‌ಸೈಟ್ ಈ ಗಿಟಾರ್ ಬಗ್ಗೆ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿದೆ. ಮಾರಾಟಕ್ಕಿರುವ ಒಟ್ಟು 1,300 ಗಿಟಾರ್‌ಗಳಲ್ಲಿ 1,000 ಕ್ಕಿಂತ ಹೆಚ್ಚು ಗಿಟಾರ್‌ಗಳನ್ನು $1,250 ರಿಂದ $1,500 ಕ್ಕೆ ಮಾರಾಟ ಮಾಡುತ್ತಾರೆ. ಟ್ರಂಪ್ ಅವರ ಆಟೋಗ್ರಾಫ್ ಹೊಂದಿರುವ ಎಲೆಕ್ಟ್ರಿಕ್ ಗಿಟಾರ್‌ಗಳಿಗೆ ವಿಶೇಷ ಬೆಲೆ ನಿಗದಿಪಡಿಸಲಾಗಿದೆ. ಟ್ರಂಪ್ ಸಹಿ ಮಾಡಿರುವ ಗಿಟಾರ್ ಗಳ ಬೆಲೆ 10 ಸಾವಿರ ಡಾಲರ್ (8.45 ಲಕ್ಷ ರೂ.) ಎಂದು ಘೋಷಿಸಲಾಗಿದ್ದು, ಸಹಿ ಹಾಕಿದ ಗಿಟಾರ್​ ಕೇವಲ 275 ಮಾತ್ರ ಇವೆ.

ಇದನ್ನೂ ಓದಿ: ಪತ್ನಿಯನ್ನು ಹನಿಮೂನ್​​ಗೆಂದು ಕರೆದ್ಯೊಯ್ದು, ಶೇಖ್​​​​ಗೆ ಮಾರಿದ ಪತಿ, ಆಕೆ ಭಾರತಕ್ಕೆ ವಾಪಸ್ಸು ಬಂದಿದ್ದೇ ರೋಚಕ

ಈ ವಿಶೇಷ ಗಿಟಾರ್ ಹೊಂದಲು 10 ಸಾವಿರ ಡಾಲರ್ (8.45 ಲಕ್ಷ ರೂ.) ಪಾವತಿಸಬೇಕು. ಒಟ್ಟು ನಾಲ್ಕು ಬಗೆಯ ಗಿಟಾರ್‌ಗಳನ್ನು ಮಾರಾಟ ಮಾಡುವುದಾಗಿ ಎಂದು ‘ಟ್ರಂಪ್ ಗಿಟಾರ್ಸ್’ ವೆಬ್‌ಸೈಟ್ ಬಹಿರಂಗಪಡಿಸಿದೆ. ಏತನ್ಮಧ್ಯೆ, ಟ್ರಂಪ್ ಈ ಹಿಂದೆ ಬೈಬಲ್ ಮತ್ತು ವಾಚ್‌ಗಳ ವ್ಯಾಪಾರವನ್ನು ಪ್ರಾರಂಭಿಸಿದ್ದರು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ