AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಾರ್ಲೆ ಜಿ ಬಿಸ್ಕೆಟ್​​ ಬಳಸಿ ಬಿರಿಯಾನಿ ತಯಾರಿಸಿದ ಮಹಿಳೆ; ವಿಡಿಯೋ ವೈರಲ್​​

ಪಾರ್ಲೆ-ಜಿ ಬಿಸ್ಕಟ್ ಬಳಸಿ ಬಿರಿಯಾನಿ ತಯಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ 1 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹೀನಾ ಕೌಸರ್ ಎಂಬ ಮಹಿಳೆ ತಯಾರಿಸಿದ ಈ ವಿಚಿತ್ರ ಬಿರಿಯಾನಿಗೆ ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಆಕೆಯನ್ನು ಟೀಕಿಸಿದರೆ, ಇನ್ನು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಕ್ಷತಾ ವರ್ಕಾಡಿ
|

Updated on: Nov 24, 2024 | 10:27 AM

Share

ಬಿರಿಯಾನಿ ಎಲ್ಲರ ಮೆಚ್ಚಿನ ಖಾದ್ಯ. ಇದರ ಪರಿಮಳ ಮೂಗಿಗೆ ಬಡಿದರೆ ಬಾಯಲ್ಲಿ ನೀರೂರಿಸುತ್ತದೆ. ಸಾಮಾನ್ಯವಾಗಿ ಚಿಕನ್ ಬಿರಿಯಾನಿ, ಹೈದರಾಬಾದ್ ಮಟನ್ ಬಿರಿಯಾನಿ, ವೆಜ್ ಬಿರಿಯಾನಿ, ಮಶ್ರೂಮ್ ಬಿರಿಯಾನಿ, ಪ್ರಾನ್ ಬಿರಿಯಾನಿ ಗೊತ್ತೇ ಇದೆ.. ಆದರೆ ಪಾರ್ಲೆ-ಜಿ ಬಳಸಿ ಬಿರಿಯಾನಿ ಮಾಡುವ ಬಗ್ಗೆ ಯೋಚಿಸಿದ್ದೀರಾ.. ಇದು ಸ್ವಲ್ಪ ವಿಚಿತ್ರ ಎನಿಸಬಹುದು ಆದರೆ ಇದು ಸಂಪೂರ್ಣ ಸತ್ಯ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ.. ಇದರಲ್ಲಿ ಪಾರ್ಲೆ ಜಿ ಬಿಸ್ಕೆಟ್ ಜೊತೆ ಬಿರಿಯಾನಿ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ವೀಡಿಯೊದಲ್ಲಿ ದೊಡ್ಡ ಪಾತ್ರೆಯಲ್ಲಿ ಅನ್ನದ ಜೊತೆಗೆ ಪಾರ್ಲೆ ಜಿ ಬಿಸ್ಕತ್ತು ಇರುವುದನ್ನು ಕಾಣಬಹುದು. ಒಳ್ಳೆಯ ಮಸಾಲೆ ಹಾಕಿ ಈ ಬಿರಿಯಾನಿ ಮಾಡಿದ್ದೇನೆ ಎಂದು ಮಹಿಳೆ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮತ್ತಷ್ಟು ಓದಿ: Viral: ಹುಡುಗರ ಸಹವಾಸವೇ ಬೇಡಪ್ಪಾ ಅಂತ ಮರದೊಂದಿಗೆ ಡೇಟಿಂಗ್‌ ಶುರು ಮಾಡಿದ ಯುವತಿ

creamycreationsbyhkr11 ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಹಂಚಿಕೊಂಡ ಕೇವಲ 3 ದಿನಗಳಲ್ಲಿ 1ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿರುವ ಮಹಿಳೆಯ ಹೆಸರು ಹೀನಾ ಕೌಸರ್. ಈ ವೀಡಿಯೋ ನೋಡಿದವರೆಲ್ಲ ನಾನಾ ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ‘ಈ ಮಹಿಳೆ ವಿರುದ್ಧ ಒಬ್ಬರು ಪ್ರಕರಣ ದಾಖಲಿಸಬೇಕು.. ಮತ್ತೊಬ್ಬರು ಈಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.. ಹೀಗೆ ಬಿರಿಯಾನಿ ತಯಾರಿಸಿ ಊಟ ಹಾಳು ಮಾಡಿದ್ದಾಳೆ.. ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ