Viral : ಎದ್ದೇಳೋ ಕಂದಮ್ಮ, ಸತ್ತ ಮರಿ ಆನೆಯನ್ನು ಎಬ್ಬಿಸುತ್ತಿರುವ ತಾಯಿ ಆನೆ, ವಿಡಿಯೋ ವೈರಲ್

ಮನಕಲಕುಲ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತನ್ನ ಕಂದಮ್ಮ ಸತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ತಾಯಾನೆಯೂ ಸತ್ತ ಮರಿ ಆನೆಯಾನೆಯನ್ನು ಎಬ್ಬಿಸುವ ಸಲುವಾಗಿ ಅದರ ದೇಹವನ್ನು ಎಳೆದಾಡುತ್ತಿರುವ ದೃಶ್ಯವು ನೋಡುಗರನ್ನು ಭಾವುಕರನ್ನಾಗಿಸಿದೆ. ಈ ದೃಶ್ಯ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 23, 2024 | 5:27 PM

ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತನ್ನ ಕರುಳ ಕುಡಿಯ ರಕ್ಷಣೆಗಾಗಿ ತಾಯಿಯಾದವಳು ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾಳೆ. ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ. ಮೂಕ ಪ್ರಾಣಿಗಳು ಕೂಡ ತನ್ನ ಕಂದಮ್ಮನ ಮೇಲೆ ವಿಶೇಷವಾದ ಪ್ರೀತಿಯನ್ನು ಇಟ್ಟಿರುತ್ತವೆ. ಆದರೆ ಅವುಗಳು ಭಾವನೆಗಳನ್ನು ತೋರ್ಪಡಿಸುವ ವಿಧಾನ ಸ್ವಲ್ಪ ಭಿನ್ನವಾಗಿರಬಹುದು. ತಾಯಿ ಆನೆ ತನ್ನ ಮರಿ ಸಾವನ್ನಪ್ಪಿರುವುದನ್ನು ಅರಗಿಸಿಕೊಳ್ಳಲು ಆಗದೇ, ಮರಿಯಾನೆ ದೇಹವನ್ನು ತಾನು ಹೋದಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಈ ವಿಡಿಯೋವನ್ನು, ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ಅಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ, ‘ತಾಯಿ ಆನೆ ತನ್ನ ಮರಿ ಸಾವನ್ನಪ್ಪಿರುವುದನ್ನು ಅರಗಿಸಿಕೊಳ್ಳಲು ಆಗದೆ ಕಷ್ಟ ಪಡುತ್ತಿದೆ. ಇದು ಕೆಲ ಸಮಯದವರೆಗೆ ಅಥವಾ ಕೆಲ ದಿನಗಳ ವರೆಗೆ ತಾಯಿ ಆನೆ ಮರಿಯನ್ನು ಈ ರೀತಿ ಹೋದಲೆಲ್ಲಾ ಕರೆದೊಯ್ಯುತ್ತದೆ. ಬಳಿಕ ಅದಾಗೆಯೇ ಬಿಟ್ಟು ಹೋಗುತ್ತದೆ, ಪ್ರಾಣಿಗಳು ನಮ್ಮಂತೆಯೇ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪತ್ನಿಯನ್ನು ಹನಿಮೂನ್​​ಗೆಂದು ಕರೆದ್ಯೊಯ್ದು, ಶೇಖ್​​​​ಗೆ ಮಾರಿದ ಪತಿ, ಆಕೆ ಭಾರತಕ್ಕೆ ವಾಪಸ್ಸು ಬಂದಿದ್ದೇ ರೋಚಕ

ಈ ವಿಡಿಯೋದಲ್ಲಿ ತಾಯಾನೆಯೊಂದು ಸತ್ತ ಮರಿ ಆನೆಯಾನೆ ಎಬ್ಬಿಸುವ ಸಲುವಾಗಿ ಮರಿಯ ದೇಹವನ್ನು ಎಳೆದಾಡುವುದನ್ನು ನೋಡಬಹುದು. ಈ ವಿಡಿಯೋವು ಒಂದೂವರೇ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು, ‘ಈ ದೃಶ್ಯ ನೋಡಿದರೆ ಕಣ್ಣು ಒದ್ದೆಯಾಗುತ್ತದೆ’ ಎಂದಿದ್ದಾರೆ. ಮತ್ತೊಬ್ಬರು, ‘ಪ್ರೀತಿ ಎಂದೆಂದಿಗೂ ಶಾಶ್ವತ’ ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಇದು ಮನಸ್ಸಿಗೆ ಹತ್ತಿರವಾಗುವ ದೃಶ್ಯವಾಗಿದೆ. ಇದೇ ನೋಡಿ ನಿಜವಾದ ಸಂಬಂಧ. ಆ ತಾಯಾನೆಗೆ ತನ್ನ ಕಂದನ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ’ ಎಂದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ