Viral: ಹುಡುಗರ ಸಹವಾಸವೇ ಬೇಡಪ್ಪಾ ಅಂತ ಮರದೊಂದಿಗೆ ಡೇಟಿಂಗ್‌ ಶುರು ಮಾಡಿದ ಯುವತಿ

ಸಾಮಾನ್ಯವಾಗಿ ವಯಸ್ಸಿಗೆ ಬಂದ ಯುವಕ ಯುವತಿಯರು ಪ್ರೇಮ ಪ್ರಣಯ ಅಂತ ಡೇಟಿಂಗ್‌ ಮಾಡುವುದನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಈ ಹುಡುಗರ ಸಹವಾಸವೇ ಬೇಡಪ್ಪಾ ಎನ್ನುತ್ತಾ ಯುವತಿಯೊಬ್ಬಳು ಮರದೊಂದಿಗೆ ಡೇಟಿಂಗ್‌ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಯುವತಿಯ ಈ ವಿಚಿತ್ರ ಪ್ರೀತಿ-ಪ್ರೇಮವನ್ನು ಕಂಡು ನೋಡುಗರು ಫುಲ್‌ ಶಾಕ್‌ ಆಗಿದ್ದಾರೆ.

Viral: ಹುಡುಗರ ಸಹವಾಸವೇ ಬೇಡಪ್ಪಾ ಅಂತ ಮರದೊಂದಿಗೆ ಡೇಟಿಂಗ್‌ ಶುರು ಮಾಡಿದ ಯುವತಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 12, 2024 | 2:07 PM

ಕೆಲವೊಂದು ಸಂಬಂಧಗಳು ಯಾವಾಗ, ಹೇಗೆ, ಯಾರೊಂದಿಗೆ ಆಗುತ್ತವೆ ಎಂದು ಹೇಳುವುದೇ ಕಷ್ಟ. ಸಾಮಾನ್ಯವಾಗಿ ಯುವತಿಯರಿಗೆ ಹ್ಯಾಂಡ್‌ಸಮ್‌ ಹುಡುಗರನ್ನು ಕಂಡರೆ ಅಥವಾ ಒಳ್ಳೆಯ ಮನಸ್ಸಿನ, ಗುಣವಂತ ಹುಡುಗರನ್ನು ಕಂಡರೆ ಪ್ರೀತಿ ಚಿಗುರೊಡೆಯುತ್ತದೆ. ಮತ್ತು ಅವರೊಂದಿಗೆ ಡಿನ್ನರ್‌, ಫಿಲ್ಮ್‌, ಶಾಪಿಂಗ್‌ ಅಂತೆಲ್ಲಾ ಡೇಟಿಂಗ್‌ ಹೋಗಲು ಬಯಸುತ್ತಾರೆ. ಆದ್ರೆ ಇಲ್ಲೊಬ್ಬಳು ಯುವತಿ ಮಾತ್ರ ಹುಡುಗರ ಸಹವಾಸವೇ ನನಗೆ ಬೇಡಪ್ಪಾ ಎಂದು ಮರದೊಂದಿಗೆ ಡೇಟಿಂಗ್‌ ಮಾಡಲು ಶುರು ಮಾಡಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ವಿಚಿತ್ರ ಪ್ರೇಮಕಥೆಯನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ.

ಮರ-ಗಿಡಗಳನ್ನು ಮಕ್ಕಳಂತೆ ಪ್ರೀತಿಸುವವರು ತುಂಬಾ ಜನ ಇದ್ದಾರೆ. ಆದ್ರೆ ಇಲ್ಲೊಬ್ಬಳು ಯುವತಿ ಮರವನ್ನೇ ತನ್ನ ಬಾಯ್‌ಫ್ರೆಂಡ್‌ ಆಗಿ ಮಾಡಿಕೊಂಡಿದ್ದಾಳೆ. ಇನ್‌ಫ್ಲುಯೆನ್ಸರ್‌ ಐವಿ ಬ್ಲೂಮ್‌ ಮರದೊಂದಿಗೆ ಡೇಟಿಂಗ್‌ ಮಾಡುತ್ತಿದ್ದು, ಈ ಕುರಿತ ವಿಡಿಯೋವನ್ನು ಆಕೆ ತನ್ನ ಯುಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾಳೆ. ಕಳೆದ ಎರಡು ವಾರಗಳಿಂದ ನಾನು ಮರದೊಂದಿಗೆ ಡೇಟಿಂಗ್‌ ಮಾಡುತ್ತಿದ್ದು, ಮರದೊಂದಿಗೆ ಮೂವಿ ನೋಡುವುದರಿಂದ ಹಿಡಿದು ಟ್ರಿಪ್‌ ಹೋಗುವುದರವರೆಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಆ ಮರಕ್ಕೆ ಎಐ ವ್ಯವಸ್ಥೆಯನ್ನು ಸಂಯೋಜಿಸುವ ಮೂಲಕ ಮರವೂ ಸಂಭಾಷಣೆ ನಡೆಸುವಂತೆ ಮಾಡಿದ್ದಾಳೆ.

Ivy Bloom ಹೆಸರಿನ ಯುಟ್ಯೂಬ್‌ ಚಾನೆಲ್‌ನಲ್ಲಿಈ ಡೇಟಿಂಗ್‌ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಪುಟ್ಟ ಮರದೊಂದಿಗೆ ಐವಿ ಬ್ಲೂಮ್‌ ಡೇಟಿಂಗ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಐವಿ ಮರವನ್ನು ತಬ್ಬಿಕೊಂಡು ಮುತ್ತುಕೊಡುವುದರಿಂದ ಹಿಡಿದು, ಅದರೊಂದಿಗೆ ಮೂವಿ ನೋಡುತ್ತಾ ರೊಮ್ಯಾಂಟಿಕ್‌ ಪಿಕ್‌ನಿಕ್‌ ಕೂಡಾ ಹೋಗುತ್ತಿರುತ್ತಾಳೆ. ಎರಡು ವಾರಗಳಿಂದ ಈ ಬಾಯ್‌ಫ್ರೆಂಡ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದೇನೆ, ಈ ಅನುಭವವು ತುಂಬಾನೇ ಅದ್ಭುತವಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಮಸೀದಿಯಾಗಿ ಪರಿವರ್ತನೆಯಾದ ಹಿಂದೂ ದೇವಸ್ಥಾನ?

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.6 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಪ್ರೀತಿಯಲ್ಲಿ ಯಾವುದೇ ಮೋಸವಿರಲು ಸಾಧ್ಯವಿಲ್ಲ, ಇದು ತುಂಬಾನೇ ಅದ್ಭುತವಾದ ಪ್ರೇಮʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಮಹಿಳೆಗೆ ಇದೆಂಥಾ ಹುಚ್ಚುʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಈವರೆಗೆ ನೋಡಿದ ಅದ್ಭುತ ಜೋಡಿಯಿದುʼ ಎಂದು ಕಾಮೆಂಟ್‌ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ