AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ವೈರಲ್ ಆಗುತ್ತಿರುವ ಈ ಸುಂದರ ಪಕ್ಷಿಗಳ ವಿಡಿಯೋದ ಅಸಲಿ ಕಥೆ ಏನು?: ಇಲ್ಲಿದೆ ನೋಡಿ

ಪಕ್ಷಿಗಳ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಕಂಡುಹಿಡಿದಿದೆ. ವಾಸ್ತವವಾಗಿ, ವಿಡಿಯೋದಲ್ಲಿ ಕಂಡುಬರುವ ಪಕ್ಷಿಗಳು ನಿಜವಲ್ಲ, ಅವುಗಳನ್ನು AI ಅಂದರೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ರಚಿಸಲಾಗಿದೆ.

Fact Check: ವೈರಲ್ ಆಗುತ್ತಿರುವ ಈ ಸುಂದರ ಪಕ್ಷಿಗಳ ವಿಡಿಯೋದ ಅಸಲಿ ಕಥೆ ಏನು?: ಇಲ್ಲಿದೆ ನೋಡಿ
Fact Check
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: Nov 24, 2024 | 5:40 PM

Share

ಎರಡು ಸುಂದರವಾದ ವರ್ಣರಂಜಿತ ಪಕ್ಷಿಗಳು ಮರದ ಕೊಂಬೆಯ ಮೇಲೆ ಕುಳಿತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪಕ್ಷಿಗಳು ಅಲಂಕೃತವಾಗಿವೆ ಮತ್ತು ತಲೆಯ ಮೇಲೆ ಟೋಪಿಗಳಿವೆ. ವಿಶಿಷ್ಟ ನೋಟವನ್ನು ಹೊಂದಿರುವ ಅವುಗಳ ಗರಿಗಳ ಮೇಲೆ ಮಣಿಗಳನ್ನು ಅಲಂಕರಿಸಿರುವುದನ್ನು ನೋಡಬಹುದು. ಕೊಕ್ಕು ಮತ್ತು ಕುತ್ತಿಗೆಗೆ ಬೆಳ್ಳಿಯ ಅಲಂಕಾರಗಳಿವೆ. ಇದು ಅದ್ಭುತವಾದ ಜಪಾನೀ ಪಕ್ಷಿಗಳು ಎಂಬ ಶೀರ್ಷಿಕೆಯೊಂದಿಗೆ ಅನೇಕರು ಹಂಚಿಕೊಳ್ಳುತ್ತಿದ್ದಾರೆ.

ಫೇಸ್‌ಬುಕ್ ಬಳಕೆದಾರರೊಬ್ಬರು ನವೆಂಬರ್ 21 ರಂದು ಈ ವೈರಲ್ ವಿಡಿಯೋವನ್ನು ಹಂಚಿಕೊಂಡು, “ಪ್ರಕೃತಿಯೇ ಅವುಗಳನ್ನು ಅಲಂಕರಿಸಿದೆ, ನೀವು ಅಂತಹ ಸುಂದರವಾದ ಪಕ್ಷಿಗಳನ್ನು ನೋಡಿರಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ. ಅಂತೆಯೇ, ಇನ್​ಸ್ಟಾಗ್ರಾಮ್ ಬಳಕೆದಾರರು ಸಹ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವಾಸ್ತವವಾಗಿ, ವಿಡಿಯೋದಲ್ಲಿ ಕಂಡುಬರುವ ಪಕ್ಷಿಗಳು ನಿಜವಲ್ಲ, ಇದನ್ನು AI ಅಂದರೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ರಚಿಸಲಾಗಿದೆ.

ವೈರಲ್ ವಿಡಿಯೋದ ಸತ್ಯವನ್ನು ತಿಳಿಯಲು, ನಾವು ಇನ್ವಿಡ್ ಟೂಲ್ ಸಹಾಯದಿಂದ ವಿಡಿಯೋದ ಹಲವಾರು ಕೀಫ್ರೇಮ್‌ಗಳನ್ನು ಹೊರತೆಗೆದಿದ್ದೇವೆ ಮತ್ತು ಅವುಗಳನ್ನು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಹುಡುಕಿದ್ದೇವೆ. ಆಗ ಎಂಟರ್‌ಟೈನ್‌ಮೆಂಟ್.29 ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ನಾವು ಈ ವಿಡಿಯೋವನ್ನು ಕಂಡುಕೊಂಡಿದ್ದೇವೆ. 14 ನವೆಂಬರ್ 2024 ರಂದು ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ಇದನ್ನು AI ನಿಂದ ರಚಿಸಲಾಗಿದೆ ಎಂದು ವಿವರಿಸಲಾಗಿದೆ.

ಹಾಗೆಯೆ ಹುಡುಕಾಟದ ಸಮಯದಲ್ಲಿ, Moses Ekene Obiechina ಎಂಬ ಹೆಸರಿನ ಫೇಸ್‌ಬುಕ್ ಬಳಕೆದಾರರಿಂದ ಹಂಚಿಕೊಂಡ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ನವೆಂಬರ್ 14, 2024 ರಂದು ಅಪ್ಲೋಡ್ ಮಾಡಿದ ವಿಡಿಯೋದ ಶೀರ್ಷಿಕೆಯು “ಈ ವೀಡಿಯೊ ನಿಜವಲ್ಲ” ಎಂದು ಹೇಳುತ್ತದೆ. ಈ ವಿಡಿಯೋವನ್ನು AI ಬಳಕೆಯಿಂದ ಮಾಡಲಾಗಿದೆ. ಇದು ದೇವರ ಸೃಷ್ಟಿ ಎಂದು ಪರಿಗಣಿಸಿ ಜನರು ಹಂಚಿಕೊಳ್ಳುತ್ತಿದ್ದಾರೆ. ಪಕ್ಷಿಗಳ ತಲೆಯ ಮೇಲೆ ಗೋಚರಿಸುವ ಛತ್ರಿ ಮತ್ತು ಗರಿಗಳನ್ನು ನೋಡಿದರೆ ಅದು ನಿಜವಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ತನಿಖೆಗಾಗಿ, ನಾವು ವಿಡಿಯೋವನ್ನು ಹೈವ್ ಮಾಡರೇಶನ್ ಟೂಲ್‌ಗೆ ಅಪ್‌ಲೋಡ್ ಮಾಡಿದ್ದೇವೆ. ಇದರಲ್ಲಿ, ವಿಡಿಯೋವನ್ನು 88.3 ಪ್ರತಿಶತ AI ನಿಂದ ಮಾಡಲಾಗಿದೆ ಎಂದು ತೋರಿಸಿದೆ. ಹಾಗೆಯೆ ನಾವು ವಿಡಿಯೋಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು AI ಟೂಲ್ ಸೈಟ್ ಎಂಜಿನ್ ಸಹಾಯದಿಂದ ಅವುಗಳನ್ನು ಹುಡುಕಿದ್ದೇವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಇದು 99 ಪ್ರತಿಶತ AI ರಚಿತವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ದಿನಕ್ಕೆ ಒಂದು ಲಕ್ಷ ಸಂಪಾದನೆ ಮಾಡಲು ಸುಧಾ ಮೂರ್ತಿ ಹೇಳಿದ್ದಾರೆಂಬ ವಿಡಿಯೋ ವೈರಲ್

ಹೀಗಾಗಿ ಪಕ್ಷಿಗಳ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಕಂಡುಹಿಡಿದಿದೆ. ವಾಸ್ತವವಾಗಿ, ವಿಡಿಯೋದಲ್ಲಿ ಕಂಡುಬರುವ ಪಕ್ಷಿಗಳು ನಿಜವಲ್ಲ, ಅವುಗಳನ್ನು AI ಅಂದರೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ರಚಿಸಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು