ತೆಲುಗು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮೇಲೆ ಓಪನ್ ಟ್ರೋಲ್; ಹುಟ್ಟಿತು ಚರ್ಚೆ
ತೆಲುಗಿನ ‘ಸಿಂಗಲ್’ ಸಿನಿಮಾನ ವೈರಲ್ ಮೀಮ್‌ಗಳು ಮತ್ತು ಸೆಲೆಬ್ರಿಟಿಗಳ ಡೈಲಾಗ್‌ಗಳನ್ನು ಬಳಸಿ ನಿರ್ಮಿಸಲಾಗಿದೆ. ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹಾಗೂ ಇತರ ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಮತ್ತು ಡೈಲಾಗ್‌ಗಳನ್ನು ಚಿತ್ರದಲ್ಲಿ ಬಳಸಲಾಗಿದೆ. ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಚಿತ್ರದ ಕೆಲವು ದೃಶ್ಯಗಳು ಬಾಲಯ್ಯ ಮತ್ತು ಅಲ್ಲು ಅರ್ಜುನ್ ಸಿನಿಮಾಗಳನ್ನು ನೆನಪಿಸುತ್ತವೆ.

ಕಳೆದ ವರ್ಷ ರಿಲೀಸ್ ಆದ ಉಪೇಂದ್ರ ನಟನೆ ಹಾಗೂ ನಿರ್ದೇಶನದ ‘ಯುಐ’ ಸಿನಿಮಾ (UI Movie) ಯಶಸ್ಸು ಕಂಡಿತ್ತು. ಈ ಚಿತ್ರದ ‘ಟ್ರೋಲ್’ ಸಾಂಗ್ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಟ್ರೋಲ್ಗಳನ್ನೇ ಇಟ್ಟುಕೊಂಡು ಈ ಹಾಡನ್ನು ರಚಿಸಲಾಗಿತ್ತು. ಹೀಗಿರುವಾಗ ಮೀಮ್ಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡಿದರೆ? ಅಂಥ ಸಾಹಸಕ್ಕೆ ತೆಲುಗು ಮಂದಿ ಕೈ ಹಾಕಿ ಯಶಸ್ಸು ಕಂಡಿದ್ದಾರೆ. ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಸೇರಿದಂತೆ ಅನೇಕರ ಡೈಲಾಗ್ ಹಾಗೂ ಪೋಸ್ಗಳನ್ನು ಇದರಲ್ಲಿ ಬಳಕೆ ಮಾಡಿಕೊಳ್ಳಲಾಗಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
‘ಸಿಂಗಲ್’ ಅನ್ನೋದು ಸಿನಿಮಾದ ಹೆಸರು. ಮೇ 9ರಂದು ಈ ಸಿನಿಮಾ ಥಿಯೇಟರ್ನಲ್ಲಿ ಬಿಡುಗಡೆ ಕಂಡಿತು. ಕಾರ್ತಿಕ್ ರಾಜು ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನಿರ್ದೇಶನದಲ್ಲಿ ಅವರಿಗೆ ಇದು ಐದನೇ ಅನುಭವ. ಈ ಸಿನಿಮಾದಲ್ಲಿ ಶ್ರೀ ವಿಷ್ಣು, ಇವಾನಾ, ವೆನ್ನೆಲಾ ಕಿಶೋರ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಪ್ರೆಸೆಂಟ್ ಮಾಡಿದ್ದಾರೆ. ಈ ಚಿತ್ರದ ಕ್ಲಿಪ್ಗಳು ವೈರಲ್ ಆಗಿವೆ.
ಇದನ್ನೂ ಓದಿ: ‘ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ, ನಾನು ಮೊದಲ ಕಲಿತ ಭಾಷೆ ತಮಿಳು’: ರಶ್ಮಿಕಾ ಮಂದಣ್ಣ
ಈ ಮೊದಲು ರಶ್ಮಿಕಾ ಮಂದಣ್ಣ ಅವರು ತಮ್ಮ ಬರ್ತ್ಡೇ ದಿನ ತಲೆಯ ಮೇಲೆ ಕೈ ಇಟ್ಟುಕೊಂಡು ‘ಹ್ಯಾಪಿ ಬರ್ತ್ಡೇ ರಶ್ಶಿ’ ಎನ್ನುತ್ತಾ ಹೇಳುತ್ತಾ ಬರುತ್ತಿದ್ದರು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ವಿಶೇಷ ಎಂದರೆ ‘ಸಿಂಗಲ್’ ಸಿನಿಮಾದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ವೆನ್ನೆಲ್ಲಾ ಕಿಶೋರ್ ಅವರು ‘ಹ್ಯಾಪಿ ಬರ್ತ್ಡೇ ಗಾಯತ್ರಿ’ ಎನ್ನುತ್ತಾ ಸೇಮ್ ಪೋಸ್ನಲ್ಲಿ ಬರುತ್ತಾರೆ. ಸದ್ಯ ಈ ವಿಚಾರ ಚರ್ಚೆ ಹುಟ್ಟುಹಾಕಿದೆ. ಇಷ್ಟೇ ಅಲ್ಲ ಬಾಲಯ್ಯ, ಅಲ್ಲು ಅರ್ಜುನ್ ಸಿನಿಮಾದ ದೃಶ್ಯಗಳನ್ನು ಅದೇ ರೀತಿಯಲ್ಲಿ ನಕಲು ಮಾಡಲಾಗಿದೆ. ವಿಜಯ್ ದೇವರಕೊಂಡ ವೇದಿಕೆ ಮೇಲೆ ಹೇಳಿದ್ದ ಡೈಲಾಗ್ ಒಂದನ್ನು ಸಿನಿಮಾದಲ್ಲಿ ಬಳಕೆ ಬಳಸಲಾಗಿದೆ.
View this post on Instagram
View this post on Instagram
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಕ್ಲಿಪ್ಗಳು ವೈರಲ್ ಆಗಿವೆ. ಇಷ್ಟೇ ಅಲ್ಲ, ಒರಿಜಿನಲ್ ಮೀಮ್/ ಡೈಲಾಗ್ ಯಾವುದು ಎಂಬದುನ್ನು ಒಂದು ಭಾಗದಲ್ಲಿ ಇಡಲಾಗಿದ್ದು, ಸಿನಿಮಾದಲ್ಲಿ ಬಳಕೆ ಆದ ಡೈಲಾಗ್ನ ಮತ್ತೊಂದು ಕಡೆಯಲ್ಲಿ ಹಾಕಿ ವೈರಲ್ ಮಾಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.