‘ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ, ನಾನು ಮೊದಲ ಕಲಿತ ಭಾಷೆ ತಮಿಳು’: ರಶ್ಮಿಕಾ ಮಂದಣ್ಣ
Rashmika Mandanna: ರಶ್ಮಿಕಾ ಮಂದಣ್ಣ ಅವರು ಚೆನ್ನೈನಲ್ಲಿ 'ಕುಬೇರ' ಚಿತ್ರದ ಪ್ರಚಾರ ಕಾರ್ಯಕ್ರಮದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಈ ಫೋಟೋದಲ್ಲಿ ರಶ್ಮಿಕಾ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಚೆನ್ನೈಗೆ ತಮ್ಮ ವಿಶೇಷ ಅನುಬಂಧದ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರ ಹೆಸರು ದೇಶಾದ್ಯಂತ ಚಾಲ್ತಿಯಲ್ಲಿ ಇದೆ. ಅವರು ಇತ್ತೀಚೆಗೆ ‘ಪುಷ್ಪ 2’ ಚಿತ್ರದಿಂದ ಅವರು ದೊಡ್ಡ ಗೆಲುವು ಪಡೆದರು. ಆ ಬಳಿಕ ‘ಛಾವಾ’ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈಗ ರಶ್ಮಿಕಾ ಮಂದಣ್ಣ ಅವರು ತಮಿಳು ಚಿತ್ರರಂಗಕ್ಕೆ ಮರಳಿದ್ದಾರೆ. ‘ವಾರಿಸು’ ಬಳಿಕ ಅವರು ಮತ್ತೆ ತಮಿಳು ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದು, ಈಗ ವೈರಲ್ ಆಗಿದೆ. ಈ ಫೋಟೋಗೆ ಚೆನ್ನೈ ಹಾಗೂ ತಮಿಳು ಭಾಷೆ ಬಗ್ಗೆ ಹೊಗಳಿದ್ದಾರೆ.
ರಶ್ಮಿಕಾ ಮಂದಣ್ಣ ಅವರಿಗೆ ಎಲ್ಲ ಹೀರೋಗಳ ಜೊತೆ ಒಳ್ಳೆಯ ನಂಟು ಬೆಳೆದಿದೆ. ಅದರಲ್ಲೂ ನಾಗಾರ್ಜುನ ಜೊತೆಗೆ ಅವರಿಗೆ ಒಳ್ಳೆಯ ನಂಟಿದೆ. ಈ ಮೊದಲು ‘ದೇವದಾಸ’ ಹೆಸರಿನ ಚಿತ್ರದಲ್ಲಿ ರಶ್ಮಿಕಾ ಹಾಗೂ ನಾಗಾರ್ಜುನ ಒಟ್ಟಿಗೆ ನಟಿಸಿದ್ದರು. ಇದರಿಂದ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಅದು ಈಗಲೂ ಮುಂದುವರಿದಿದೆ. ‘ಕುಬೇರ’ ಸಿನಿಮಾದಲ್ಲಿ ಮತ್ತೆ ಇವರಿಗೆ ತೆರೆ ಹಂಚಿಕೊಳ್ಳುವ ಅವಕಾಶ ದೊರೆತಿದೆ.
ಈಗ ರಶ್ಮಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನಾಗಾರ್ಜುನ ಕಾಲ ಬಳಿ ರಶ್ಮಿಕಾ ಕುಳಿತು ಏನನ್ನೂ ಚರ್ಚೆ ಮಾಡುತ್ತಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಚೆನ್ನೈನಲ್ಲಿ ನಡೆದ ಗ್ರ್ಯಾಂಡ್ ಈವೆಂಟ್ ವೇಳೆ ತೆಗೆದ ಫೋಟೋ ಇದಾಗಿದೆ. ನಾಗಾರ್ಜುನ ಅವರು ರಶ್ಮಿಕಾ ಕೈ ಹಿಡಿದ್ದಾರೆ. ಈ ಫೋಟೋಗೆ ಅವರು ವಿಶೇಷ ಕ್ಯಾಪ್ಶನ್ ನೀಡಿದ್ದಾರೆ.
View this post on Instagram
‘ನಾವು ಕುಬೇರ ಚಿತ್ರದ ಪ್ರಮೋಷನ್ನ ಚೆನ್ನೈನಲ್ಲಿ ಆರಂಭಿಸಿದ್ದೇವೆ. ನನ್ನ ಬಾಲ್ಯ ಇಲ್ಲಿ ಕಳೆದ ಕಾರಣಕ್ಕೆ ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ. ನನಗೆ ಖುಷಿ ಇದೆ. ನಾನು ಅಂದು (ಈವೇಂಟ್ ದಿನ) ಸಾಕಷ್ಟು ನಕ್ಕಿದ್ದೇನೆ’ ಎಂದಿದ್ದಾರೆ. ಚೆನ್ನೈನ ಹೊಗಳಿದ್ದಕ್ಕೆ ಅನೇಕ ಕನ್ನಡಿಗರು ಅವರನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ಸಿಕ್ಕಾಪಟ್ಟೆ ಗ್ಲಾಮರ್ ಪಾತ್ರ ಮಾಡಲು ಒಪ್ಪಿಕೊಂಡ ರಶ್ಮಿಕಾ ಮಂದಣ್ಣ; ಯಾವುದು ಈ ಸಿನಿಮಾ?
ಈ ಮೊದಲು ಅವರು ಚೆನ್ನೈ ಬಗ್ಗೆ ಮಾತನಾಡಿದ್ದರು. ‘ನನ್ನ ಬಾಲ್ಯ ಚೆನ್ನೈನಲ್ಲೇ ಕಳೆದಿದ್ದೇನೆ. ಅಪ್ಪ ಇಲ್ಲಿ ಕೆಲಸ ಮಾಡುತ್ತಿದ್ದರಿಂದ ನಾವು ಚೆನ್ನೈನಲ್ಲಿ ವಾಸಿಸುತ್ತಿದ್ದೆವು. ನಾನು ರಸ್ಕಿನ್ ಎಂಬ ಶಾಲೆಯಲ್ಲಿ ಓದಿದೆ ಮತ್ತು ಆ ಶಾಲೆ ಇನ್ನೂ ಇದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಅದರ ನಂತರ ನಾವು ಕೂರ್ಗ್‌ಗೆ ಸ್ಥಳಾಂತರಗೊಂಡೆವು. ನಾನು ಕಲಿತ ಮೊದಲ ಭಾಷೆ ತಮಿಳು’ ಎಂದು ರಶ್ಮಿಕಾ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.