ಪ್ರೆಗ್ನೆನ್ನಿ ವಿಚಾರ ಸುಳ್ಳು ಎಂದ ಕೆನಿಶಾ ಫ್ರಾನ್ಸಿಸ್
ಜಯಂ ರವಿ ಅವರ ವೈಯಕ್ತಿಕ ಜೀವನ ಇತ್ತೀಚೆಗೆ ಸುದ್ದಿಯಲ್ಲಿದೆ. ಅವರು ಪತ್ನಿ ಆರತಿಯಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಮತ್ತು ದೊಡ್ಡ ಮೊತ್ತದ ಜೀವನಾಂಶಕ್ಕೆ ಆರತಿ ಆಗ್ರಹಿಸಿದ್ದಾರೆ. ಈ ನಡುವೆ, ಜಯಂ ರವಿಯ ಗರ್ಲ್‌ಫ್ರೆಂಡ್ ಎನ್ನಲಾದ ಕೆನಿಶಾ ಫ್ರಾನ್ಸಿಸ್ ಗರ್ಭಿಣಿ ಎಂಬ ವದಂತಿ ಹರಡಿದೆ.

ಕಾಲಿವುಡ್ ಸ್ಟಾರ್ ಹೀರೋ ರವಿ ಮೋಹನ್ (ಜಯಂ ರವಿ) ಅವರು ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅವರು ಪತ್ನಿ ಆರತಿಯಿಂದ ದೂರ ಆಗಿದ್ದು, ವಿಚ್ಛೇದನ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಆರತಿ ಅವರು ದೊಡ್ಡ ಮೊತ್ತದ ಜೀವನಾಂಶ ಕೇಳಿದ್ದಾರೆ. ಇವರ ವಿಚ್ಛೇದನ ಪ್ರಕರಣ ಇನ್ನೂ ಕೋರ್ಟ್ನಲ್ಲಿ ಇದೆ. ಹೀಗಿರುವಾಗಲೇ ಜಯಂ ರವಿ ಅವರ ಗರ್ಲ್‌ಫ್ರೆಂಡ್ ಎನ್ನಲಾದ ಕೆನಿಶಾ ಫ್ರಾನ್ಸಿಸ್ (Kenishaa Francis) ಪ್ರೆಗ್ನೆಂಟ್ ಎನ್ನುವ ಸುದ್ದಿ ಹರಡಿದೆ. ಇದಕ್ಕೆ ಸ್ವತಃ ಕೆನಿಶಾ ಅವರೇ ಪ್ರತಿಕ್ರಿಯಿಸಿದ್ದು, ಅದು ಸುಳ್ಳು ಎಂದಿದ್ದಾರೆ.
ರವಿ ಈಗಾಗಲೇ ಅಧಿಕೃತವಾಗಿ ತಮ್ಮ ಪತ್ನಿ ಆರತಿಯಿಂದ ಬೇರ್ಪಡುತ್ತಿರುವುದಾಗಿ ಘೋಷಿಸಿದ್ದಾರೆ. ಹೀಗಾಗಿ, ರವಿ ಹಾಗೂ ಆರತಿ ಈಗಾಗಲೇ ಬೇರೆಯಾಗಿ ವಾಸಿಸುತ್ತಿದ್ದಾರೆ. ಆರತಿ ತಮ್ಮ ಪತಿಯ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಗಾಯಕಿ ಕೆನಿಶಾ ಕಾರಣಕ್ಕೆ ಪತಿ ನನ್ನಿಂದ ದೂರ ಆಗುತ್ತಿದ್ದಾರೆ ಎಂಬುದು ಆರತಿ ಆರೋಪ. ಈ ಮಧ್ಯೆ ಕೆನಿಶಾ ವಿರುದ್ಧ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ.
ಕೆನೀಶಾ ಪ್ರೆಗ್ನೆಂಟ್ ಎನ್ನುವ ಸುದ್ದಿ ಹೊರ ಬಿದ್ದಿದೆ. ಇದಕ್ಕೆ ಉತ್ತರಿಸಿರುವ ಅವರು, ‘ನೋಡಿ.. ನನಗೆ ಸುಂದರವಾದ ಸಿಕ್ಸ್ ಪ್ಯಾಕ್ ಇದೆ. ನಾನು ಗರ್ಭಿಣಿಯಲ್ಲ. ಯಾರು ಏನೇ ಹೇಳಿದರೂ, ಅವರು ತಮ್ಮ ಕರ್ಮವನ್ನು ಅನುಭವಿಸುತ್ತಾರೆ. ಸತ್ಯ ಮತ್ತು ಸುಳ್ಳುಗಳು ಶೀಘ್ರದಲ್ಲೇ ತಿಳಿಯುತ್ತವೆ. ಅಲ್ಲಿಯವರೆಗೆ, ಎಲ್ಲರೂ ಮನೆಯಲ್ಲಿ ಬಿರಿಯಾನಿ ಮಾಡಿಕೊಂಡು ಅದನ್ನು ಶಾಂತಿಯುತವಾಗಿ ತಿನ್ನಿರಿ. ಮತ್ತು ನಾನು ಸಹ ಶಾಂತಿಯುತವಾಗಿರಲು ಬಿಡಿ,’ ಎಂದು ಕೆನಿಶಾ ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ‘ನನ್ನ ಗಮನಕ್ಕೆ ತರದೇ ವಿಚ್ಛೇದನ ಘೋಷಿಸಿದ್ದಾರೆ’; ಜಯಂ ರವಿ ವಿರುದ್ಧ ಪತ್ನಿಯ ಆರೋಪ
ಇನ್ನು, ಕೆನಿಶಾ ಹಾಗೂ ಜಯಂ ರವಿ ವಿವಾಹ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ರವಿ ಮೋಹನ್ ಮತ್ತು ಕೆನೀಶಾ ಹೂವಿನ ಹಾರಗಳನ್ನು ಧರಿಸಿರುವ ಫೋಟೋಗಳು ವೈರಲ್ ಆಗಿತ್ತು. ಇದರಿಂದಾಗಿ, ಅವರು ಮದುವೆ ಆದರು ಎಂಬ ಸುದ್ದಿ ಹರಡಿತ್ತು. ಆದರೆ, ತಮಿಳುನಾಡಿನ ಕುಂದ್ರಕುಡಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡುವಾಗ ಅರ್ಚಕರೊಂದಿಗೆ ಫೋಟೋ ತೆಗೆದಿರುವುದು ನಂತರ ಬಹಿರಂಗವಾಯಿತು. ಈ ರೀತಿಯ ವದಂತಿಗಳಿಂದ ಕೆನಿಶಾ ಸಾಕಷ್ಟು ಚಿಂತೆಗೆ ಒಳಗಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:59 am, Tue, 10 June 25