‘ನನ್ನ ಗಮನಕ್ಕೆ ತರದೇ ವಿಚ್ಛೇದನ ಘೋಷಿಸಿದ್ದಾರೆ’; ಜಯಂ ರವಿ ವಿರುದ್ಧ ಪತ್ನಿಯ ಆರೋಪ
ಜಯಂ ರವಿ ಅವರು ತಮಿಳಿನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. 2003ರಲ್ಲಿ ಅವರು ‘ಜಯಂ’ ಹೆಸರಿನ ಸಿನಿಮಾ ಮಾಡಿದರು. ಆಗ ರವಿ ಆಗಿದ್ದ ಅವರು ಈ ಚಿತ್ರದ ಮೂಲಕ ಜಯಂ ರವಿ ಆದರು. ಅವರು ‘ಪೊನ್ನಿಯಿನ್ ಸೆಲ್ವನ್’ ರೀತಿಯ ಚಿತ್ರಗಳಲ್ಲಿ ನಟಿಸಿದ್ದಾರೆ.
ಜಯಂ ರವಿ ಅವರು ದಕ್ಷಿಣ ಭಾರತದಲ್ಲಿ ಖ್ಯಾತಿ ಗಳಿಸಿದ್ದಾರೆ. ಇತ್ತೀಚೆಗೆ ಅವರು ಶಾಕಿಂಗ್ ಸ್ಟೇಟ್ಮೆಂಟ್ ಒಂದನ್ನು ನೀಡಿದ್ದರು. ತಾವು ಪತ್ನಿ ಆರತಿ ಜೊತೆ ವಿಚ್ಛೇದನ ಪಡೆಯೋದಾಗಿ ಘೋಷಿಸಿದ್ದರು. ಈಗ ಅವರ ಪತ್ನಿ ಈ ವಿಚಾರದಲ್ಲಿ ಹೇಳಿಕೆ ನೀಡಿದ್ದಾರೆ. ನನ್ನ ಗಮನಕ್ಕೆ ತರದೆ ಪತಿ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಿಗೆ ಕುಳಿತು ಮಾತನಾಡಲು ಪತಿಯಿಂದ ಅವರು ಸಮಯ ಬೇಡುತ್ತಿದ್ದಾರೆ.
ಜಯಂ ರವಿ ಅವರು ತಮಿಳಿನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. 2003ರಲ್ಲಿ ಅವರು ‘ಜಯಂ’ ಹೆಸರಿನ ಸಿನಿಮಾ ಮಾಡಿದರು. ಆಗ ರವಿ ಆಗಿದ್ದ ಅವರು ಈ ಚಿತ್ರದ ಮೂಲಕ ಜಯಂ ರವಿ ಆದರು. ಅವರು ‘ಪೊನ್ನಿಯಿನ್ ಸೆಲ್ವನ್’ ರೀತಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಇತ್ತೀಚೆಗೆ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿದ್ದರು. ಈ ಬಗ್ಗೆ ಆರತಿ ಬೇಸರ ಹೊರಹಾಕಿದ್ದಾರೆ.
‘ಕಳೆದ ಕೆಲವು ದಿನಗಳಿಂದ ನನ್ನ ಪತಿ ಜೊತೆ ಮಾತನಾಡಲು ಅವಕಾಶ ಕೇಳಿದೆ. ಇಬ್ಬರ ಮಧ್ಯೆ ಮಾತುಕತೆ ಆಗಬಹುದು ಎಂದು ಭಾವಿಸಿದ್ದೇನೆ. ಇದರಿಂದ ನಮ್ಮಿಬ್ಬರ ಮಧ್ಯೆ ಹಾಗೂ ನಮ್ಮ ಕುಟುಂಬದ ಮಧ್ಯೆ ಬೆಳೆದ ಸಂಬಂಧಕ್ಕೆ ಇದು ಗೌರವ ನೀಡುತ್ತದೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ ಅವರು.
‘ನಾನು ಸಮಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ನಮ್ಮ ಪರಿಸ್ಥಿತಿ ಅರ್ಥವಾಗುತ್ತದೆ’ ಎಂದು ಅವರು ಬರೆದಿದ್ದಾರೆ. ಮಕ್ಕಳು ಮೊದಲ ಆದ್ಯತೆ ಎಂದು ಅವರು ಹೇಳಿಕೊಂಡಿದ್ದಾರೆ. ವಿಚ್ಛೇದನದಿಂದ ದೂರ ಹೋಗುವ ನಿರ್ಧಾರ ಜಯಂ ರವಿ ಹೇಳಿದ್ದಾರೆ.
ಇದನ್ನೂ ಓದಿ: ಜಯಂ ರವಿ ವಿಚ್ಛೇದನ: 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ನಟ
ಜಯಂ ರವಿ ಹಾಗೂ ಆರತಿ ಮದುವೆ ಆಗಿ 15 ವರ್ಷಗಳು ಕಳೆದಿವೆ. ಈ ಜೋಡಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಇಷ್ಟು ವರ್ಷಗಳ ಬಳಿಕ ರವಿ ಮತ್ತು ಆರತಿ ಅವರು ಡಿವೋರ್ಸ್ ಪಡೆದಿದ್ದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.