AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಿಕಾ ಮಗಳನ್ನು ನೋಡಲು ಬಂದ ದೇಶದ ಶ್ರೀಮಂತ ವ್ಯಕ್ತಿ

Deepika-Ranveer: ದೀಪಿಕಾ ಪಡುಕೋಣೆ ಮತ್ತು ರಣ್ವೀರ್​ ಸಿಂಗ್​ಗೆ ಇತ್ತೀಚೆಗಷ್ಟೆ ಮುದ್ದಾದ ಹೆಣ್ಣು ಮಗು ಜನಿಸಿದೆ. ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಈ ಜೋಡಿಗೆ ಮಗು ಜನಿಸಿದ್ದು, ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿ ಮಗುವನ್ನು ಕಾಣಲು ಆಸ್ಪತ್ರೆಗೆ ಬಂದಿದ್ದಾರೆ.

ದೀಪಿಕಾ ಮಗಳನ್ನು ನೋಡಲು ಬಂದ ದೇಶದ ಶ್ರೀಮಂತ ವ್ಯಕ್ತಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 11, 2024 | 3:07 PM

Share

ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮದುವೆಯಾದ ಆರು ವರ್ಷಗಳ ನಂತರ ದೀಪಿಕಾ ಮತ್ತು ರಣವೀರ್ ಸಿಂಗ್ ಪೋಷಕರಾಗಿದ್ದಾರೆ. ಹೆರಿಗೆಗೆ ಎರಡು ದಿನಗಳ ಮೊದಲು ದೀಪಿಕಾ-ರಣ್‌ವೀರ್ ಗಣಪತಿ ದೇವರ ದರ್ಶನಕ್ಕಾಗಿ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋಗಿದ್ದರು. ನಂತರ ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆಪ್ಟೆಂಬರ್ 9 ಭಾನುವಾರದಂದು ದೀಪಿಕಾ ತಮ್ಮ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿ ಹಂಚಿಕೊಂಡಿದ್ದರು. ಸೋಮವಾರ ರಣವೀರ್ ಸಹೋದರಿ ರಿತಿಕಾ ಭವ್ನಾನಿ ತಮ್ಮ ಸೊಸೆಯನ್ನು ಆಸ್ಪತ್ರೆಗೆ ಬಂದು ಭೇಟಿ ಮಾಡುತ್ತಿರುವುದು ಕಂಡುಬಂದಿದೆ. ಇದಾದ ನಂತರ ರಣವೀರ್-ದೀಪಿಕಾ ಮಗಳನ್ನು ಭೇಟಿಯಾಗಲು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಮಿಸಿದ್ದಾರೆ.

ರಣವೀರ್-ದೀಪಿಕಾ ಅವರ ಮಗಳನ್ನು ಕಾಣಲು ಮುಖೇಶ್ ಅಂಬಾನಿ ಆಸ್ಪತ್ರೆಗೆ ಬಂದಿದ್ದಾರೆ. ಕಟ್ಟುನಿಟ್ಟಿನ ಭದ್ರತೆಯಲ್ಲಿ ಅವರ ಕಾರು ಆಸ್ಪತ್ರೆ ತಲುಪುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಣವೀರ್ ಮತ್ತು ದೀಪಿಕಾ, ಅಂಬಾನಿ ಕುಟುಂಬದೊಂದಿಗೆ ಬಹಳ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ರಣವೀರ್ ಮತ್ತು ದೀಪಿಕಾ ಭಾಗವಹಿಸಿದ್ದರು. ಇವರಿಬ್ಬರೂ ವಿವಾಹ ಪೂರ್ವದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ದೀಪಿಕಾ ಮಗಳಿಗೆ ಜನ್ಮ ನೀಡಿದ ಆಸ್ಪತ್ರೆ ಕೂಡ ಮುಖೇಶ್ ಮತ್ತು ನೀತಾ ಅಂಬಾನಿ ಅವರ ಒಡೆತನದಲ್ಲಿದೆ.

ದೀಪಿಕಾಗೆ ಮಗಳು ಹುಟ್ಟಿದ ಕೂಡಲೇ ರಣವೀರ್ ಅವರ ದೊಡ್ಡ ಆಸೆ ಈಡೇರಿದೆ. ರಣವೀರ್ ತಮ್ಮ ಹಳೆಯ ಸಂದರ್ಶನವೊಂದರಲ್ಲಿ ಈ ವಿಶೇಷ ಆಸೆಯನ್ನು ವ್ಯಕ್ತಪಡಿಸಿದ್ದರು. ರಣವೀರ್‌ಗೆ ಮಗಳು ಬೇಕು ಎಂದು ಆಸೆಪಟ್ಟು ಕೊನೆಗೂ ದೇವರು ಅವರ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.

ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ

ತಮ್ಮ ಮಗಳು ಹುಟ್ಟಿದ ನಂತರ, ರಣವೀರ್ ಮತ್ತು ದೀಪಿಕಾ Instagram ಅಲ್ಲಿ ಪೋಸ್ಟ್ ಅನ್ನು ಬರೆದಿದ್ದಾರೆ. ‘ವೆಲ್ ಕಮ್ ಬೇಬಿ ಗರ್ಲ್’ ಎಂದು ಬರೆದು ಅದರ ಅಡಿಯಲ್ಲಿ ಹುಟ್ಟಿದ ದಿನಾಂಕವನ್ನು ನಮೂದಿಸಿದ್ದಾರೆ. ಈ ಪೋಸ್ಟ್‌ಗೆ ಬಾಲಿವುಡ್ ಇಂಡಸ್ಟ್ರಿಯ ಅನೇಕ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಅಭಿಮಾನಿಗಳು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ದೀಪಿಕಾ ತನ್ನ ಮಗುವಿನ ಜನನದ ನಂತರ ಮಾರ್ಚ್ 2025ರವರೆಗೆ ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಅದರ ನಂತರ ಅವರು ‘ಕಲ್ಕಿ 2898 ಎಡಿ’ ಚಿತ್ರದ ಮುಂದುವರಿದ ಭಾಗದ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರಂತೆ.

ಮಗುವಿನ ಜನನದ ನಂತರ ದೀಪಿಕಾ ಮತ್ತು ರಣವೀರ್ ಹೊಸ ಮನೆಗೆ ಹೋಗಲಿದ್ದಾರೆ ಎಂದು ತಿಳಿದಿದೆ. ದೀಪಿಕಾ-ರಣವೀರ್ ತಮ್ಮ ಹೊಸ ಐಷಾರಾಮಿ ಮನೆಗೆ ಶಿಫ್ಟ್ ಆಗಲಿದ್ದಾರೆ. ಈ ಮನೆ ನಟ ಶಾರುಖ್ ಖಾನ್ ಅವರ ಬಂಗಲೆ ಮನ್ನತ್ ಪಕ್ಕದಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ