AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ವರ್ಷಗಳ ಈ ಹಳೇ ಫೋಟೋದಲ್ಲಿ ನೋರಾ ಫತೇಹಿ ಯಾರು ಅಂತ ಗುರುತಿಸುತ್ತೀರಾ?

ನೋರಾ ಫತೇಹಿ ಅವರು ಶಾಲೆಯಲ್ಲಿ ಓದುತ್ತಿದ್ದಾಗ ತೆಗೆದ ಫೋಟೋ ಇದು. ಆಗ ಅವರಿಗೆ 17ರ ಪ್ರಾಯ. ಈ ಫೋಟೋದಲ್ಲಿ ಅವರ ಲುಕ್​ ಸಂಪೂರ್ಣ ಬೇರೆ ರೀತಿ ಇದೆ. ಈಗ ನಾವು ಸಿನಿಮಾದಲ್ಲಿ ನೋರಾ ಫತೇಹಿ ಅವರನ್ನು ನೋಡುತ್ತಿರುವುದಕ್ಕೂ ಈ ಫೋಟೋದಲ್ಲಿ ಇರುವುದಕ್ಕೂ ಸಖತ್​ ವ್ಯತ್ಯಾಸ ಇದೆ. ಈ ಫೋಟೋದ ಹಿಂದಿನ ಕಹಾನಿಯನ್ನು ಕೂಡ ನೋರಾ ಫತೇಹಿ ವಿವರಿಸಿದ್ದಾರೆ.

15 ವರ್ಷಗಳ ಈ ಹಳೇ ಫೋಟೋದಲ್ಲಿ ನೋರಾ ಫತೇಹಿ ಯಾರು ಅಂತ ಗುರುತಿಸುತ್ತೀರಾ?
ನೋರಾ ಫತೇಹಿ ವೈರಲ್​ ಫೋಟೋ
ಮದನ್​ ಕುಮಾರ್​
|

Updated on: Sep 11, 2024 | 8:55 PM

Share

ಬಾಲಿವುಡ್​ನ ಖ್ಯಾತ ನಟಿ, ಡ್ಯಾನ್ಸರ್​ ನೋರಾ ಫತೇಹಿ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ವಿದೇಶದಲ್ಲೂ ಅವರ ಫ್ಯಾನ್ಸ್​ ಇದ್ದಾರೆ. ಎಲ್ಲಿಯೇ ಇದ್ದರೂ ನೋರಾ ಫತೇಹಿ ಅವರನ್ನು ಜನರು ಗುರುತಿಸುತ್ತಾರೆ. ಆದರೆ ಈ ಹಳೇ ಫೋಟೋದಲ್ಲಿ ಅವರು ಗುರುತಿಸುವುದು ಸ್ವಲ್ಪ ಕಷ್ಟ. ಯಾಕೆಂದರೆ, ಈ ಫೋಟೋದಲ್ಲಿ ಅವರ ಲುಕ್​ ಸಂಪೂರ್ಣ ಬೇರೆಯಾಗಿದೆ. ನೋರಾ ಫತೇಹಿ ಅವರು ಶಾಲೆಯಲ್ಲಿ ಓದುತ್ತಿದ್ದಾಗ ತೆಗೆದ ಫೋಟೋ ಇದು! ಅದನ್ನು ಅವರೀಗ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಖಾತೆಗಳಲ್ಲಿ ಈ ಫೋಟೋ ವೈರಲ್​ ಆಗಿದೆ.

ಈ ಫೋಟೋ ಕ್ಲಿಕ್ಕಿಸಿದಾಗ ನೋರಾ ಫತೇಹಿ ಅವರಿಗೆ ಕೇವಲ 17 ವರ್ಷ. ಆದರೆ ಈಗ ಅವರಿಗೆ 32 ವರ್ಷ ವಯಸ್ಸು. ಅಂದರೆ, ಬರೋಬ್ಬರಿ 15 ವರ್ಷಗಳಷ್ಟು ಹಳೆಯ ಫೋಟೋ ಇದು. ಇದನ್ನು ಈಗ ಹಂಚಿಕೊಂಡು ಆ ದಿನಗಳನ್ನು ನೋರಾ ಫತೇಹಿ ಅವರು ನೆನಪಿಸಿಕೊಂಡಿದ್ದಾರೆ. ಇದರಲ್ಲಿ ಎಡಗಡೆಯಿಂದ ಮೊದಲನೇ ಹುಡುಗಿಯೇ ನೋರಾ ಫತೇಹಿ. ಪಕ್ಕದಲ್ಲಿ ಇರುವುದು ಅವರ ಸಹಪಾಠಿಗಳು.

ಇದನ್ನೂ ಓದಿ: ಸೆಲೆಬ್ರಿಟಿಗಳ ಲವ್​, ಮದುವೆ ಹಿಂದಿನ ಕರಾಳ ಸತ್ಯ ತೆರೆದಿಟ್ಟ ನೋರಾ ಫತೇಹಿ

‘17ನೇ ವಯಸ್ಸಿನ ನಾನು ನನ್ನ ಕ್ಲಾಸ್​ಮೇಟ್ಸ್​ ಜೊತೆ ವೇದಿಕೆಯಲ್ಲಿ ಡ್ಯಾನ್ಸ್​ ಮಾಡಲು ಸಿದ್ಧವಾದ ಕ್ಷಣ ಅದು. ಹಲವು ವಾರಗಳ ಕಾಲ ನಾವು ತಾಲೀಮು ಮಾಡಿದ್ದೆವು. ನನಗೆ ಗೊತ್ತಿರುವ ಎಲ್ಲವನ್ನೂ ನಾನು ಅವರಿಗೆ ಕಲಿಸಿದ್ದೆ. ಹಲವು ಹಾಡುಗಳಿಗೆ ನಾವು ಬೆಲ್ಲಿ ಡ್ಯಾನ್ಸ್​ ಫ್ಯೂಷನ್​ ಮಾಡಿದ್ದೆವು’ ಎಂದು ನೋರಾ ಫತೇಹಿ ಅವರು ನೆನಪಿನ ಪುಟ ತೆಗೆದಿದ್ದಾರೆ. ಅಭಿಮಾನಿಗಳು ಈ ವೈರಲ್​ ಫೋಟೋಗೆ ಕಮೆಂಟ್​ ಮಾಡಿದ್ದಾರೆ.

View this post on Instagram

A post shared by Nora Fatehi (@norafatehi)

ನೋರಾ ಫತೇಹಿ ಹಂಚಿಕೊಂಡ ಈ ಫೋಟೋ ನೋಡಿದ ಬಳಿಕ ಅನೇಕರಿಗೆ ಒಂದು ಅನುಮಾನ ಕಾಡಿದೆ. ಕೆಲವೇ ವರ್ಷಗಳಲ್ಲಿ ನೋರಾ ಫತೇಹಿ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅದಕ್ಕೆ ಪ್ಲಾಸ್ಟಿಕ್​ ಸರ್ಜರಿ ಕಾರಣ ಎಂಬುದು ಕೆಲವರ ಅನಿಸಿಕೆ. ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಲು ನೋರಾ ಫತೇಹಿ ಅವರು ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಿದ್ದಾರೆ ಎಂಬುದಕ್ಕೆ ಈ ಫೋಟೋ ಸಾಕ್ಷಿ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು