ಅಂಬಾನಿ ಮಗನ ಮದುವೆಯಲ್ಲೂ ಸುಧಾ ಮೂರ್ತಿ ಸಿಂಪಲ್; ಬರೀ ಮಂಗಳಸೂತ್ರದಲ್ಲಿ ಇನ್ಫೋಸಿಸ್ ಒಡತಿ
ಮುಖೇಶ್ ಅಂಬಾನಿಯವರ ಮಗನ ಮದುವೆ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅವರು ಭಾಗಿಯಾಗಿದ್ದು,ಚಿನ್ನ, ವಜ್ರ, ಮುತ್ತಿನಿಂದ ವಿನ್ಯಾಸಗೊಳಿಸಿದ ಆಭರಣಗಳಲ್ಲಿ ಮಿಂಚಿದ್ದ ಸೆಲೆಬ್ರೆಟಿಗಳ ಮಧ್ಯೆ ಸುಧಾಮೂರ್ತಿ ಅವರು ಕೊರಳಲ್ಲಿ ಬರೀ ಮಂಗಳಸೂತ್ರ ಮಾತ್ರ ತೊಟ್ಟು ಬಂದಿದ್ದಾರೆ. ಈ ಮೂಲಕ ಮತ್ತೊಮ್ಮೆ ತನ್ನ ಸರಳತೆಯಿಂದಲೇ ಜನರ ಮನಸ್ಸು ಗೆದ್ದಿದ್ದಾರೆ.
ಸುಧಾ ಮೂರ್ತಿ ಅವರು ತಮ್ಮ ಸರಳತೆ ಮತ್ತು ಸಮಾಜ ಸೇವೆಯಿಂದಲೇ ಹೆಸರುಗಳಿಸಿದವರು. ಇತ್ತೀಚೆಗೆ ನಡೆದ ಮುಖೇಶ್ ಅಂಬಾನಿಯವರ ಮಗನ ಮದುವೆ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅವರು ಭಾಗಿಯಾಗಿದ್ದು, ಮತ್ತೊಮ್ಮೆ ತನ್ನ ಸರಳತೆಯಿಂದಲೇ ಜನರ ಮನಸ್ಸು ಗೆದ್ದಿದ್ದಾರೆ. ಚಿನ್ನ, ವಜ್ರ, ಮುತ್ತಿನಿಂದ ವಿನ್ಯಾಸಗೊಳಿಸಿದ ಆಭರಣಗಳಲ್ಲಿ ಮಿಂಚಿದ್ದ ಸೆಲೆಬ್ರೆಟಿಗಳ ಮಧ್ಯೆ ಸುಧಾಮೂರ್ತಿ ಅವರು ಕೊರಳಲ್ಲಿ ಮಂಗಳಸೂತ್ರ ಮಾತ್ರ ತೊಟ್ಟು ಬಂದಿದ್ದಾರೆ.
37 ಸಾವಿರ ಕೋಟಿ ರೂ.ಗಳ ಒಡತಿಯಾದರೂ ಸಿಂಪಲ್ ಆಗಿ ಅಂಬಾನಿ ಮನೆಯ ಮದುವೆಯಲ್ಲಿ ಭಾಗಿಯಾಗಿರುವುದು ಆಕರ್ಷಣೆಗೆ ಕಾರಣವಾಗಿದೆ. ನಟ ಮಹೇಶ್ ಬಾಬು ಅವರ ಪತ್ನಿ, ನಮ್ರತಾ ಶಿರೋಡ್ಕರ್ ಸುಧಾಮೂರ್ತಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ನಟ ಮಹೇಶ್ ಬಾಬು ಅವರ ಪತ್ನಿ ಹಂಚಿಕೊಂಡಿರುವ ಫೋಟೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಕೆಂಪು ಬದಲು, ಮರೂನ್ ಬಣ್ಣದ ಲಿಪ್‌ಸ್ಟಿಕ್ ತಂದ ಪತಿ; ಡಿವೋರ್ಸ್ಗಾಗಿ ಕೋರ್ಟ್ ಮೆಟ್ಟಿಲೇರಿದ ಪತ್ನಿ
ಶ್ರೀಮಂತಿಕೆ, ಆಡಂಬರ, ಅದ್ಧೂರಿ ನಡುವೆ ಸುಧಾ ಮೂರ್ತಿ ಸರಳತೆಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಬಿಲೇನಿಯರ್ ಆಗಿದ್ದರೂ ಸಹ ಮಂಗಳ ಸೂತ್ರದ ಜೊತೆಗೆ ಯಾವುದೇ ಬೆಲೆ ಬಾಳುವ ಒಡೆವೆಗಳನ್ನು ಧರಿಸಿಲ್ಲ ಎಂಬುದೇ ವಿಶೇಷ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ