ಕೆಂಪು ಬದಲು, ಮರೂನ್​​ ಬಣ್ಣದ ಲಿಪ್‌ಸ್ಟಿಕ್ ತಂದ ಪತಿ; ಡಿವೋರ್ಸ್​​​ಗಾಗಿ ಕೋರ್ಟ್​​​ ಮೆಟ್ಟಿಲೇರಿದ ಪತ್ನಿ

ಸಾಮಾನ್ಯವಾಗಿ ಲಿಪ್ಸ್ಟಿಕ್ ಇಷ್ಟಪಡದೇ ಇರುವ ಮಹಿಳೆಯರು ಬಹಳ ಕಡಿಮೆ. ಆದರೆ ಇಲ್ಲೊಬ್ಬಳು ಯುವತಿ ಪತಿ ತಾನು ಹೇಳಿದ ಲಿಪ್‌ಸ್ಟಿಕ್ ಬದಲಿಗೆ ಬೇರೆ ಬಣ್ಣದ ಲಿಪ್‌ಸ್ಟಿಕ್ ತಂದ ಎಂಬ ಕಾರಣಕ್ಕೆ ಕೋಪಗೊಂಡು ಡಿವೋರ್ಸ್​​​ಗಾಗಿ ಕೋರ್ಟ್​​​ ಮೆಟ್ಟಿಲೇರಿದ್ದಾಳೆ. ಸದ್ಯ ಈ ಘಟನೆ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕೆಂಪು ಬದಲು, ಮರೂನ್​​ ಬಣ್ಣದ ಲಿಪ್‌ಸ್ಟಿಕ್ ತಂದ ಪತಿ; ಡಿವೋರ್ಸ್​​​ಗಾಗಿ ಕೋರ್ಟ್​​​ ಮೆಟ್ಟಿಲೇರಿದ ಪತ್ನಿ
ಬೇರೆ ಬಣ್ಣದ ಲಿಪ್‌ಸ್ಟಿಕ್ ತಂದ ಪತಿ; ಡಿವೋರ್ಸ್​​​ಗಾಗಿ ಕೋರ್ಟ್​​​ ಮೆಟ್ಟಿಲೇರಿದ ಪತ್ನಿ
Follow us
ಅಕ್ಷತಾ ವರ್ಕಾಡಿ
|

Updated on: Jul 17, 2024 | 11:39 AM

ಉತ್ತರ ಪ್ರದೇಶ: ಕೆಂಪು ಬದಲು, ಪತಿ ಮರೂನ್​​ ಬಣ್ಣದ ಲಿಪ್‌ಸ್ಟಿಕ್ ತಂದ ಎಂಬ ಕಾರಣಕ್ಕೆ ಕೋಪಗೊಂಡ ಪತ್ನಿ ಕೋರ್ಟ್​​​​ ಮೆಟ್ಟಿಲೇರಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಮದುವೆಯಾದ ಕೇವಲ 6 ತಿಂಗಳಿಗೆ ಪತಿಯಿಂದ ವಿಚ್ಛೇದನಕ್ಕಾಗಿ ಪತಿ ನಿರ್ಧಾರಕ್ಕೆ ಬಂದಿದ್ದಾಳೆ. ವಿಚ್ಛೇದನಕ್ಕೆ ಕಾರಣವೆನೆಂದು ವಕೀಲರು ಕೇಳಿದಾಗ ಮಹಿಳೆ ಲಿಪ್​​​ಸ್ಟಿಕ್​​ನಿಂದಾದ ಜಗಳವನ್ನು ವಿವರಿಸಿದ್ದಾಳೆ. ಈಕೆಯ ಜಗಳದ ವಿಷಯ ಕೇಳಿ ಕುಟುಂಬ ಸಲಹಾ ಕೇಂದ್ರದ ಸಿಬ್ಬಂದಿ ಶಾಕ್ ಆಗಿದ್ದಾರೆ.

ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರ ಡಾ.ಸತೀಶ್ ಖಿರ್ವಾರ್ ಹೇಳುವಂತೆ “ಆಗ್ರಾದ ಯುವತಿಯೊಬ್ಬಳು 6 ತಿಂಗಳ ಹಿಂದೆ ಮಥುರಾದ ಯುವಕನೊಂದಿಗೆ ವಿವಾಹವಾಗಿದ್ದಾಳೆ. ಗಂಡ ದಿನಗೂಲಿ ಕೆಲಸಗಾರ. 20 ದಿನಗಳ ಹಿಂದೆ ಯುವತಿ ಗಂಡನಲ್ಲಿ ಕೆಂಪು ಬಣ್ಣದ ಲಿಪ್ಸ್ಟಿಕ್ ತರಲು ಹೇಳಿದ್ದಾನೆ. ಆದರೆ ಆತ ತಿಳಿಯದೇ ಮರೂನ್​​ ಬಣ್ಣದ ಲಿಪ್ಸ್ಟಿಕ್ ತಂದಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ತಂದಿರೋ ಲಿಪ್‌ಸ್ಟಿಕ್ ಬದಲಾಯಿಸಿಕೊಂಡು ಬರುವಂತೆ ಹೇಳಿದ್ದಾಳೆ. ಆದ್ರೆ ಗಂಡ, ಬಣ್ಣದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲ. ಅದನ್ನೇ ಬಳಸುವಂತೆ ಹೇಳಿದ್ದಕ್ಕೆ ಕೋಪಗೊಂಡ ಪತ್ನಿ ಡಿವೋರ್ಸ್​​​ ನೀಡಲು ಮುಂದಾಗಿದ್ದಾಳೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟಾಯ್ಲೆಟ್‌ಗೆ ಬಳಸುವ ಹವಾಯಿ ಚಪ್ಪಲಿಯ ಬೆಲೆ ಬರೋಬ್ಬರಿ 1 ಲಕ್ಷ ರೂ, ಎಲ್ಲಿ ಗೊತ್ತಾ?

ದಂಪತಿಯನ್ನು ಕೂರಿಸಿ ಕೌನ್ಸೆಲಿಂಗ್ ಮಾಡಿದ್ದು, ಕುಟುಂಬ ಸಲಹಾ ಕೇಂದ್ರದ ಸಿಬ್ಬಂದಿ ಇಬ್ಬರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಇಬ್ಬರೂ ಜೊತೆಯಾಗಿ ಹೋಗಿದ್ದಾರೆ ಎಂದು ಡಾ. ಖಿರ್ವಾರ್ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್