AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕಾಲುವೆಗೆ ಬಿದ್ದ ಯುವಕನ ಪ್ರಾಣ ರಕ್ಷಿಸಿದ ನೌಕಾಪಡೆಯ ನಿವೃತ್ತ ಅಧಿಕಾರಿ

ಸೈನಿಕರು ಗಡಿಯಲ್ಲಿ ನಿಂತು ದೇಶ ರಕ್ಷಣೆ ಮಾಡುವುದರ ಜೊತೆಗೆ ತಮ್ಮ ಮಾನವೀಯ ಕಾರ್ಯಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ನೌಕಾಪಡೆಯ ನಿವೃತ್ತ ಅಧಿಕಾರಿ ತಮ್ಮ ಜೀವವನ್ನೂ ಲೆಕ್ಕಿಸದೆ ಕಾಲುವೆಗೆ ಬಿದ್ದ ಯುವಕನ ಪ್ರಾಣವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ನಮ್ಮ ದೇಶದ ಸೈನಿಕರೇ ರಿಯಲ್‌ ಲೈಫ್‌ ಹೀರೋಗಳು ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡುತ್ತಿದ್ದಾರೆ.

Video: ಕಾಲುವೆಗೆ ಬಿದ್ದ ಯುವಕನ ಪ್ರಾಣ ರಕ್ಷಿಸಿದ ನೌಕಾಪಡೆಯ ನಿವೃತ್ತ ಅಧಿಕಾರಿ
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 17, 2024 | 2:18 PM

ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಯೋದರು. ಎಂತಹ ಕಠಿಣ ಸಂದರ್ಭದಲ್ಲೂ ಇವರು ತಾಯಿ ಭಾರತಿಯ ಸೇವೆಗೆ ಸಿದ್ಧರಿರುತ್ತಾರೆ. ಭಾರತೀಯ ಸಶಸ್ತ್ರ ಪಡೆ ಶತ್ರುಗಳ ವಿರುದ್ಧ ಕೆಚ್ಚದೆಯಿಂದ ಅಡೆತಡೆಗಳಿಗೆ ಜಗ್ಗದೆ ಯಾವ ರೀತಿ ಹೋರಾಡುತ್ತದೆಯೋ ಅದೇ ರೀತಿ ನಮ್ಮ ದೇಶದ ಜನರು ಸಂಕಷ್ಟಕ್ಕೆ ಒಳಗಾದಾಗ ಅವರ ಹೃದಯ ಮಿಡಯುತ್ತದೆ. ಸೈನಿಕರ ಇಂತಹ ಮಾನವೀಯ ಕಾರ್ಯಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬರೂ ಕೂಡಾ ಮಾನವೀಯತೆಯನ್ನು ಮೆರೆದಿದ್ದು, ತನ್ನ ಪ್ರಾಣವನ್ನೂ ಲೆಕ್ಕಿಸದೆ ತುಂಬಿ ಹರಿಯುತ್ತಿದ್ದ ಕಾಲುವೆಗೆ ಹಾರಿ ಯುವಕನೊಬ್ಬನ ಪ್ರಾಣ ರಕ್ಷಣೆ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಭಾರತೀಯ ನೌಕಾಪಡೆಯ ಮಾರ್ಕೋಸ್‌ ಘಟಕದ ನಿವೃತ್ತ ಪೆಟಿ ಆಫೀಸರ್‌ ಡಿ.ಎಸ್.‌ ನೇಗಿ ಅವರು ಯುವಕನೊಬ್ಬ ಕಾಲುವೆಗೆ ಬಿದ್ದು ಮುಳುಗುತ್ತಿರುವುದನ್ನು ಕಂಡು, ತನ್ನ ಪ್ರಾಣವನ್ನೂ ಲೆಕ್ಕಿಸದೆ ತಕ್ಷಣ ನೀರಿಗೆ ಧುಮುಕಿ ಅಮೂಲ್ಯ ಜೀವವನ್ನು ರಕ್ಷಣೆ ಮಾಡಿದ್ದಾರೆ.

ವೈರಲ್​​ ವಿಡಿಯೋ:

ಈ ಕುರಿತ ಪೋಸ್ಟ್‌ ಒಂದನ್ನು ಭಾರತೀಯ ನೌಕಾಪಡೆಯ ಅಧಿಕಾರಿ ಮನನ್‌ ಭಟ್‌ (mananbhattnavy) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ನೇಗಿಯವರ ಈ ನಿಸ್ವಾರ್ಥ ಕಾರ್ಯವು ಅಗತ್ಯವಿರುವ ಜನರಿಗೆ ಸಹಾಯಸ್ತವನ್ನು ನೀಡಲು ನಮಗೆಲ್ಲರಿಗೂ ಸ್ಫೂರ್ತಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಮಗನ ಪ್ರಾಣವನ್ನು ರಕ್ಷಿಸಿದ್ದಕ್ಕಾಗಿ ಕಾಲುವೆಯಲ್ಲಿ ಬಿದ್ದ ಯುವಕನ ತಂದೆ ನೇಗಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಿರುವ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮಳೆಯನ್ನೂ ಲೆಕ್ಕಿಸದೇ, ವಿದ್ಯುತ್‌ ಸಂಪರ್ಕ ಸರಿಪಡಿಸಿದ ಲೈನ್‌ಮ್ಯಾನ್‌ಗಳ ಕೆಲಸ ನಿಜಕ್ಕೂ ಶ್ಲಾಘನೀಯ

ಜುಲೈ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸೈನಿಕರು ಸೇವೆಗೆ ಯಾವಾಗಲೂ ಸಿದ್ಧರಿರುತ್ತಾರೆ. ನೇಗಿಯವರ ಈ ಮಾನವೀಯ ಕಾರ್ಯಕ್ಕೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼದೇಶದ ಸೈನಿಕರೇ ನಿಜವಾದ ಹೀರೋಗಳು. ಅಮೂಲ್ಯ ಜೀವ ಉಳಿಸಿದ ಯೋಧನಿಗೆ ಹ್ಯಾಟ್ಸ್‌ ಆಫ್‌ʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ