AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ಪದವಿಯೂ ಇಲ್ಲ, ಮನೆಯಲ್ಲೇ ದಿನಕ್ಕೆ 6 ಗಂಟೆ ಕೆಲಸ ಮಾಡಿ, ವರ್ಷಕ್ಕೆ 50 ಲಕ್ಷ ಗಳಿಸುವ ಮಹಿಳೆ

ಉದ್ಯೋಗ ಮಾಡಲು ಶಿಕ್ಷಣ ಅಗತ್ಯ ಹೆಚ್ಚಿದೆ, ಆದರೆ ಯಾವ ಪದವಿ ಇಲ್ಲದಿದ್ದರೂ ಕೆಲಸ ಮಾಡುವವರು ಅನೇಕರಿದ್ದಾರೆ. ಆದರೆ ಈ ಮಹಿಳೆ ಮನೆಯಲ್ಲೇ ದಿನದ 6 ಗಂಟೆ ಕೆಲಸ ಮಾಡಿ ವರ್ಷಕ್ಕೆ 50 ಲಕ್ಷ ರೂ. ದುಡಿಯುತ್ತಾರೆ.

ಯಾವ ಪದವಿಯೂ ಇಲ್ಲ, ಮನೆಯಲ್ಲೇ ದಿನಕ್ಕೆ 6 ಗಂಟೆ ಕೆಲಸ ಮಾಡಿ, ವರ್ಷಕ್ಕೆ 50 ಲಕ್ಷ ಗಳಿಸುವ ಮಹಿಳೆ
ರೋಮಾ
ನಯನಾ ರಾಜೀವ್
|

Updated on: Jul 17, 2024 | 3:10 PM

Share

ಪ್ರತಿಯೊಬ್ಬರೂ ಹೆಚ್ಚು ತಲೆನೋವಿಲ್ಲದ ಯಾವುದಾದರೂ ಕೆಲಸ ಹುಡುಕಿಕೊಳ್ಳಬೇಕು ಎಂದೇ ಆಲೋಚಿಸುತ್ತಿರುತ್ತಾರೆ. ಎಲ್ಲರೂ ಡಿಗ್ರಿ ಮಾಡಲು ಸಾಧ್ಯವಿಲ್ಲ, ಎಲ್ಲರೂ ಇಂಜಿನಿಯರ್, ವೈದ್ಯರಾಗಲು ಸಾಧ್ಯವಿಲ್ಲ. ಹಾಗಾದರೆ ಏನು ಮಾಡಬೇಕು ಎಂದು ಆಲೋಚಿಸುವವರಿಗೆ ಈ ಮಹಿಳೆ ಮಾದರಿ.

ಮದುವೆ, ಮಕ್ಕಳಾಗುವವರೆಗೆ ಹೇಗೋ ಮಹಿಳೆಯರು ಕೆಲಸ ಮಾಡುತ್ತಾರೆ, ಬಳಿಕ ಮನೆ, ಕಚೇರಿ ನಿಭಾಯಿಸುವುದು ಕಷ್ಟವಾಗಿಬಿಡುತ್ತದೆ. ಆಗ ಕುಟುಂಬವನ್ನೇ ಅವರು ಆಯ್ಕೆ ಮಾಡಿಕೊಂಡು ತಮ್ಮ ಕನಸುಗಳನ್ನು ಕನಸಾಗಿಯೇ ಉಳಿಸಿಕೊಂಡುಬಿಡುತ್ತಾರೆ.  ಯುಕೆ ಮೂಲದ ಈ ಮಹಿಳೆ ಹೆಸರು ರೋಮಾ ನಾರ್ರಿಸ್​ ಆಕೆಗೆ 40 ವರ್ಷ.

ಈ ಮಹಿಳೆ ಎರಡು ಮಕ್ಕಳ ತಾಯಿ, ಆಫೀಸಿಗೆ ಹೋಗುವ ತಲೆ ಬಿಸಿ ಇಲ್ಲ, ಮನೆಯಲ್ಲೇ ಆರಂವಾಗಿ ಕುಳಿತು ವರ್ಷಕ್ಕೆ 50 ಲಕ್ಷ ರೂ. ಸಂಪಾದಿಸುತ್ತಾರೆ. ಕೇವಲ ಆರು ಗಂಟೆ ಮಾತ್ರ ಅವರು ಕೆಲಸ ಮಾಡುತ್ತಾರೆ. ನಿಮ್ಮ ಶಿಕ್ಷಣ ಹೆಚ್ಚಿದ್ದಷ್ಟೂ ಉದ್ಯೋಗವೂ ಉತ್ತಮವಾಗಿರುತ್ತದೆ, ರೊಮಾ ನಾರ್ರಿಸ್ ಎಂಬ ಮಹಿಳೆಗೆ ಯಾವ ಪದವಿಯೂ ಇಲ್ಲ, ಡಿಪ್ಲೊಮಾವನ್ನೂ ಮಾಡಿಲ್ಲ. ಕಳೆದ 17 ವರ್ಷಗಳಿಂದ ಪೋಷಕರ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಅವರ ಅಂದುಕೊಂಡಂತೆ ವಿದ್ಯಾಭ್ಯಾಸ ಮಾಡಲು ಸಾರ್ಧಯವಾಗಿರಲಿಲ್ಲ, ಅವರಿಗೆ ಈಗ ಯಾವ ಪದವಿಯ ಅವಶ್ಯಕತೆಯೂ ಇಲ್ಲ. ಅವರು ಪ್ರತಿ ಗಂಟೆಗೆ 29,000 ಸಾವಿರವನ್ನು ಸುಲಭವಾಗಿ ಗಳಿಸುತ್ತಿದ್ದಾರೆ.

ಮತ್ತಷ್ಟು ಓದಿ: ಶ್ರೀಮಂತರನ್ನು ಬಲೆಗೆ ಬೀಳಿಸುವುದು ಹೇಗೆ? ಲವ್‌ ಟಿಪ್ಸ್‌ ಕೊಟ್ಟು ವರ್ಷಕ್ಕೆ 162 ಕೋಟಿ ರೂ. ಗಳಿಸುವ ಲವ್‌ ಗುರು

ಪೋಷಕರಾಗುವ ಹೊಸ್ತಿಲಲ್ಲಿ ಇರುವವರಿಗೆ ಇವರು ಸಹಾಯ ಮಾಡುತ್ತಾರೆ, ಮಕ್ಕಳ ಆರೈಕೆ ಅವರ ಓದು, ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು, ಗರ್ಭಿಣಿಯಾದಾಗಿನಿಂದ ಮಗು ದೊಡ್ಡದಾಗುವವರೆಗೂ ಎಲ್ಲಾ ವಿಚಾರಗಳ ಕುರಿತು ಇವರು ಸಲಹೆ ನೀಡುತ್ತಾರೆ. ಜನರು ಆನ್​ಲೈನ್​ನಲ್ಲಿ ಸಲಹೆ ಪಡೆದು ಜನರು ಶುಲ್ಕ ಪಾವತಿಸುತ್ತಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ