AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಮಂತರನ್ನು ಬಲೆಗೆ ಬೀಳಿಸುವುದು ಹೇಗೆ? ಲವ್‌ ಟಿಪ್ಸ್‌ ಕೊಟ್ಟು ವರ್ಷಕ್ಕೆ 162 ಕೋಟಿ ರೂ. ಗಳಿಸುವ ಲವ್‌ ಗುರು

Chinese Love Guru: ಇತ್ತೀಚಿನ ದಿನಗಳಲ್ಲಿ ಕೆಲ ಜನರು ತಮ್ಮ ಪ್ರತಿಭೆಯ ಮೂಲಕವೇ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ಗಳಲ್ಲಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಆದ್ರೆ ಲವ್‌ ಗುರು ಎಂದೇ ಖ್ಯಾತಿ ಪಡೆದಿರುವ ಹಾಗೂ ತನ್ನ ವಿವಾದಾತ್ಮಕ ಟಿಪ್ಸ್‌ಗಳಿಗೆ ಹೆಸರುವಾಸಿಯಾಗಿರುವ ಚೀನಾದ ಇನ್‌ಫ್ಲುಯೆನ್ಸರ್‌ ಒಬ್ಬಳು ಶ್ರೀಮಂತ ಹುಡುಗರನ್ನು ಪಟಾಯಿಸಿ ಮದುವೆಯಾಗುದು ಹೇಗೆ ಎಂದು ಯುವತಿಯರಿಗೆ ಟಿಪ್ಸ್‌ ನೀಡುವ ಮೂಲಕ ಮೂಲಕ ವರ್ಷಕ್ಕೆ ಕೋಟಿ ಗಟ್ಟಲೆ ಹಣವನ್ನು ಸಂಪಾದಿಸುತ್ತಿದ್ದಾಳೆ.

ಶ್ರೀಮಂತರನ್ನು ಬಲೆಗೆ ಬೀಳಿಸುವುದು ಹೇಗೆ? ಲವ್‌ ಟಿಪ್ಸ್‌ ಕೊಟ್ಟು ವರ್ಷಕ್ಕೆ 162 ಕೋಟಿ ರೂ. ಗಳಿಸುವ ಲವ್‌ ಗುರು
ಚೀನಾ ಲವ್​ಗುರು
ಮಾಲಾಶ್ರೀ ಅಂಚನ್​
| Edited By: |

Updated on: Jul 16, 2024 | 2:03 PM

Share

ಜಗತ್ತಿನಲ್ಲಿ ಎಲ್ಲಾ ರೀತಿಯ ಉದ್ಯೋಗಗಳೂ ಇವೆ. ಕೆಲವರು ಕಷ್ಟ ಪಟ್ಟು ಹಣ ಸಂಪಾದಿಸಿದರೆ, ಇನ್ನೂ ಕೆಲವರು ತಮ್ಮ ಟ್ಯಾಲೆಂಟ್‌ ಅನ್ನು ಉಪಯೋಗಿಸಿಕೊಂಡು ಯುಟ್ಯೂಬ್‌ ಮತ್ತಿತರೆ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ಗಳಲ್ಲಿ ವ್ಲಾಗ್‌, ವಿಡಿಯೋಗಳನ್ನು ಹರಿ ಬಿಡುವ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಾರೆ. ಅದೇ ರೀತಿ ಇಲ್ಲೊಂದು ಇನ್‌ಫ್ಲುಯೆನ್ಸರ್ ಯುವತಿಯರಿಗೆ ಶ್ರೀಮಂತ ವ್ಯಕ್ತಿಯನ್ನು ಬುಟ್ಟಿಗೆ ಬೀಳಿಸಿ ಮದುವೆಯಾಗುವುದು ಹೇಗೆ ಎಂಬ ಟಿಪ್ಸ್‌ ನೀಡುವ ಮೂಲಕವೇ ವರ್ಷಕ್ಕೆ ಕೋಟಿಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಿದಾಳೆ. ಇದೀಗ ಈಕೆಯ ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ.

ಚೀನಾದ ಚುವಾನ್‌ ಕ್ಯು ಅಲಿಯಾಸ್‌ ಕ್ಯುಕ್ಯು ಬಿಗ್‌ ವುಮನ್‌ ಪ್ರಖ್ಯಾತ ಇನ್‌ಫ್ಲುಯೆನ್ಸರ್‌ಗಳಲ್ಲಿ ಒಬ್ಬಳಾಗಿದ್ದಾಳೆ. ಈಕೆ ಲೈವ್‌-ಸ್ಟ್ರೀಮ್‌ನಲ್ಲಿ ಹುಡುಗಿರಿಗೆ ಶ್ರೀಮಂತ ವ್ಯಕ್ತಿಗಳನ್ನು ಪಟಾಯಿಸುವುದು ಹೇಗೆ, ಆ ಮೂಲಕ ಶ್ರೀಮಂತಿಕೆಯನ್ನು ಗಳಿಸುವುದು ಹೇಗೆ ಎಂಬ ಟಿಪ್ಸ್‌ ನೀಡುವ ಮೂಲಕವೇ ವರ್ಷಕ್ಕೆ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಿದ್ದಾಳೆ. ಈಕೆ ತನ್ನ ವಿವದಾತ್ಮಕ ಟಿಪ್ಸ್‌ಗಳಿಂದಲೇ ಹೆಸರುವಾಸಿಯಾಗಿದ್ದಾಳೆ.

ಇತ್ತೀಚಿನ ವರದಿಗಳ ಪ್ರಕಾರ ಕ್ಯುಕ್ಯು ಬಿಗ್‌ ವುಮನ್‌ ತನ್ನ ಲೈವ್‌ ಸ್ಟ್ರೀಮ್‌ ಭೋದನೆಗಳ ಮೂಲಕ ವಾರ್ಷಿಕವಾಗಿ $19 ಮಿಲಿಯನ್‌ ಡಾಲರ್‌ (ಅಂದಾಜು 163 ಕೋಟಿ ರೂ.) ಗಳಿಸುತ್ತಾಳಂತೆ. ಆಕೆ ಲೈವ್‌ ಸ್ಟ್ರೀಮ್‌ನಲ್ಲಿ ಪ್ರೀತಿಸುವ ಹುಡುಗನನ್ನು ಹೇಗೆ ಆಯ್ಕೆ ಮಾಡಬೇಕು ವಿಶೇಷವಾಗಿ ಶ್ರೀಮಂತ ವ್ಯಕ್ತಿಯನ್ನು ಹೇಗೆ ಪಟಾಯಿಸಬೇಕು ಆ ಮೂಲಕ ಸುಲಭ ದಾರಿಯಲ್ಲಿ ಶ್ರೀಮಂತಿಕೆಯನ್ನು ಹೇಗೆ ಗಳಿಸಬಹುದು ಎಂಬ ವಿವಾದಾತ್ಮಕ ಟಿಪ್ಸ್‌ಗಳನ್ನೇ ನೀಡುತ್ತಿರುತ್ತಾಳೆ.

ಮತ್ತಷ್ಟು ಓದಿ: Viral Video: ಫೋಟೋ ಶೂಟ್‌ ವೇಳೆ ಬಂದ ರೈಲು, ಪ್ರಾಣ ಉಳಿಸಿಕೊಳ್ಳಲು ಕಂದಕಕ್ಕೆ ಹಾರಿದ ದಂಪತಿ; ವಿಡಿಯೋ ವೈರಲ್‌

ಈಕೆಯ ಈ ನಡೆಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾದರೂ ಚೀನಾದಲ್ಲಿ ಆಕೆಯ ಜನಪ್ರಿಯತೆ ಕಡಿಮೆಯಾಗಿಲ್ಲ. ಹೌದು ಈಗಲೂ ಆಕೆ ಮಹಿಳೆಯರಿಗೆ ಶ್ರೀಮಂತ ವ್ಯಕ್ತಿಯನ್ನು ಪಟಾಯಿಸುವ ಟಿಪ್ಸ್‌ ನೀಡುವ ಮೂಲಕ ಕೋಟಿಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಿದ್ದಾಳೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!